ವಿರಾಜಪೇಟೆ ಬಳಿ ಹೊತ್ತಿ ಉರಿದ Bus – ತಪ್ಪಿದ ಭಾರೀ ದುರಂತ.

ಪ್ರವಾಸಿ ಬಸ್ಸೊಂದು ನಡು ರಸ್ತೆಯಲ್ಲೇ ಧಗಧಗನೆ ಹೊತ್ತಿ ಉರಿದ ಘಟನೆ ಮಡಿಕೇರಿ (Madikeri) ಯ ವಿರಾಜಪೇಟೆ ತಾಲ್ಲೂಕಿನ ಮಾಕುಟ್ಟ ಸಮೀಪದ ಮಗಡಿಪಾರೆ ಆಂಜನೇಯ ದೇವಾಲಯದ ಬಳಿ ಇಂದು ನಡೆದಿದೆ.
ಅವಘಡ ಹೇಗೆ ಸಂಭವಿಸಿತು?
ಕೇರಳ ನೋಂದಣಿಯ ಖಾಸಗಿ ಪ್ರವಾಸಿ Bus ಇದಾಗಿದ್ದು, ಪ್ರವಾಸಿಗರನ್ನು ಮೈಸೂರಿನಲ್ಲಿ ಇಳಿಸಿ ವಾಪಸ್ ತೆರಳುವಾಗ ಈ ಅವಘಡ ಸಂಭವಿಸಿದೆ. ಇನ್ನು ಈ ಅವಘಡದ ವೇಳೆ ಬಸ್ನಲ್ಲಿ ಚಾಲಕ ಮತ್ತು ನಿರ್ವಾಹಕ ಇಬ್ಬರೇ ಇದ್ದರು. ಯಾವುದೇ ಪ್ರಾಣಪಾಯ ಸಂಭವಿಸಿಲ್ಲ ಎನ್ನಲಾಗುತ್ತಿದೆ.
ಇದನ್ನು ಓದಿ : ಅಬ್ಬಬ್ಬಾ.. ಇನ್ನು ಎಷ್ಟು ದಿನ ಚಳಿ ಗುರೂ..!
ಪ್ರವಾಸಿಗರಿಲ್ಲದ ಬಸ್ನಲ್ಲಿ ಬೆಂಕಿ
ಅಕಸ್ಮಾತ್ ಬಸ್ನಲ್ಲಿ ಪ್ರವಾಸಿಗರು ಇದ್ದಿದ್ದರೆ ಭಾರೀ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು. ಘಟನೆ ಕುರಿತು ಮಾಹಿತಿ ಪಡೆದ ತಕ್ಷಣವೇ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಧಾವಿಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು.
ಸ್ಥಳಕ್ಕೆ ಪೊಲೀಸರು ಭೇಟಿ
ಇನ್ನು ಘಟನಾ ಸ್ಥಳಕ್ಕೆ ವಿರಾಜಪೇಟೆ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಅವಘಡದ ಪರಿಣಾಮವಾಗಿ ಕೊಡಗು–ಕೇರಳ ಸಂಪರ್ಕಿಸುವ ಮಾಕುಟ್ಟ ರಸ್ತೆಯಲ್ಲಿ ಕೆಲಕಾಲ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.
ಇದನ್ನು ನೋಡಿ : ಶ್ಯಾಮನೂರು ಶಿವಶಂಕರಪ್ಪ ವಿಧಿವಶ ಇಂದು ದಾವಣಗೆರೆ ಧಣಿಯ ಅಂತ್ಯಕ್ರಿಯೆ




