Toxic movie: ‘ಟಾಕ್ಸಿಕ್’ ಸಿನಿಮಾದ ಚಿತ್ರೀಕರಣದ ಬಗ್ಗೆ ಹೆಚ್ಚಿನ ಅಪ್ಡೇಟ್ಗಳನ್ನು ಬಿಟ್ಟುಕೊಟ್ಟಿರಲಿಲ್ಲ ಚಿತ್ರತಂಡ. ಇದೀಗ ಹೊಸ ಪೋಸ್ಟರ್ ಒಂದನ್ನು ಚಿತ್ರತಂಡ ಹಂಚಿಕೊಂಡಿದೆ.

Toxic movie: ಭಾರತದ ಅತ್ಯಂತ ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾದ ಯಶ್ ಅಭಿನಯದ ‘ಟಾಕ್ಸಿಕ್’ ಕುರಿತ ಕುತೂಹಲ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸಾಕಷ್ಟು ಸಮಯ, ಶ್ರಮ ಮತ್ತು ಭಾರೀ ತಂಡದ ಜೊತೆ ಕೆಲಸ ಮಾಡುತ್ತಿರುವ ಯಶ್, ಸಿನಿಮಾ ಬಿಡುಗಡೆ ಹತ್ತಿರವಾಗುತ್ತಿದ್ದಂತೆ ಹೊಸ ಅಪ್ಡೇಟ್ಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಟಾಕ್ಸಿಕ್ ಅಪ್ಡೇಟ್ ಕೊಟ್ಟ ಯಶ್
ಈ ಹಿಂದೆ ಬಿಡುಗಡೆಯಾದ ಚಿಕ್ಕ ಟೀಸರ್ ನಂತರ, ಇದೀಗ ಚಿತ್ರತಂಡ ಹೊಸ ಪೋಸ್ಟರ್ ಅನ್ನು ಬಿಡುಗಡೆ ಮಾಡಿದೆ. ನಟ ಯಶ್ ಸ್ವತಃ ತಮ್ಮ ಖಾತೆಯಲ್ಲಿ ಪೋಸ್ಟರ್ ಹಂಚಿಕೊಂಡಿದ್ದಾರೆ.

ಯಶ್ ಪಾತ್ರ ಇತಿಹಾಸದಲ್ಲೇ ಡಾರ್ಕ್ ಆಗಲಿದೆಯಾ?
ಚಿತ್ರದಲ್ಲಿ ವ್ಯಕ್ತಿಯೊಬ್ಬ (ಬಹುಷಃ ಯಶ್) ಬಾತ್ಟಬ್ನಲ್ಲಿ ಕೂತಿದ್ದಾನೆ, ಆ ಬಾತ್ ಟಬ್ನ ಅಂಚುಗಳಲ್ಲಿ ರಕ್ತ ಹರಿಯುತ್ತಿದೆ. ಆ ವ್ಯಕ್ತಿ ರಕ್ತ ತುಂಬಿದ ಬಾತ್ಟಬ್ನಲ್ಲಿ ಕೂತಿದ್ದಾನೆ ಎಂಬುದನ್ನು ಚಿತ್ರ ಹೇಳುತ್ತಿದೆ.
ಹೊಸ ಪೋಸ್ಟರ್ನಲ್ಲಿ ಯಶ್ ಅವರ ಮುಖವನ್ನು ಮರೆ ಮಾಡಲಾಗಿದ್ದು, ಅವರ ಬೆನ್ನ ಮೇಲಿರುವ ಟ್ಯಾಟೂ ಕೂಡ ಪ್ರೇಕ್ಷಕರ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.
ಯಶ್ನ ‘ಟಾಕ್ಸಿಕ್’ಗೆ 100 ದಿನ
ಪೋಸ್ಟರ್ ಹಂಚಿಕೊಂಡ ಯಶ್,“ಕಾಲ್ಪನಿಕ ಕಥೆ ಬಿಡುಗಡೆ ಆಗಲು 100 ದಿನ ಬಾಕಿ ಇದೆ” ಎಂದು ಕ್ಯಾಪ್ಷನ್ ನೀಡಿದ್ದಾರೆ. ಪೋಸ್ಟರ್ನಲ್ಲಿಯೂ ‘100 days to go’ ಎಂದು ಪ್ರಕಟಿಸಲಾಗಿದ್ದು, ಅಭಿಮಾನಿಗಳಲ್ಲಿ ಜೋಷ್ ಹೆಚ್ಚಿಸಿದೆ.
ಹಾಲಿವುಡ್ ಮಟ್ಟದ ಫೀಲ್ ನೀಡುವ ಈ ಪೋಸ್ಟರ್, ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ವೈರಲ್ ಆಗಿದೆ.
ಇದನ್ನೂ ಓದಿ : ಯಶ್ Toxic ಚಿತ್ರಕ್ಕೆ ರಣವೀರ್ ನೇರಾ ನೇರ ಸವಾಲು

ಬೃಹತ್ ಬಜೆಟ್ ಸಿನಿಮಾದಲ್ಲಿ ತಾರೆಗಳ ಆರ್ಭಟ
‘ಟಾಕ್ಸಿಕ್’ ಚಿತ್ರವನ್ನು ಮಲಯಾಳಂ ನಿರ್ದೇಶಕಿ ಗೀತು ಮೋಹನ್ದಾಸ್ ನಿರ್ದೇಶಿಸುತ್ತಿದ್ದಾರೆ. ಚಿತ್ರದ ನಿರ್ಮಾಣವನ್ನು ಯಶ್ ಮತ್ತು ಕೆವಿಎನ್ ಪ್ರೊಡಕ್ಷನ್ಸ್ ಒಟ್ಟಿಗೆ ಮಾಡುತ್ತಿದೆ. ಇದು ಈವರೆಗೆ ಕರ್ನಾಟಕದಲ್ಲಿ ನಿರ್ಮಿಸಲಾದ ಅತಿ ದೊಡ್ಡ ಬಜೆಟ್ ಸಿನಿಮಾ ಎಂದು ತಿಳಿದುಬಂದಿದೆ.
ಚಿತ್ರದಲ್ಲಿ ಕಿಯಾರಾ ಅಡ್ವಾಣಿ, ನಯನತಾರಾ ಮತ್ತು ರುಕ್ಮಿಣಿ ವಸಂತ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ತಾರಾ ನಕ್ಷತ್ರಗಳಿಂದ ಕೂಡಿದ ಈ ಚಿತ್ರಕ್ಕಾಗಿ ಭಾರತೀಯ ಸಿನಿಮಾ ರಂಗವೇ ಕಾತರದಿಂದ ಕಾಯುತ್ತಿದೆ. ‘ಟಾಕ್ಸಿಕ್’ ಸಿನಿಮಾ ಮಾರ್ಚ್ 19ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.
MUST WATCH : ಮಹಿಳೆ ಮೇಲೆ ದೌರ್ಜನ್ಯ ಎಸಗಿದ ಪಾಪಿ – ದೇವಸ್ಥಾನದಲ್ಲಿ ಕಿರಾತಕನಿಂದ ಇದೆಂಥಾ ಕೃತ್ಯ!




