Raichur : ಪ್ರೇಯಸಿಗೆ ಕೈಕೊಡಲು ಮುಂದಾಗಿದ್ದ ಪಾಪಿ.

Raichur : ಇಲ್ಲೊಬ್ಬ ಪ್ರೇಮಿ, ಲವ್ ಮಾಡಿ, ದೈಹಿಕ ಸಂಪರ್ಕ ಬೆಳಸಿ, ಸಾಲದಕ್ಕೆ ಅಬಾರ್ಷನ್ ಮಾಡಿಸಿ ಈಗ ಪ್ರೇಯಸಿಗೆ ಕೈಕೊಟ್ಟು ಮತ್ತೊಂದು ಮದುವೆ ಆಗಲು ಹೋಗಿದ್ದ. ಆದ್ರೆ ಪ್ರೇಮಿಯ ಕಿರಾತಕ ಬುದ್ಧಿ ಗೊತ್ತಾಗಿ ಸೀದಾ ಹೋಗಿ ಮದುವೆ ನಿಲ್ಲಿಸಿದ್ದಾಳೆ. ಈ ವಿಚಿತ್ರ ಘಟನೆ ನಡೆದಿರೋದು ರಾಯಚೂರಿನಲ್ಲಿ.
ದೈಹಿಕ ಸಂಪರ್ಕ ಬೆಳೆಸಿ, ಗರ್ಭಪಾತ ಮಾಡಿಸುವ ಆರೋಪ
ಪ್ರಿಯಕರನ ಹೆಸರು ರಿಷಬ್ ಅಂತಾ, ಕೊಪ್ಪಳದ ಯುವತಿಯನ್ನು ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ, ಗರ್ಭಪಾತ ಮಾಡಿಸುವ ಆರೋಪ ಕೇಳಿ ಬಂದಿದೆ.
ರಾಯಚೂರು ಮೂಲದ ಯುವಕ ರಿಷಬ್ ಹಾಗೂ ಸಂತ್ರಸ್ತ ಯುವತಿ ಇಬ್ಬರು ಬಳ್ಳಾರಿಯಲ್ಲಿ ಓದುತ್ತಿದ್ದ ವೇಳೆ ಪರಿಚಯವಾಗಿತ್ತು. ಆ ಪರಿಚಯ ಪ್ರೀತಿಗೆ ತಿರುಗಿತ್ತು. ಆ ಬಳಿಕ ಯುವಕ ರಿಷಬ್ ಯುವತಿಯನ್ನು ಬಲವಂತವಾಗಿ ಲೈಂಗಿಕವಾಗಿ ಬಳಸಿಕೊಂಡು, ಬಳಿಕ ಮದುವೆ ಆಗುವುದಾಗಿ ನಂಬಿಸಿ ಗರ್ಭಪಾತವನ್ನು ಮಾಡಿಸಿದ್ದನಂತೆ.

ಇದನ್ನು ಓದಿ : ಶಿರಾ ಪೊಲೀಸ್ ಠಾಣೆ ವತಿಯಿಂದ ಅಪರಾಧ ತಡೆ ಮಾಸಾಚರಣೆ
ಹಸೆಮಣೆ ಏರಲು ಮುಂದಾಗಿದ್ದ ಪ್ರೇಮಿಗೆ ಶಾಕ್ ಕೊಟ್ಟ ಪ್ರೇಯಸಿ
ಇನ್ನು ಹೇಗಾದ್ರು ಮಾಡಿ ಯುವತಿಯನ್ನು Avoid ಮಾಡಬೇಕೆಂದು ಸಂತ್ರಸ್ತೆಯನ್ನು ದೇವಸ್ಥಾನಕ್ಕೆ ಕರೆದೊಯ್ದು ಮದುವೆಯನ್ನು ಆಗಿದ್ದಾನೆ. ಬಳಿಕ ಕೆಲ ದಿನಗಳ ಬಳಿಕ ರಾಯಚೂರು ನಗರದಲ್ಲಿ ರಿಷಬ್ ಬೇರೊಬ್ಬ ಯುವತಿಯನ್ನು ಮದುವೆಗೆ ಸಿದ್ಧತೆ ಮಾಡಿಕೊಂಡಿದ್ನಂತೆ.
ಇನ್ಸ್ಟಾ ಗ್ರಾಂನಲ್ಲಿ ಪ್ರಿಯಕರನ ಮದುವೆ ಆಮಂತ್ರಣ ಪತ್ರಿಕೆಯನ್ನು ನೋಡಿದ ಯುವತಿಗೆ ಶಾಕ್ ಆಗಿದ್ದು, ಕೂಡಲೇ ರಾಯಚೂರಿಗೆ ಓಡೋಡಿ ಬಂದ ಪ್ರಿಯತಮೆ, ಇನ್ನೇನು ತಾಳಿ ಕಟ್ಟುವ ಟೈಂಗೆ ಸರಿಯಾಗಿ ಸಿನಿಮಾ ಸ್ಮೈಲ್ನಲ್ಲಿ ಮದುವೆಯನ್ನು ನಿಲ್ಲಿಸಿದ್ದಾಳೆ.

ಪೊಲೀಸರ ಮಧ್ಯಸ್ಥಿಕೆಯಿಂದ ಪ್ರಕರಣ ಸುಖಾಂತ್ಯ
ಇನ್ನು ಈ ಸಂಬಂಧ ರಾಯಚೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಯುವತಿ ದೂರು ದಾಖಲಿಸಿದ್ದು, ಪೊಲೀಸರು ಮಧ್ಯ ಪ್ರವೇಶಿಸಿದ್ದು ಪ್ರಕರಣವನ್ನು ಸುಖಾಂತ್ಯ ಕಂಡಿದೆ. ಮೋಸ ಮಾಡಲು ಮುಂದಾಗಿದ್ದ ಯುವಕ ರಿಷಬ್, ಸಂತ್ರಸ್ತ ಯುವತಿ ಜೊತೆ ಬಾಳಲು ನಿರ್ಧರಿಸಿದ್ದಾನೆ.
ಅದೇನೆ ಆಗಲಿ ಪ್ರೀತಿಸಿದ ಯುವತಿಗೆ ಕೈಕೊಟ್ಟು, ಮತ್ತೊಂದು ಮದುವೆ ಆಗಲು ಹೋಗಿದ್ದು ಮಾತ್ರ ದುರಂತ. ಆದ್ರೆ ಸಂತ್ರಸ್ತ ಯುವತಿಯ ಹೋರಾಟದಿಂದ ಯುವತಿಯ ಬಾಳಿಗೆ ದಾರಿ ಸಿಕ್ಕಿದ್ದು, ಇವರಿಬ್ಬರ ಜೀವನ ಚೆನ್ನಾಗಿರಲಿ ಅನ್ನೋದು ಕುಟುಂಬಸ್ಥರ ಆಶಯವಾಗಿದೆ.
ಇದನ್ನು ನೋಡಿ : ತುಮಕೂರಿನ ಜನರಿಗಾಗಿ ಕೆಲಸ ಮಾಡ್ತಿದ್ದೀನಿ ಜಿಲ್ಲೆಯ ಅಭಿವೃದ್ಧಿ ನನ್ನ ಗುರಿ ಎಂದ V SOMANNA





