Dhurandhar 2 ರಿಲೀಸ್ ಡೇಟ್ ಕನ್ಫರ್ಮ್ – ಯಶ್ ‘ಟಾಕ್ಸಿಕ್’ ಚಿತ್ರಕ್ಕೆ ರಣವೀರ್ ನೇರಾ ನೇರ ಸವಾಲು

ರಣವೀರ್ ಸಿಂಗ್ ಅಭಿನಯದ ಬಹುನಿರೀಕ್ಷಿತ Dhurandhar ಚಿತ್ರ ಶುಕ್ರವಾರ ಬಿಡುಗಡೆಯಾಗಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. 3 ಗಂಟೆ 36 ನಿಮಿಷಗಳ ಈ ಚಿತ್ರ ಮೊದಲ ದಿನವೇ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಸಂಗ್ರಹ ದಾಖಲಿಸಿದೆ
ಇನ್ನು ದೇಶದಲ್ಲಿ ₹27 ಕೋಟಿಗಳಿಕೆ ಮಾಡುವ ಮೂಲಕ ರಣವೀರ್ ಅವರ ವೃತ್ತಿಜೀವನದಲ್ಲೇ ಅತ್ಯುತ್ತಮ ಓಪನರ್ ಆಗಿ ಹೊರಹೊಮ್ಮಿದೆ.
Dhurandhar 2 ಯಾವಾಗ ರಿಲೀಸ್..?
ಚಿತ್ರದ ಅಂತ್ಯದಲ್ಲಿ ನಿರ್ಮಾಪಕರು ದೊಡ್ಡ ಸರ್ಪ್ರೈಸ್ ನೀಡಿದ್ದಾರೆ. Dhurandhar 2 ಮಾರ್ಚ್ 19, 2026ರಂದು ಬಿಡುಗಡೆಯಾಗಲಿದೆ ಎಂದು ಅಧಿಕೃತವಾಗಿ ಘೋಷಿಸಲಾಗಿದೆ. ಕೇವಲ ಮೂರು ತಿಂಗಳ ವ್ಯತ್ಯಾಸದಲ್ಲಿ ಭಾಗ 2 ಚಿತ್ರಮಂದಿರಗಳಿಗೆ ಬರಲಿದ್ದು ಪ್ರೇಕ್ಷಕರ ಕುತೂಹಲ ಹೆಚ್ಚಿಸಿದೆ.
ಇದನ್ನು ಓದಿ : ಹೆತ್ತ ಮಕ್ಕಳನ್ನೂ ಬಿಟ್ಟಿಲ್ಲ ಕಾಮುಕ; ಚಿತ್ರದುರ್ಗದಲ್ಲೊಂದು ಅಮಾನವೀಯ ಘಟನೆ..!!

ಟಾಕ್ಸಿಕ್ ಚಿತ್ರಕ್ಕೆ ಸವಾಲ್!
ಯಶ್ ಅಭಿನಯದ ಪ್ಯಾನ್-ಇಂಡಿಯಾ ಸಿನಿಮಾ Toxic ಕೂಡ ಇದೇ ದಿನವಾದ ಮಾರ್ಚ್ 19 ರಂದು ಬಿಡುಗಡೆಯಾಗುತ್ತಿದೆ. KGF ಸರಣಿಯ ನಂತರ ಯಶ್ ನಟಿಸಿರುವ ಮೊದಲ ಸಿನಿಮಾ ಆದ್ದರಿಂದ ಟಾಕ್ಸಿಕ್ ಗೆ Nationwide ದೊಡ್ಡ ನಿರೀಕ್ಷೆ ಇದೆ. ಇದೇ ದಿನ Dhurandhar 2 ಬರುವುದು ಬಾಕ್ಸ್ ಆಫೀಸ್ನಲ್ಲಿ ಭಾರೀ ಮುಖಾಮುಖಿ ಎದುರಾಗಲಿದೆ.
”ಟಾಕ್ಸಿಕ್” ಚಿತ್ರಕ್ಕೆ ಯಶ್ ಆಯ್ಕೆ ಮಾಡಿಕೊಂಡ ಮಾರ್ಚ್ 19ನೇ ತಾರೀಖನ್ನೇ ”ಧುರಂಧರ್” ತಂಡ ಕೂಡ ಸೆಲೆಕ್ಟ್ ಮಾಡಿದೆ. ಈ ಮೂಲಕ ”ಟಾಕ್ಸಿಕ್” ಚಿತ್ರಕ್ಕೆ ಬಾಕ್ಸಾಫೀಸ್ನಲ್ಲಿ ”ಧುರಂಧರ್ 2” ಸವಾಲು ಹಾಕಲಿದೆ.
ಆಂಧ್ರದ ಸ್ಟಾರ್ ಅಡಿವಿ ಶೇಷ್ ಕೂಡ ತಮ್ಮ ”ಡಕೋಯಿಟ್: ಎ ಲವ್ ಸ್ಟೋರಿ” ಚಿತ್ರವನ್ನು ಕೂಡ ”ಟಾಕ್ಸಿಕ್” ಎದುರು ಬಿಡುಗಡೆ ಮಾಡುತ್ತಿರುವುದಾಗಿ ಈಗಾಗಲೇ ಘೋಷಿಸಿದ್ದಾರೆ. 2018ರಲ್ಲಿ, ಶಾರುಖ್ ಖಾನ್ ಅವರ ‘ಝೀರೋ’ ಚಿತ್ರದ ಎದುರು kGF- 1 ತೆರೆಕಂಡು ಗೆದ್ದಿತ್ತು. ಈ ಬಾರಿಯ ಈದ್ ಹಬ್ಬದಂದು ಸಲ್ಮಾನ್ ಖಾನ್ ತಮ್ಮ ”ಬ್ಯಾಟಲ್ ಆಫ್ ಗಲ್ವಾನ್” ಚಿತ್ರವನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ.

ಇದನ್ನು ನೋಡಿ : DECEMBERನಲ್ಲಿ DEVIL ಅಬ್ಬರ..! ಹೇಗಿದೆ ಸೆಲಬ್ರಿಟಿಗಳ ಕ್ರೇಜ್..?




