Malayalam ಚಿತ್ರರಂಗದ ಜನಪ್ರಿಯ ನಟ ಅಖಿಲ್ ವಿಶ್ವನಾಥ್ (Akhil Viswanath) ಅವರು ತ್ರಿಶೂರ್ನ ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

Malayalam actor ಅಪಾರ್ಟ್ಮೆಂಟ್ನಲ್ಲಿ ಮೃತದೇಹ -ಆತ್ಮಹತ್ಯೆ ಶಂಕೆ
ಮಲಯಾಳಂ ಚಿತ್ರರಂಗದ ಜನಪ್ರಿಯ ನಟ ಅಖಿಲ್ ವಿಶ್ವನಾಥ್ (Akhil Viswanath) ಅವರು ಕೇರಳದ ತ್ರಿಶೂರ್ನಲ್ಲಿರುವ ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಚಿತ್ರರಂಗ ಮತ್ತು ಅಭಿಮಾನಿಗಳನ್ನು ಬೆಚ್ಚಿಬೀಳಿಸಿದೆ. 30 ವರ್ಷದ ಅಖಿಲ್ ಅವರ ಸಾವು ಆತ್ಮಹತ್ಯೆ ಆಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ.
ಅಖಿಲ್ ವಿಶ್ವನಾಥ್ ಅವರು ತಮ್ಮ ಅಪಾರ್ಟ್ಮೆಂಟ್ನಲ್ಲಿ ಕುಸಿದು ಬಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.ತಕ್ಷಣ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ವೈದ್ಯರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.
ಸಾವಿನ ನಿಖರ ಕಾರಣದ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಆದರೆ, ಆರಂಭಿಕ ವರದಿಗಳು ಆರೋಗ್ಯ ಸಮಸ್ಯೆಗಳ ಸಾಧ್ಯತೆಯನ್ನು ಸೂಚಿಸುತ್ತಿವೆ.
ಇದನ್ನು ಓದಿ : ಧುರಂಧರ್ ಎದುರು ಮಂಕಾದ Devil
ಕೇರಳ ರಾಜ್ಯ ಪ್ರಶಸ್ತಿ ಪುರಸ್ಕೃತ ನಟ
ಅಖಿಲ್ ವಿಶ್ವನಾಥ್ ಅವರು ಕೇರಳ ರಾಜ್ಯ ಪ್ರಶಸ್ತಿ ಪಡೆದ ನಟರಾಗಿದ್ದು, ತಮ್ಮ ಅಭಿನಯದಿಂದ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದರು.
ಅವರ ಅಕಾಲಿಕ ಸಾವು ಮಲಯಾಳಂ ಚಲನಚಿತ್ರೋದ್ಯಮಕ್ಕೆ ಭಾರೀ ಆಘಾತವನ್ನುಂಟುಮಾಡಿದೆ.
ಅಖಿಲ್ ಅವರ ತಂದೆ ವಿಶ್ವನಾಥ್ ಇತ್ತೀಚೆಗೆ ಬೈಕ್ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.
ತಾಯಿ ಗೀತಾ, ಕೊಡಾಲಿ ವ್ಯಾಪಾರಿ ಏಕೋಪನ ಸಮಿತಿ ವ್ಯಾಪಾರಭವನದಲ್ಲಿ ಕೆಲಸ ಮಾಡುತ್ತಿದ್ದು, ಕೆಲಸಕ್ಕೆ ಹೊರಡುವ ವೇಳೆ ಮಗನನ್ನು ಮೃತಪಟ್ಟ ಸ್ಥಿತಿಯಲ್ಲಿ ಕಂಡು ತೀವ್ರ ಆಘಾತಕ್ಕೊಳಗಾಗಿದ್ದಾರೆ.
ನಿರ್ದೇಶಕ ಸನಲ್ ಕುಮಾರ್ ಶಶಿಧರನ್ ಸಂತಾಪ
ನಿರ್ದೇಶಕ ಸನಲ್ ಕುಮಾರ್ ಶಶಿಧರನ್ ಅವರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡು ಅಖಿಲ್ ಅವರ ಸಾವಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ.
ಅವರ ನಟನೆಯ ಪ್ರತಿಭೆಯನ್ನು ನೆನಪಿಸಿಕೊಂಡು, “ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ” ಎಂದು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಅಖಿಲ್ ವಿಶ್ವನಾಥ್ ಅವರ ಅಕಾಲಿಕ ಸಾವು ಮಲಯಾಳಂ ಫಿಲ್ಮ್ ಇಂಡಸ್ಟ್ರಿಯಲ್ಲಿ ಶೋಕದ ವಾತಾವರಣ ಸೃಷ್ಟಿಸಿದೆ.
ಪೊಲೀಸರು ಪ್ರಕರಣದ ಕುರಿತು ತನಿಖೆ ಮುಂದುವರಿಸಿದ್ದು, ಸಾವಿನ ನಿಖರ ಕಾರಣದ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ಇದನ್ನು ನೋಡಿ : ಲೋಕಸಭೆಯಲ್ಲಿ ಸೋಮಣ್ಣ ಬೆನ್ನಿಗೆ ನಿಂತವರು ಯಾರು..?- ಮುದ್ದಹನುಮೇ ಗೌಡ ಸೋಲಿಗೆ ಇವ್ರೆ ಕಾರಣನಾ..?




