ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ2 ಆರೋಪಿ Darshan ಗೆ ಬೆನ್ನು ನೋವು ಮಾಯವಾಗೇಬಿಡ್ತಾ ಅನ್ನೋ ಕುತೂಹಲ ಮೂಡಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣ (Renuka Swamy Murder Case) ದಲ್ಲಿ ಎ2 ಆರೋಪಿ ನಟ ದರ್ಶನ್ (Darshan) ಅವರ ಆರೋಗ್ಯ ಸ್ಥಿತಿ ಕುರಿತು ಹೊಸ ಮಾಹಿತಿ ಹೊರಬಿದ್ದಿದೆ. ಹೌದು. ದರ್ಶನ್ ಬೆನ್ನುನೋವಿಗೆ ಫಿಸಿಯೊಥೆರಪಿ (Physiotherapy) ಬೇಕಿಲ್ಲ ಅಂತಾ ಸಿ.ವಿ ರಾಮನ್ ಆಸ್ಪತ್ರೆ ವೈದ್ಯರ ತಂಡದಿಂದ ಜೈಲಾಧಿಕಾರಿಗಳಿಗೆ ವರದಿ ನೀಡಲಾಗಿದೆ ಎಂಬ ಮಾಹಿತಿಗಳು ಮೂಲಗಳಿಂದ ತಿಳಿದುಬಂದಿದೆ.
Darshan ಗೆ ಬೆನ್ನುನೋವು ಮಾಯವಾಯ್ತಾ..?
ದರ್ಶನ್ ಮೊದಲ ಬಾರಿ ಜೈಲು ಸೇರಿದಾಗಲೇ ತೀವ್ರ ಬೆನ್ನುನೋವಿನ ಕಾರಣ ಹೇಳಿ ಜಾಮೀನು ಪಡೆದುಕೊಂಡಿದ್ದರು. ಬೆನ್ನುನೋವು ಜಾಸ್ತಿ ಇದೆ, ನಿಲ್ಲೋಕೂ ಆಗ್ತಿಲ್ಲ ಕೂರೋಕು ಆಗ್ತಿಲ್ಲ. ಚಿಕಿತ್ಸೆಗೆ ಅವಕಾಶ ಕೊಡಿ ಅಂತ ಕೋರ್ಟ್ ಮೋರೆ ಹೋಗಿದ್ದರು. ಕೋರ್ಟ್ ಮೊದಲಿಗೆ ಮೆಡಿಕಲ್ ಬೇಲ್ ಮಂಜೂರು ಮಾಡಿತ್ತು.
ಎರಡನೇ ಬಾರಿ ಪರಪ್ಪನ ಅಗ್ರಹಾರ ಜೈಲು ಸೇರಿದಾಗಲೂ ಇದೇ ಸಮಸ್ಯೆ ಪುನರಾವರ್ತಿತವಾಗಿತ್ತು. ಆದರೆ ಈ ಬಾರಿ ಕೋರ್ಟ್ ಜಾಮೀನು ನಿರಾಕರಿಸಿ, ಜೈಲಿನಲ್ಲೇ ಅಗತ್ಯ ಚಿಕಿತ್ಸೆ ಪಡೆಯಲು ಅವಕಾಶ ನೀಡಿತ್ತು. ಇದಕ್ಕೆ ಅನುಸರವಾಗಿ, ಆಸ್ಪತ್ರೆಯ ನಾಲ್ವರು ವೈದ್ಯರ ತಂಡ ವಾರಕ್ಕೆ ಎರಡು–ಮೂರು ಬಾರಿ ಫಿಸಿಯೋಥೆರಪಿ ಮಾಡಲಾಗುತ್ತಿತ್ತು.
ಇದನ್ನು ಓದಿ : ಮಹಿಳೆಯನ್ನು ಕಚ್ಚಿ ಕೊಂದ ರಾಟ್ ವೀಲರ್ ನಾಯಿ

ವೈದ್ಯರಿಂದ ಫಿಸಿಯೊಥೆರಪಿ ಸ್ಟಾಪ್!
ಇತ್ತೀಚೆಗೆ ವೈದ್ಯರು ತಪಾಸಣೆ ನಡೆಸಿ, Darshan ಗೆ ಫಿಸಿಯೊಥೆರಪಿ ಅಗತ್ಯವಿಲ್ಲ ಎಂಬ ವರದಿ ಸಲ್ಲಿಸಿರುವುದಾಗಿ ಮೂಲಗಳು ತಿಳಿಸಿವೆ. ತಪಾಸಣೆ ಬಳಿಕ ವರದಿ ಸಲ್ಲಿಸಿಕೆ ಮಾಡಿರುವ ವೈದ್ಯರ ತಂಡ ದರ್ಶನ್ಗೆ ಫಿಸಿಯೊಥೆರಪಿ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರಂತೆ. ವೈದ್ಯರ ಶಿಫಾರಸಿನ ಆಧಾರದ ಮೇಲೆ ಫಿಸಿಯೋಗೆ ಜೈಲಾಧಿಕಾರಿಗಳು ಕರೆದುಕೊಂಡು ಹೋಗ್ತಿಲ್ಲ. ಇನ್ನೂ ಫಿಸಿಯೊ ಬಗ್ಗೆ ದರ್ಶನ್ ಯಾವುದೇ ಚಕಾರ ಎತ್ತಿಲ್ಲ ಅಂತಾ ಸಹ ಕಾಣ್ತಿದೆ.
10-12 ಕೆಜಿ ತೂಕ ಕಳೆದುಕೊಂಡಿದ್ದಾರಂತೆ ದರ್ಶನ್
ಇನ್ನು ಜೈಲಿನಲ್ಲಿ ದರ್ಶನ್ ದಿನಕ್ಕೆ ಒಂದೇ ಊಟ ಮಾಡುತ್ತಿದ್ದಾರಂತೆ. ಎರಡನೇ ಬಾರಿ ಜೈಲು ಸೇರಿದ ಬಳಿಕ ಈಗಾಗಲೇ 10–12 ಕೆಜಿ ತೂಕ ಕಳೆದುಕೊಂಡಿದ್ದು, ತೂಕ ಇಳಿಕೆಯ ಪರಿಣಾಮವಾಗಿ ಬೆನ್ನುನೋವು ಸಹಜವಾಗಿಯೇ ಕಡಿಮೆಯಾಗಿರುವ ಸಾಧ್ಯತೆ ಇದೆ ಎಂದು ಜೈಲು ಮೂಲಗಳು ತಿಳಿಸಿವೆ.

ಇದನ್ನು ನೋಡಿ : BRUTAL MUR*ER | ಅತ್ತೆ ಮಗಳನ್ನೇ ಕೊಲೆಗೈದ ಮಾವ – ಹಂತಕನ ಬಂಧಿಸಿದ್ದೇ ರಣರೋಚಕ




