Rottweiler Dog Attack : 37 ವರ್ಷದ ಮಹಿಳೆಯನ್ನು ಕಚ್ಚಿ ಕಚ್ಚಿ ಕೊಂದ ರಾಟ್ ವೀಲರ್ ನಾಯಿ

ದಾವಣಗೆರೆ ಹೊರ ವಲಯದ ಹೊನ್ನೂರು ಗೊಲ್ಲರಹಟ್ಟಿಯಲ್ಲಿ ಶ್ವಾನ ದಾಳಿಗೆ ಮಹಿಳೆ ಬಲಿಯಾದ ಘಟನೆ ನಡೆದಿದೆ. ಮೃತ ಮಹಿಳೆಯನ್ನು ಅನಿತಾ (38) ಎಂದು ಗುರುತಿಸಲಾಗಿದೆ.
ಅನಿತಾಳ ಮೇಲೆ ರಾಟ್ ವೀಲರ್ ದಾಳಿ
ಕಳೆದ ರಾತ್ರಿ ಕಾರಿನಲ್ಲಿ ಬಂದ ಅಪರಿಚಿತರು 2 ರಾಟ್ ವೀಲರ್ ಜಾತಿಯ ನಾಯಿಗಳನ್ನು ಹೊನ್ನೂರು ಗೊಲ್ಲರಹಟ್ಟಿಯ ಬಳಿ ಬಿಟ್ಟು ಹೋಗಿದ್ದಾರೆ. ಅದೇ ಸಮಯದಲ್ಲಿ ಮನೆಯಿಂದ ಹೊರ ಬಂದ ಅನಿತಾ ಮೇಲೆ ನಾಯಿಗಳು ದಾಳಿ ನಡೆಸಿದ್ದು, ತೀವ್ರ ಗಾಯಗೊಂಡಿದ್ದಾರೆ. ತಕ್ಷಣವೇ ಸ್ಥಳೀಯ ಅನಿತಾಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಕರೆದೊಯ್ಯುವ ಮಾರ್ಗ ಮಧ್ಯೆ ಅವರು ಮೃತಪಟ್ಟಿದ್ದಾರೆ.
ಇದನ್ನು ಓದಿ : ಹೊಸ ಅವತಾರದಲ್ಲಿ ಕಾಣಿಸಿಕೊಂಡ Kangana Ranaut
ಶಿರಾ ತಾಲೂಕು ಅಸ್ಪತ್ರೆಯ ಶವಗಾರದಲ್ಲಿ ಮಹಿಳೆಯ ಮೃತದೇಹವನ್ನು ಶವಪರಿಕ್ಷೆ ನಡೆಸಲಾಗಿದೆ. ಮಹಿಳೆಗೆ ಸುಮಾರು 50 ಕಡೆಗಳಲ್ಲಿ ನಾಯಿ ಕಚ್ಚಿದೆ ಎಂದು ತಿಳಿದು ಬಂದಿದೆ.
ನಾಯಿ ತಂದು ಬಿಟ್ಟವರ ವಿರುದ್ಧ ಕ್ರಮಕ್ಕೆ ಆಗ್ರಹ
ನಾಯಿಗಳು ಗ್ರಾಮದ ಜಮೀನಿನಲ್ಲೇ ಬೀಡು ಬಿಟ್ಟಿದ್ದವು. ಅವುಗಳನ್ನು ಹಿಡಿದು ಅವುಗಳ ಕಾಲಿಗೆ ಹಗ್ಗ ಬಿಗಿದು ಕೋಲಿಗೆ ಕಟ್ಟಿಕೊಂಡು ಗ್ರಾಮಸ್ಥರು ಎಳೆದುಕೊಂಡು ಹೋಗಿದ್ದಾರೆ. ನಾಯಿಗಳನ್ನು ತಂದು ಬಿಟ್ಟ ನಾಯಿ ಮಾಲೀಕರ ವಿರುದ್ಧ ಕಠಿಣ ಕ್ರಮಕ್ಕೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಇದನ್ನು ನೋಡಿ : KSRTC ಡಿಪೋ ಅಧಿಕಾರಿಗಳ ನಿರ್ಲಕ್ಷ್ಯ? – ಕನ್ನಡ ರಾಜ್ಯೋತ್ಸವಕ್ಕೆ ನಗರಸಭೆಗೆ ಆಹ್ವಾನ ಇಲ್ಲ




