Karnataka Traffic Fine : ಕರ್ನಾಟಕದಲ್ಲಿ ಟ್ರಾಫಿಕ್ ಫೈನ್ 50% ರಿಯಾಯಿತಿ ಯೋಜನೆಗೆ ಭಾರೀ ಸ್ಪಂದನೆ. ಕೇವಲ ಮೂರು ವಾರಗಳಲ್ಲಿ 5.88 ಲಕ್ಷ ಪ್ರಕರಣ ಇತ್ಯರ್ಥ, ₹16.63 ಕೋಟಿ ದಂಡ ಸಂಗ್ರಹ. ಡಿ.12ರವರೆಗೆ ಮಾತ್ರ 50% ದಂಡ ಪಾವತಿಗೆ ಅವಕಾಶ.

Karnataka Traffic Fine : ರಾಜ್ಯ ಸರ್ಕಾರದ ರಿಯಾಯಿತಿ ಕ್ರಮಕ್ಕೆ ಭಾರಿ ಸ್ಪಂದನೆ
ರಾಜ್ಯ ಸರ್ಕಾರ ಟ್ರಾಫಿಕ್ ಫೈನ್ಗೆ 50% ರಿಯಾಯಿತಿ ನೀಡುವ ಕ್ರಮಕ್ಕೆ ಕರ್ನಾಟಕದ ಜನರಿಂದ ಭಾರೀ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕೇವಲ ಮೂರು ವಾರಗಳ ಅವಧಿಯಲ್ಲಿ 5 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ಇತ್ಯರ್ಥಗೊಂಡಿದ್ದು, ಒಟ್ಟಾರೆ ₹16.63 ಕೋಟಿ ದಂಡ ಸಂಗ್ರಹವಾಗಿದೆ.
ನ.21ರಿಂದ ಡಿ.12ರವರೆಗೆ 50% ದಂಡ ಪಾವತಿಗೆ ಅವಕಾಶ
ಸಾರಿಗೆ ಇಲಾಖೆ ನೀಡಿದ್ದ ಪ್ರಸ್ತಾವನೆಯನ್ನು ಸರ್ಕಾರ ಅನುಮೋದಿಸಿದ ನಂತರ,
ನವೆಂಬರ್ 21ರಿಂದ ಡಿಸೆಂಬರ್ 12ರವರೆಗೆ ಕೇವಲ 50% ದಂಡ ಪಾವತಿಸಲು ಅವಕಾಶ ನೀಡಲಾಗಿತ್ತು.
ಈ ಅವಧಿಯಲ್ಲಿ:
- 5,88,127 ಟ್ರಾಫಿಕ್ ಉಲ್ಲಂಘನೆ ಪ್ರಕರಣಗಳು ಮುಕ್ತಾಯ
- ₹16.63 ಕೋಟಿ ದಂಡ ಸಂಗ್ರಹ
ಇವು ರಾಜ್ಯದಾದ್ಯಂತ ರಿಯಾಯಿತಿ ಯೋಜನೆಗೆ ದೊರೆತ ಸ್ಪಂದನೆಯನ್ನು ಸ್ಪಷ್ಟಪಡಿಸುತ್ತವೆ.
ಇದನ್ನು ಓದಿ : ಹುಟ್ಟುಹಬ್ಬದ ಸಂಭ್ರಮದಲ್ಲಿ ಕಾಂತಾರದ ಕನಕಾವತಿ
ಆನ್ಲೈನ್ ಪಾವತಿ ಮೂಲಕ ಸುಲಭ ಸೇವೆ
ವಾಹನ ಸವಾರರು ವಿವಿಧ ಪ್ಲಾಟ್ಫಾರ್ಮ್ಗಳ ಮೂಲಕ ರಿಯಾಯಿತಿ ದಂಡವನ್ನು ಸುಲಭವಾಗಿ ಆನ್ಲೈನ್ನಲ್ಲಿ ಪಾವತಿಸಬಹುದು:
- KSP (ಕರ್ನಾಟಕ ಪೊಲೀಸ್)
- BTP ( ಬೆಂಗಳೂರು ಟ್ರಾಫಿಕ್ ಪೊಲೀಸ್ )
- ಬೆಂಗಳೂರೊಂದು / Karnataka One
- ಟ್ರಾಫಿಕ್ ಪೊಲೀಸ್ ಕೌಂಟರ್ಗಳು
ಡಿ.12ರವರೆಗೆ ಮಾತ್ರ 50% ರಿಯಾಯಿತಿ ಅನ್ವಯವಾಗುತ್ತದೆ.ಅದರ ನಂತರ ಪೂರ್ಣ ಪ್ರಮಾಣದ ದಂಡವನ್ನು ಪಾವತಿಸಲೇಬೇಕು.
ಹಿಂದಿನ ಹಂತದಲ್ಲೂ ಉತ್ತಮ ಪ್ರತಿಕ್ರಿಯೆ
ಇದಕ್ಕೂ ಮೊದಲು ಆಗಸ್ಟ್ 23ರಿಂದ ಸೆಪ್ಟೆಂಬರ್ 12ರವರೆಗೆ ಇದೇ ರೀತಿಯ 50% ರಿಯಾಯಿತಿ ನೀಡಲಾಗಿತ್ತು.ಈ ಅವಧಿಯಲ್ಲಿ ಬೆಂಗಳೂರು ಒಂದರಲ್ಲೇ ₹55 ಕೋಟಿ ದಂಡ ಸಂಗ್ರಹವಾಗಿತ್ತು.
ಈಗ ಮತ್ತೊಮ್ಮೆ ಜಾರಿಯಲ್ಲಿರುವ 50% ರಿಯಾಯಿತಿ ಯೋಜನೆಯೂ ಜನರಿಂದ ಉತ್ತಮ ಸ್ಪಂದನೆ ಪಡೆಯುತ್ತಿದೆ.
ಇದನ್ನು ನೋಡಿ : DARSHAN | ಅಭಿಮಾನಿಗಳಿಗೆ ಜೈಲಿನಿಂದಲೇ ದಚ್ಚು LETTER – ‘DEAR CELEBRATIES’ ಎಂದ D BOSS




