ಸಾಲು ಸಾಲು ಅಹಿತಕರ ಘಟನೆಗಳ ಬಗ್ಗೆ ಶಾಂತವಾಗಿರುವ ಮಂಗಳೂರಿಗೂ Bomb Threat ಬಂದಿದೆ.

ರಾಜ್ಯಾದ್ಯಂತ ಕ್ರಿಸ್ಮಸ್ ಹಾಗೂ ಹೊಸ ವರ್ಷದ ಸಂಭ್ರಮಾಚರಣೆಗೆ ಭರ್ಜರಿ ಸಿದ್ಧತೆಗಳು ನಡೆಯುತ್ತಿವೆ. ಇದೇ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಲು ಪೊಲೀಸ್ ಇಲಾಖೆ ಫುಲ್ ಅಲರ್ಟ್ನಲ್ಲಿದೆ. ಇಂತಹ ಸಮಯದಲ್ಲೇ ಹೊಸ ವರ್ಷಕ್ಕೂ ಮುನ್ನ ಬಾಂಬ್ ಬೆದರಿಕೆ (Bomb Threat) ಸಂದೇಶಗಳು ಬಂದಿದ್ದು, ಜನರಲ್ಲಿ ಭಯ ಹುಟ್ಟಿಸುವಂತಾಗಿದೆ.
RTO ಕಚೇರಿಗೆ ಬಾಂಬ್ ಬೆದರಿಕೆ
ಮಂಗಳೂರಿಗೆ ಬಾಂಬ್ ಬೆದರಿಕೆ ಇ-ಮೇಲ್ಗಳು ಬಂದಿದೆ. ಮಂಗಳೂರಿನ RTO ಕಚೇರಿಯ ಅಧಿಕೃತ ಇ-ಮೇಲ್ಗೆ ಕಿಡಿಗೇಡಿಗಳಿಂದ Bomb Threat ಸಂದೇಶ ಬಂದಿದೆ. ಒಂದಲ್ಲ,ಎರಡಲ್ಲ ಐದು ಕಡೆಗಳಲ್ಲಿ ಬಾಂಬ್ ಇಟ್ಟು ಸ್ಫೋಟಗೊಳಿಸುವುದಾಗಿ ಮೇಲ್ನಲ್ಲಿ ಉಲ್ಲೇಖಿಸಲಾಗಿದೆ.
ಇದನ್ನು ಓದಿ : ಅಪಘಾತ ರಹಿತ ಸೇವೆ- KSRTC ಚಾಲಕರಿಗೆ ಪ್ರೋತ್ಸಾಹ ಧನ ಹೆಚ್ಚಳ.!
ಪೊಲೀಸರು ಅಲರ್ಟ್
ಇನ್ನು ಮಂಗಳೂರಿನ ನೆಹರೂ ಮೈದಾನದ ಸಮೀಪ ಇರುವ ಆರ್.ಟಿ.ಓ ಕಚೇರಿಗೆ ಈ ಬೆದರಿಕೆ ಸಂದೇಶ ಬಂದಿದ್ದು, ತಕ್ಷಣವೇ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇ-ಮೇಲ್ನ ವಿಷಯ ಗಮನಿಸಿದ ಪೊಲೀಸರು ತಕ್ಷಣವೇ Alert ಆಗಿದ್ದು, ಕಚೇರಿ ಸುತ್ತಮುತ್ತ ಭದ್ರತೆ ಹೆಚ್ಚಿಸಲಾಗಿದೆ.
ಶೋಧ ಕಾರ್ಯಾಚರಣೆ ಆರಂಭ
ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ಬಾಂಬ್ ಸ್ಕ್ವಾಡ್ ಹಾಗೂ ಶ್ವಾನ ದಳದಿಂದ ಪರಿಶೀಲನೆ ನಡೆಸಲಾಗಿದ್ದು, ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ. ಆದರೆ ಸಂದೇಶ ಕಳುಹಿಸಿದವರ ಪತ್ತೆಗೆ ಪೊಲೀಸರು ವಿಶೇಷ ತಂಡ ರಚಿಸಿ ತನಿಖೆ ಆರಂಭಿಸಿದ್ದಾರೆ.
ಹೊಸ ವರ್ಷದ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಕಟ್ಟುನಿಟ್ಟಿನ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಸಾರ್ವಜನಿಕರು ಯಾವುದೇ ಅನುಮಾನಾಸ್ಪದ ಮಾಹಿತಿ ಕಂಡಲ್ಲಿ ತಕ್ಷಣ ಪೊಲೀಸರಿಗೆ ತಿಳಿಸುವಂತೆ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನು ನೋಡಿ : SARASVATHI PURAM BUS STOP ಕರ್ಮಕಾಂಡ ನಿತ್ಯ ಜೀವ ಭಯಲ್ಲಿಯೇ ನಿಲ್ಲುವ ಪ್ರಯಾಣಿಕರು




