Rishab Shetty : Kantara Chapter 1 ಭಾರೀ ಯಶಸ್ಸಿನ ನಂತರ ರಿಷಬ್ ಶೆಟ್ಟಿ ತಂಡದೊಂದಿಗೆ ಮಂಗಳೂರಿನಲ್ಲಿ ಹರಕೆ ಕೋಲ ನಡೆಸಿದರು. ಆದರೆ ಕೋಲದ ಸಂದರ್ಭದಲ್ಲಿ ದೈವ ನರ್ತಕ ರಿಷಬ್ ಶೆಟ್ಟಿಗೆ ತೋರಿದ ವರ್ತನೆಗೆ ಇದೀಗ ದೈವರಾಧಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

Rishab Shetty : ದೈವರಾಧಕ ತಮ್ಮಣ್ಣ ಶೆಟ್ಟಿಯ ಆರೋಪಗಳು
ದೈವರಾಧಕ ತಮ್ಮಣ್ಣ ಶೆಟ್ಟಿ ಮಾಧ್ಯಮಕ್ಕೆ ಹೇಳಿರುವಂತೆ, ಕೋಲದಲ್ಲಿ ನಡೆದ ಘಟನೆಗಳು ದೈವರಾಧನೆಯ ನಿಯಮ ಉಲ್ಲಂಘನೆ. ಹರಕೆಯ ನೇಮ ಅಂತಾ ಇಲ್ಲ, ಧರ್ಮ ನೇಮ ನೀಡುವ ಕ್ರಮ ಇದೆ” ಎಂದು ಸ್ಪಷ್ಟಪಡಿಸಿದರು.
ರಿಷಬ್ ಶೆಟ್ಟಿಯ ವೇಳಾಪಟ್ಟಿಗೆ ಅನುಗುಣವಾಗಿ ದೈವ ನೇಮವನ್ನು ಬದಲಿಸಿದ್ದರೆ, ಅದು ಸರಿಯಲ್ಲ ಎಂದು ಹೇಳಿದ್ದಾರೆ.
“ಕೋಲದಲ್ಲಿ ನಡೆದದ್ದು ದೈವರಾಧನೆಗೆ ವಿರುದ್ಧ” – ತಮ್ಮಣ್ಣ ಶೆಟ್ಟಿಯ ಗಂಭೀರ ಆರೋಪ
ದೈವ ನರ್ತಕರ ಬಟ್ಟೆ, ನಡವಳಿಕೆಗಳನ್ನು ಪ್ರಶ್ನಿಸಿದ ದೈವರಾಧಕ ತಮ್ಮಣ್ಣ ಶೆಟ್ಟಿ ಹಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ.ನರ್ತಕ ಹಾಕಿದ ಬಟ್ಟೆಗಳು ದೈವರಾಧನೆಗೆ ಅನುಗುಣವಲ್ಲ.
ದೈವ ಕಡ್ತಳೆಯನ್ನು ತಲೆಗೆ ಹೊಡೆದುಕೊಳ್ಳುವುದಿಲ್ಲ, ತಟ್ಟೆ ಹೊಡೆಯುವುದಿಲ್ಲ.ಪಲ್ಟಿ ಹೊಡೆಯುವ ದೈವ ಬೇರೆ, ಇಲ್ಲಿ ನಡೆದದ್ದು ನಾಟಕ” ಎಂದು ಹೇಳಿದ್ದಾರೆ.
ಅವರು ಮುಂದುವರಿದು,
“ರಿಷಬ್ ಶೆಟ್ಟಿ ಸಿನಿಮಾ ಮಾಡಿದ ವ್ಯಾಪಾರಿ; ದೈವ ಮತ್ತು ರಿಷಬ್ ಶೆಟ್ಟಿಗೆ ಏನು ಸಂಬಂಧ?” ಎಂದು ಕಿಡಿಕಾರಿದ್ದಾರೆ.
ಇದನ್ನು ಓದಿ : ಟಾಕ್ಸಿಕ್ ಸಿನಿಮಾದಿಂದ ಹೊರಬಿತ್ತು ಬಿಗ್ ಅಪ್ ಡೇಟ್..!
ಯಾವ ದೈವವೂ ಶರ್ಟ್ ಹಾಕಿದವನನ್ನು ಮುಟ್ಟುವುದಿಲ್ಲ – ಕಠಿಣ ಹೇಳಿಕೆ
ತಮ್ಮಣ್ಣ ಶೆಟ್ಟಿ ದೈವರಾಧನೆಯಲ್ಲಿ ಕಂಡ ಅನೇಕ ತಪ್ಪುಗಳನ್ನು ವಿವರಿಸುತ್ತಾ,ಶರ್ಟ್ ಹಾಕಿದವನಿಗೆ ದೈವ ಮುಟ್ಟುವುದಿಲ್ಲ .
ಹೊರಳಾಟ, ಬಕೇಟ್ ಹಿಡಿದು ಮಾತನಾಡುವುದು ದೈವರಾಧನೆಯಲ್ಲಿ ಇಲ್ಲ . 20 ವರ್ಷಗಳಿಂದ ದೈವರಾಧನೆ “ವ್ಯಾಪಾರ”ವಾಗಿದೆ ಎಂದು ಆರೋಪ
ಅವರ ಮಾತಿನಲ್ಲಿ,ಜನರ ನಂಬಿಕೆ ಕಳೆದುಹೋಗುತ್ತಿದೆ. ದೈವರಾಧನೆಯನ್ನು ಸಾರ್ವಜನಿಕವಾಗಿ ಹರಾಜು ಹಾಕುತ್ತಿದ್ದಾರೆ” ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ನರ್ತಕ ಮತ್ತು ಸಿಬ್ಬಂದಿಗೆ ಕಠಿಣ ಕ್ರಮ ಬೇಡಿಕೆ
ತಮ್ಮಣ್ಣ ಶೆಟ್ಟಿ ಸ್ಪಷ್ಟವಾಗಿ ಹೇಳಿದರು, ಈ ರೀತಿಯ ತಪ್ಪು ಮಾಡಿದ ನರ್ತಕ, ಚಾಕರಿ ವರ್ಗ, ತಂತ್ರಿಗಳು ಮತ್ತೆ ಸೇವೆ ಮಾಡಿಸಬಾರದು” .
ರಿಷಬ್ ಶೆಟ್ಟಿ ಕೊಟ್ಟಿದ್ದರೆಂದೇ ಹೇಳಲಾಗಿರುವ ಹೂತನ್ನು ದೊಡ್ಡ ಪ್ರಮಾಣದಲ್ಲಿ ತೆಗೆದುಕೊಂಡು ಹೋಗಿರುವುದು ದೈವರಾಧನೆಯ ನಿಯಮಕ್ಕೆ ವಿರುದ್ಧ
ಇದರಿಂದ ವಿವಾದ ಮತ್ತಷ್ಟು ಗಂಭೀರವಾಗಿದೆ.
Rishab Shetty ಮತ್ತು Kantara ಯಶಸ್ಸಿನ ನಡುವೆಯೂ, ದೈವರಾಧಕರಿಂದ ವ್ಯಕ್ತವಾದ ಈ ವಜ್ರವಾಣಿಗಳು ಈಗ ದೊಡ್ಡ ಚರ್ಚೆಗೆ ಕಾರಣವಾಗಿವೆ.
ದೈವರಾಧನೆಯ ಪರಂಪರೆಯ ನಿಯಮಗಳ ಉಲ್ಲಂಘನೆಯ ಆರೋಪಗಳು ಮಂಗಳೂರಿನಲ್ಲಿ ದೊಡ್ಡ ಸಂಭ್ರಮದ ವೇಳೆಲೇ ವಿವಾದ ಸೃಷ್ಟಿಸಿವೆ.
ಇದನ್ನು ನೋಡಿ : IPL 2026: ಟಾಪ್-5 ಸೆಟ್ನಲ್ಲಿ ಹರಾಜಾಗಲಿರುವ 34 ಆಟಗಾರರ ಪಟ್ಟಿ ಇಲ್ಲಿದೆ




