ಮಗನೊಂದಿಗೆ Messi ಯನ್ನು ಭೇಟಿಯಾದ ಶಾರುಖ್ ಖಾನ್.

ಅರ್ಜೆಂಟೀನಾದ ಫುಟ್ಬಾಲ್ ದಿಗ್ಗಜ ಲಿಯೋನೆಲ್ Messi ಸುಮಾರು 14 ವರ್ಷಗಳ ನಂತರ ಭಾರತಕ್ಕೆ ಆಗಮಿಸಿದ್ದಾರೆ. ಇಂದು ಬೆಳಿಗ್ಗೆ 11 ಗಂಟೆಗೆ ಕೋಲ್ಕತ್ತಾದಲ್ಲಿ ಮೆಸ್ಸಿ ತಮ್ಮ 70 ಅಡಿ ಎತ್ತರದ ಪ್ರತಿಮೆಯನ್ನು ಉದ್ಘಾಟಿಸಿದರು. ಈ ವಿಶೇಷ ಕಾರ್ಯಕ್ರಮದಲ್ಲಿ ಬಾಲಿವುಡ್ ಸೂಪರ್ಸ್ಟಾರ್ ಶಾರುಖ್ ಖಾನ್ ಕೂಡ ಭಾಗವಹಿಸಿದ್ದರು.
ಇದನ್ನು ಓದಿ : ಜನವರಿಯಲ್ಲಿ ಜೈಲಿನಿಂದ ಹೊರಗೆ ಬರ್ತಾರೆ ನಟ ದರ್ಶನ್..!
ಫುಟ್ಬಾಲ್ ಲೋಕದ ದಿಗ್ಗಜ ಮತ್ತು ಬಾಲಿವುಡ್ನ ಕಿಂಗ್ ಖಾನ್ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ಕ್ಷಣ ಅಭಿಮಾನಿಗಳಿಗೆ ಕನಸು ನನಸಾದಂತಾಯಿತು. ಆ ಬಳಿಕ ಮೆಸ್ಸಿಯನ್ನು ಭೇಟಿಯಾಗಲು ಬಂದ ಶಾರುಖ್ ಖಾನ್ ಅವರೊಂದಿಗೆ ಅವರ ಕಿರಿಯ ಮಗ ಅಬ್ರಹಾಂ ಖಾನ್ ಕೂಡ ಜೊತೆಗಿದ್ದರು.
ಅವರ ಭೇಟಿಯ ವೀಡಿಯೊ ಈಗ Social Medai ದಲ್ಲಿ Viral ಆಗುತ್ತಿದೆ. ಶಾರುಖ್ ಖಾನ್ ಅವರ ಮ್ಯಾನೇಜರ್ ಪೂಜಾ ದದ್ಲಾನಿ ಕೂಡ ಹಾಜರಿದ್ದರು ಮೆಸ್ಸಿಯ ಅಭಿಮಾನಿಯಾಗಿರುವ ಶಾರುಖ್ ಪುತ್ರ ಅಬ್ರಹಾಂ ಅವರನ್ನು ಮೆಸ್ಸಿ ಜೊತೆ ನಿಲ್ಲಿಸಿ ಶಾರುಖ್ ಖಾನ್ ಫೋಟೋ ಕೂಡ ಕ್ಲಿಕ್ಕಿಸಿಕೊಂಡರು.
ಇದನ್ನು ನೋಡಿ : RAILWAY ALERT🚨 | ಎರಡು ದಿನ ರೈಲು ಸರಿಯಾಗಿ ಓಡಾಡಲ್ಲ – ರೈಲ್ವೆ ಪ್ರಯಾಣಿಕರಿಗೆ ಎಚ್ಚರಿಕೆ




