ತುಮಕೂರು ಜಿಲ್ಲಾಧಿಕಾರಿ ಕಚೇರಿಗೆ Bomb Threat ಬಂದಿದೆ.

ಬೆಂಗಳೂರು ಹಾಗೂ ಮಂಗಳೂರು ಬಳಿಕ ಈಗ ತುಮಕೂರು ಜಿಲ್ಲಾಧಿಕಾರಿ ಕಚೇರಿಗೂ ಬಾಂಬ್ ಬೆದರಿಕೆ (Bomb Threat) ಬಂದಿರುವ ಘಟನೆ ಆತಂಕ ಸೃಷ್ಟಿಸಿದೆ. ಅಪರಿಚಿತರಿಂದ ಇ-ಮೇಲ್ ಮೂಲಕ ಬಾಂಬ್ ಇಟ್ಟು ಸ್ಫೋಟಿಸುವುದಾಗಿ ಬೆದರಿಕೆ ನೀಡಲಾಗಿದೆ.
ಬೆಳಗ್ಗೆ 6.59ಕ್ಕೆ ಡಿಸಿ ಕಚೇರಿ ಇ- ಮೇಲ್ ಗೆ ರವಾನೆ
ಇಂದು ಬೆಳಗ್ಗೆ 6.59ರ ಸುಮಾರಿಗೆ ತುಮಕೂರು ಜಿಲ್ಲಾಧಿಕಾರಿ ಕಚೇರಿಯ ಅಧಿಕೃತ ಇ-ಮೇಲ್ ಐಡಿಗೆ Bomb Threat ಸಂದೇಶ ರವಾನೆಯಾಗಿದ್ದು, ಮಾಹಿತಿ ಪಡೆದ ತಕ್ಷಣ ಜಿಲ್ಲಾಧಿಕಾರಿ ಶುಭಾಕಲ್ಯಾಣ್ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಇದನ್ನು ಓದಿ : ಮಂಗಳೂರಲ್ಲಿ 5 ಕಡೆ ಬಾಂಬ್ ಇಡೋದಾಗಿ ಬೆದರಿಕೆ
ಪೊಲೀಸರು ಅಲರ್ಟ್, ಡಿಸಿ ಕಚೇರಿ ಸುತ್ತ ಖಾಕಿ ಸರ್ಪಗಾವಲು
ಬೆದರಿಕೆ ಮಾಹಿತಿ ಬಂದ ಕೂಡಲೇ ಪೊಲೀಸರು ಹಾಗೂ ಬಾಂಬ್ ಸ್ಕ್ವಾಡ್ ಅಧಿಕಾರಿಗಳು Alert ಆಗಿದ್ದು, ಜಿಲ್ಲಾಧಿಕಾರಿ ಕಚೇರಿ ಸುತ್ತ ಖಾಕಿ ಸರ್ಪಗಾವಲು ನಿರ್ಮಿಸಲಾಗಿದೆ. DC ಕೊಠಡಿ, ಆಪ್ತ ಸಹಾಯಕರ ಕಚೇರಿ ಸೇರಿದಂತೆ ಸಂಪೂರ್ಣ ಕಟ್ಟಡದಲ್ಲಿ ತೀವ್ರ ಪರಿಶೀಲನೆ ನಡೆಸಲಾಗಿದೆ.
ಸ್ಥಳದಲ್ಲೇ ಬೀಡು ಬಿಟ್ಟಿರುವ ತುಮಕೂರು ಸಬ್ ಡಿವಿಷನ್ ಪೊಲೀಸರು
ಡಿಸಿ ಕಚೇರಿಯ ಮುಖ್ಯ ಗೇಟ್ನಲ್ಲಿ ಒಬ್ಬೊಬ್ಬರನ್ನೇ ಒಳಗೆ ಬಿಡಲಾಗುತ್ತಿದ್ದು, ಕಟ್ಟುನಿಟ್ಟಾದ ತಪಾಸಣೆ ನಡೆಯುತ್ತಿದೆ. ಸ್ಥಳದಲ್ಲೇ ತುಮಕೂರು ಸಬ್ ಡಿವಿಷನ್ ಪೊಲೀಸರು ಬೀಡು ಬಿಟ್ಟಿದ್ದು, ಸಂಪೂರ್ಣ ಪ್ರದೇಶವನ್ನು ತಮ್ಮ ವಶದಲ್ಲಿಟ್ಟುಕೊಂಡಿದ್ದಾರೆ.

100ಕ್ಕೂ ಹೆಚ್ಚು ಪೊಲೀಸರ ನಿಯೋಜನೆ
ಇನ್ನು ಡಿವೈಎಸ್ಪಿ ಚಂದ್ರಶೇಖರ್, ಇನ್ಸ್ಪೆಕ್ಟರ್ ಅವಿನಾಶ್, ಸಬ್ ಇನ್ಸ್ಪೆಕ್ಟರ್ ಚೇತನ್ ಸೇರಿದಂತೆ ಹಿರಿಯ ಅಧಿಕಾರಿಗಳು ಹಾಗೂ ಬಾಂಬ್ ಸ್ಕ್ವಾಡ್ ತಂಡದಿಂದ ಇಂಚಿಂಚೂ ಜಾಗ ಬಿಡದೇ ಪರಿಶೀಲನೆ ನಡೆಯುತ್ತಿದೆ. ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ 100ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.
ಇನ್ನು ಸದ್ಯ ಯಾವುದೇ ಅನುಮಾನಾಸ್ಪದ ವಸ್ತು ಪತ್ತೆಯಾಗಿಲ್ಲವಾದರೂ, ಮುನ್ನೆಚ್ಚರಿಕಾ ಕ್ರಮವಾಗಿ ಭದ್ರತೆ ಮುಂದುವರಿಸಲಾಗಿದೆ.
ಇದನ್ನು ನೋಡಿ : ಅಕ್ರಮ ಸಂಬಂಧಕ್ಕೆ ಚಾಕು ಇರಿತ – ಅಪ್ಪನ ಎದುರೇ ಕೊಲೆ ಮಾಡಲು ಯತ್ನ





