ಗ್ಯಾಸ್ Cylinder Explosion ಗೊಂಡು 7 ಜನ ಗಂಭೀರವಾಗಿ ಗಾಯ.

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ Cylinder Explosion ಗೊಂಡು ಭೀಕರ ಅವಘಡ ಸಂಭವಿಸಿದೆ. ಇಂದು ಭೆಳಗ್ಗೆ ಮನೆಯಲ್ಲಿ ಹೊಸದಾಗಿ ತಂದಿದ್ದ ಸಿಲಿಂಡರ್ ಅನ್ನು ಆನ್ ಮಾಡುವ ವೇಳೆ ಈ ಸ್ಫೋಟ ಸಂಭವಿಸಿದೆ ಎನ್ನಲಾಗಿದೆ.
ಮನೆ ನೆಲಸಮ
ಇನ್ನು ಸ್ಫೋಟದ ತೀವ್ರತೆಗೆ ಮನೆ ಸಂಪೂರ್ಣವಾಗಿ ನೆಲಸಮ ವಾಗಿದ್ದು, ಸುತ್ತಮುತ್ತಲಿನ ಮನೆಗಳೂ ಕೂಡ ಬಿರುಕು ಬಿಟ್ಟಿವೆ. ಇನ್ನ ಮನೆ ಹತ್ತಿರ ನಿಂತಿದ್ದ ಕೆಲವರಿಗೂ ಬೆಂಕಿ ತಗುಲಿ ಗಾಯಗಳಾಗಿವೆ.
ಇದನ್ನು ಓದಿ : ಮೆಟ್ರೋ ಗುಲಾಬಿ ಮಾರ್ಗದ ರೈಲು ಅನಾವರಣ – ಯಾವ್ಯಾವ ಮಾರ್ಗಕ್ಕೆ?
ಕೆಲವರ ಸ್ಥಿತಿ ಚಿಂತಾಜನಕ
ಈ ಅವಘಡದಲ್ಲಿ ಗಂಭೀರವಾಗಿ ಗಾಯಗೊಂಡವರನ್ನು ರಾಜ (38), ಸುರೇಶ್ (35), ದುರುಗಪ್ಪ (27), ಹುಸೇನಮ್ಮ (40), ನಾಗರಾಜ (18), ದುರುಗಮ್ಮ (17), ವಿಷ್ಣು (16) ಮತ್ತು ಶ್ರೀಕಾಂತ್ (22) ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ತಕ್ಷಣ ಗಂಗಾವತಿ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಅವರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ.
ಪೊಲೀಸರು ಭೇಟಿ, ಪರಿಶೀಲನೆ
ಇನ್ನು ಘಟನೆ ಬಗ್ಗೆ ಮಾಹಿತಿ ದೊರಕುತ್ತಿದ್ದಂತೆ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಫೋಟದ ನಿಖರ ಕಾರಣ ತಿಳಿದು ಪೊಲೀಸರ ತನಿಖೆ ಮುಂದುವರಿದಿದೆ.
ಇದನ್ನು ನೋಡಿ : ಮಾಜಿ ಸಚಿವ ಹೆಚ್ ಎಂ ರೇವಣ್ಣ ಪುತ್ರನಿಂದ ಹಿಟ್ & ರನ್ – ಸವಾರ ಸಾವು




