Devil 3ನೇ ದಿನದ ಕಲೆಕ್ಷನ್ ಎಷ್ಟು ?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ದಿ ಡೆವಿಲ್’ (Devil) ಡಿಸೆಂಬರ್ 11ರಂದು ಅದ್ದೂರಿಯಾಗಿ ತೆರೆಕಂಡಿತ್ತು. ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆ ಹುಟ್ಟಿಸಿದ್ದ ಈ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸಲಿದೆ ಎನ್ನಲಾಗಿತ್ತು. ನಿರೀಕ್ಷೆಯಂತೆ ಮೊದಲ ದಿನ ಸಿನಿಮಾ ಉತ್ತಮ ಕಲೆಕ್ಷನ್ ದಾಖಲಿಸಿತ್ತು. ಆದರೆ ನಂತರದ ದಿನಗಳಲ್ಲಿ ಚಿತ್ರದ ಆದಾಯದಲ್ಲಿ ಕುಸಿತ ಕಂಡುಬಂದಿದೆ.

Devil 3ನೇ ದಿನದ ಕಲೆಕ್ಷನ್ ಎಷ್ಟು?
sacnilk ವರದಿ ಪ್ರಕಾರ, ‘ದಿ ಡೆವಿಲ್’ ಮೊದಲ ದಿನ ಸುಮಾರು 10 ಕೋಟಿ ರೂ. ಗಳಿಸಿದೆ. ಆದರೆ ಚಿತ್ರತಂಡವು 13.8 ಕೋಟಿ ರೂ. ಕಲೆಕ್ಷನ್ ಆಗಿದೆ ಎಂದು ಅಧಿಕೃತವಾಗಿ ಘೋಷಿಸಿತ್ತು. ಎರಡನೇ ದಿನ ಸಿನಿಮಾ 3.4 ಕೋಟಿ ರೂ., ಮೂರನೇ ದಿನ ಅಂದಾಜು 3.75 ಕೋಟಿ ರೂ. ಗಳಿಸಿದೆ. ಮೊದಲ ದಿನದ ಭರ್ಜರಿ ಓಪನಿಂಗ್ಗೆ ಹೋಲಿಸಿದರೆ ಎರಡನೇ ಹಾಗೂ ಮೂರನೇ ದಿನಗಳ ಕಲೆಕ್ಷನ್ ಗಣನೀಯವಾಗಿ ಇಳಿಕೆಯಾಗಿದೆ.
ಇದನ್ನು ಓದಿ : ಮೆಸ್ಸಿ ಜೊತೆ ಮಗನನ್ನು ನಿಲ್ಲಿಸಿ ಫೋಟೋ ಕ್ಲಿಕ್ಕಿಸಿದ ಶಾರುಖ್ ಖಾನ್

ಧುರಂಧರ್ ಎದುರು ಮಂಕಾದ ‘ದಿ ಡೆವಿಲ್
ವಾರಾಂತ್ಯದಲ್ಲೂ ನಿರೀಕ್ಷಿತ ಮಟ್ಟದ ದೊಡ್ಡ ಮೊತ್ತವನ್ನು ಸಿನಿಮಾ ಕಲೆ ಹಾಕಲು ಸಾಧ್ಯವಾಗಿಲ್ಲ. ಇದಕ್ಕೆ ಕೆಲವು ಪ್ರಮುಖ ಕಾರಣಗಳು ಎನ್ನಲಾಗುತ್ತಿದೆ. ಈಗಾಗಲೇ Devil ಚಿತ್ರದ ಪೈರಸಿ ಕಾಪಿಗಳು ಹರಿದಾಡುತ್ತಿರುವುದು ಚಿತ್ರಮಂದಿರಗಳ ಮೇಲೆ ಪರಿಣಾಮ ಬೀರಿರುವ ಸಾಧ್ಯತೆ ಇದೆ. ಪೈರಸಿಯ ಹಾವಳಿಯನ್ನು ತಡೆಯಲು ಚಿತ್ರತಂಡ ಎಷ್ಟೇ ಪ್ರಯತ್ನಪಟ್ಟರೂ ಅದನ್ನು ಸಂಪೂರ್ಣವಾಗಿ ನಿಯಂತ್ರಿಸಲು ಸಾಧ್ಯವಾಗಿಲ್ಲ ಎಂಬುದು ಸಿನಿ ವಲಯದಲ್ಲಿ ಬೇಸರ ಮೂಡಿಸಿದೆ.

ಬಾಕ್ಸ್ ಆಫೀಸ್ನಲ್ಲಿ ಉತ್ತಮ ಪ್ರದರ್ಶನ
ಇದರ ಜೊತೆಗೆ, ಬೇರೆ ಭಾಷೆಯ ಸಿನಿಮಾಗಳಿಂದಲೂ ಪೈಪೋಟಿ ಎದುರಾಗುತ್ತಿದೆ. ವಿಶೇಷವಾಗಿ ಹಿಂದಿಯ ‘ಧುರಂಧರ್’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದು, ಪ್ರೇಕ್ಷಕರ ಗಮನವನ್ನು ಸೆಳೆಯುತ್ತಿದೆ. ಈ ಎಲ್ಲಾ ಕಾರಣಗಳು ಸೇರಿ ‘ದಿ ಡೆವಿಲ್’ ಸಿನಿಮಾದ ಕಲೆಕ್ಷನ್ ಮೇಲೆ ಪರಿಣಾಮ ಬೀರಿವೆ ಎಂದು ಹೇಳಲಾಗುತ್ತಿದೆ.

ಇದನ್ನು ನೋಡಿ : CRAZY GILLI FAN | ತುಮಕೂರಿನಲ್ಲೋಬ್ಬ ಗಿಲ್ಲಿ ಅಭಿಮಾನಿ – ಈತನ ಅಭಿಮಾನ ನೋಡಿ ಹೇಗಿದೆ




