ನಯಾ ಲುಕ್ನಲ್ಲಿ ಕ್ವೀನ್ Kangana Ranaut ಮಿಂಚಿಂಗ್.

ಬಾಲಿವುಡ್ ನಟಿ ಹಾಗೂ ಬಿಜೆಪಿ ಸಂಸದೆ Kangana Ranaut ಹೊಸ ಫೋಟೋಶೂಟ್ ಮಾಡಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಇದು ವಾಸ್ತವವಾಗಿ ಥೀಮ್ ಫೋಟೋಶೂಟ್ ಆಗಿದ್ದು ಹಿಮಾಚಲ ಪ್ರದೇಶದ ಲಡಾಕ್ ಭಾಗದ ಮಹಿಳೆಯರ ಸಾಂಪ್ರದಾಯಿಕ ಉಡುಗೆಯನ್ನ ಪ್ರತಿನಿಧಿಸುತ್ತದೆ. ಇನ್ನು ಈ ಫೋಟೋಶೂಟ್ಗೆ ಅಭಿಮಾನಿಗಳಿಂದ ಭರ್ಜರಿ ಮೆಚ್ಚುಗೆ ವ್ಯಕ್ತವಾಗಿದೆ.
Elegant Style ನಲ್ಲಿ ಕಂಗನಾ ಮಿಂಚಿಂಗ್
Kangana Ranaut ಧರಿಸಿರುವ ಈ ಸಾಂಪ್ರದಾಯಿಕ ಲುಕ್ ವಿಶೇಷ ಗಮನ ಸೆಳೆದಿದೆ. ಹೈ ವೆಸ್ಟ್ ಪ್ಲೀಟೆಡ್ ಸ್ಕರ್ಟ್, ಅದಕ್ಕೆ ಹೊಂದುವ ರವಿಕೆ ಹಾಗೂ ಹಿಮಾಚಲ ರೇಷ್ಮೆಯ ದುಪಟ್ಟಾ ಸುತ್ತಿಕೊಂಡು ಕಂಗನಾ Elegant Style ನಲ್ಲಿ ಮಿಂಚಿದ್ದಾರೆ. ಮಂಡಿ ಕ್ಷೇತ್ರದ ಸಂಸದೆ ಆಗಿರುವ ಕಂಗನಾ ಅವರ ಈ ಸಾಂಪ್ರದಾಯಿಕ ಅವತಾರಕ್ಕೆ ನೆಟ್ಟಿಗರು ಫಿದಾ ಆಗಿ ಕಾಮೆಂಟ್ಗಳ ಮಳೆ ಸುರಿಸಿದ್ದಾರೆ.

ಇದನ್ನು ಓದಿ : BBK 12|ಟಾಸ್ಕ್ ಆಡದೇ ಕ್ಯಾಪ್ಟನ್ ಆದ ಸ್ಪಂದನಾ
ʻನಮ್ಮ ಭಾಗದಲ್ಲಿ ಚಳಿಗಾಲದ ಮದುವೆ ಕಾರ್ಯಕ್ರಮ ಹೀಗೆ ನಡೆಯುತ್ತದೆʼ
ಕಂಗನಾ ತಮ್ಮ Instagram ನಲ್ಲಿ ಈ ಫೋಟೋಗಳನ್ನು ಹಂಚಿಕೊಂಡಿದ್ದು, ಫೋಟೋ ಹಿಂದೆ ಇರುವ ಕಥೆಯನ್ನು ಕೂಡ ಹಂಚಿಕೊಂಡಿದ್ದಾರೆ. ʻನಿನ್ನೆ ರಾತ್ರಿ ಒಂದು ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾಗಲು ಈ ಲುಕ್ನಲ್ಲಿ ಭಾಗಿಯಾಗಿದ್ದರಂತೆ. ಭಾರತದಲ್ಲಿ ಮದುವೆ ಸೀಸನ್ ಬಂದರೆ ಸಾಕು ನಮ್ಮ ಸಂಸ್ಕೃತಿಯನ್ನ ಸಂಪ್ರದಾಯವನ್ನ ಪಾಲಿಸಲು ಅವಕಾಶ ಇರುತ್ತದೆ. ನಮ್ಮ ಭಾಗದಲ್ಲಿ ಚಳಿಗಾಲದ ಮದುವೆ ಕಾರ್ಯಕ್ರಮ ಹೀಗೆ ನಡೆಯುತ್ತದೆʼ ಎಂಬ ಮಾಹಿತಿ ಹಂಚಿಕೊಂಡಿದ್ದಾರೆ.
ಕಂಗನಾ ಅವರ ಈ ಹೊಸ ಥೀಮ್ ಫೋಟೋಶೂಟ್ ಇದೀಗ ಸೋಷಿಯಲ್ ಮೀಡಿಯಾದಲ್ಲಿ Trend ಆಗಿದ್ದು, ಅಭಿಮಾನಿಗಳಷ್ಟೇ ಅಲ್ಲ ಫ್ಯಾಷನ್ ಪ್ರಿಯರ ಗಮನವನ್ನೂ ಸೆಳೆದಿದೆ.

ಇದನ್ನು ನೋಡಿ : ಬೆಳೆ ನಷ್ಟ ಪರಿಹಾರದಲ್ಲಿ ಗೋಲ್ಮಾಲ್? – ರೈತನಿಗೆ ಅಧಿಕಾರಿಗಳು ಚಳ್ಳೆಹಣ್ಣು ತಿನ್ನಿಸಿದ್ರಾ




