
ACTRESS NABHA NATESH : ಕನ್ನಡ ಚಿತ್ರರಂಗದಲ್ಲಿ 2015ರಲ್ಲಿ ‘ವಜ್ರಕಾಯ’ ಸಿನಿಮಾದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ ನಭಾ ನಟೇಶ್ ಬಳಿಕ ತೆಲುಗು ಚಿತ್ರರಂಗದತ್ತ ಮುಖಮಾಡಿದರು. ‘ನನ್ನು ದೋಚುಕುಂಡುವಟೆ’ ಮೂಲಕ ಟಾಲಿವುಡ್ಗೆ ಎಂಟ್ರಿ ಕೊಟ್ಟ ಈ ಸುಂದರಿ, ಚಿತ್ರದಲ್ಲಿಯೇ ತಮ್ಮ ಸಹಜ ನಟನೆ ಮತ್ತು ಆಕರ್ಷಕ ಲುಕ್ಗಳಿಂದ ಪ್ರೇಕ್ಷಕರ ಮನಸೆಳೆದಿದ್ದರು.
ಆದರೆ ನಾಯಕಿಯಾಗಿ ನಭಾಗೆ ಸಿನಿಮಾ ಯಶಸ್ಸು ಕಂಡಿರಲಿಲ್ಲ. ತೆಲುಗು ಚಿತ್ರರಂಗದಲ್ಲಿ ಇವರು 8 ಸಿನಿಮಾಗಳಲ್ಲಿ ನಟಿಸಿದ್ದು, ಇದರಲ್ಲಿ ಒಂದು ಮಾತ್ರ ಸೂಪರ್ ಹಿಟ್ ಆಗಿದ್ದು, ಇನ್ನೊಂದು ಸರಾಸರಿ ಯಶಸ್ಸು ಕಂಡಿದೆ. ಉಳಿದ ಸಿನಿಮಾಗಳು ಬಾಕ್ಸ್ಆಫೀಸ್ನಲ್ಲಿ ವಿಫಲಗೊಂಡಿವೆ.
ಸದ್ಯ ನಭಾ ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವಟ್ ಆಗಿದ್ದಾರೆ. ಇತ್ತೀಚೆಗೆ ಬಿಳಿ ಡ್ರೆಸ್ನಲ್ಲಿ ನಭಾ ಗ್ಲಾಮರಸ್ ಫೋಟೋಶೂಟ್ ಮಾಡಿಸಿದ್ದು, ವೈರಲ್ ಆಗಿವೆ. ಈ ಫೋಟೋಗಳಲ್ಲಿ ನಭಾ ಏಂಜೆಲ್ನಂತೆ ಮಿಂಚುತ್ತಿದ್ದು, ಹಲವರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.




