BBK ಮನೆಗೆ ಮೊದಲ ಜೋಡಿ ಕ್ಯಾಪ್ಟನ್ – ಟಾಸ್ಕ್ ಆಡದೇ ಈ ವಾರದ ಕ್ಯಾಪ್ಟನ್ ಆದ ಸ್ಪಂದನಾ.

ಬಿಗ್ ಬಾಸ್ (BBK12) ಮನೆಯಲ್ಲಿ ಮೊದಲ ಬಾರಿಗೆ ಜೋಡಿ ಕ್ಯಾಪ್ಟನ್ಶಿಪ್ ಕೊಡಲಾಗಿದೆ. ಟಾಸ್ಕ್ ಆಡದಿದ್ದರೂ ಸ್ಪಂದನಾ ಕ್ಯಾಪ್ಟನ್ ಆಗಿ ಹೊರಹೊಮ್ಮಿದ್ದಾರೆ. ಕ್ಯಾಪ್ಟನ್ಶಿಪ್ಗಾಗಿ ಈ ವಾರ ನಡೆದ ಟಾಸ್ಕ್ಗಳಲ್ಲಿ ಸ್ಪರ್ಧಿಗಳು ಜೋಡಿಯಾಗಿ ಪಾಲ್ಗೊಂಡಿದ್ದರು. ಇದರಲ್ಲಿ ಅಭಿ-ಸ್ಪಂದನಾ ಜೋಡಿ ಟಾಸ್ಕ್ಗಳಲ್ಲಿ ಗೆದ್ದು ಕ್ಯಾಪ್ಟನ್ ಆಗಿದ್ದಾರೆ.
ಜೋಡಿ ಟಾಸ್ಕ್ಗಳಲ್ಲಿ ತೀವ್ರ ಸ್ಪರ್ಧೆ
ಈ ಬಾರಿ ಕಣಕ್ಕಿಳಿದ ಜೋಡಿಗಳು:
- ಗಿಲ್ಲಿ–ಕಾವ್ಯ
- ಅಶ್ವಿನಿ–ರಘು
- ರಕ್ಷಿತಾ–ಮಾಳು
- ಸೂರಜ್–ರಾಷಿಕಾ
- ಅಭಿ–ಸ್ಪಂದನಾ
- ರಜತ್–ಚೈತ್ರಾ ಕುಂದಾಪುರ
ಜೋಡಿ ಆಯ್ಕೆಯಲ್ಲಿ ಯಾವ ಮಹಿಳಾ ಸ್ಪರ್ಧಿಯೂ ಧ್ರುವಂತ್ ಅವರನ್ನು ಆಯ್ಕೆ ಮಾಡಲಿಲ್ಲ. ಇದರಿಂದ ಬಿಗ್ ಬಾಸ್ ಧ್ರುವಂತ್ ಹಾಗೂ ಕ್ಯಾಪ್ಟನ್ ಧನು ಅವರಿಗೆ ಟಾಸ್ಕ್ಗಳ ಉಸ್ತುವಾರಿ ಜವಾಬ್ದಾರಿ ನೀಡಿದರು.
ಇದನ್ನು ಓದಿ : ನಡುಬೀದಿಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಕೊಲೆ
ಮೊದಲ ಸುತ್ತಿನಲ್ಲಿ ರಕ್ಷಿತಾ–ಮಾಳು ಜೋಡಿ ಮೇಲುಗೈ
ಮೊದಲ ಸುತ್ತಿನಲ್ಲಿ ರಕ್ಷಿತಾ–ಮಾಳು ಜೋಡಿ ಮೇಲುಗೈ ಸಾಧಿಸಿ, ತಮ್ಮ ಅಧಿಕಾರಿ ಬಳಸಿ ರಜತ್–ಚೈತ್ರಾ ಜೋಡಿಯನ್ನು ನಾಮಿನೇಟ್ ಮಾಡಿದರು. ಇದರ ಪರಿಣಾಮವಾಗಿ ರಜತ್–ಚೈತ್ರಾ ಮುಂದಿನ ಟಾಸ್ಕ್ಗಳಲ್ಲಿ ಭಾಗವಹಿಸಲು ಅವಕಾಶ ತಪ್ಪಿಸಿಕೊಂಡರು.
ಇನ್ನು ಎರಡನೇ ಟಾಸ್ಕ್ ವೇಳೆ ಸ್ಪಂದನಾಗೆ ಕಾಲಿಗೆ ಪೆಟ್ಟಾಗಿದ್ದು, ವಿಶ್ರಾಂತಿ ಅಗತ್ಯವಾಯಿತು. ಇದರಿಂದ ಅಭಿಷೇಕ್ಗೆ ಹೊಸ ಜೋಡಿಯಾಗಿ ಚೈತ್ರಾ ಕುಂದಾಪುರ ಆಟವಾಡಿದರು.
ಸೂರಜ್-ರಾಷಿಕಾ ಜೋಡಿಯನ್ನು ನಾಮಿನೇಟ್
ಮತ್ತೊಂದು ಟಾಸ್ಕ್ ಬರುತ್ತದೆ. ಅದರಲ್ಲಿ ಸೂರಜ್ ಯಡವಟ್ಟಿನಿಂದಾಗಿ ಪ್ರಮುಖ ನಿರ್ಧಾರ ಕೈಗೊಳ್ಳುವ ಅವಕಾಶವನ್ನು ಜೋಡಿ ಕಳೆದುಕೊಳ್ಳುತ್ತದೆ. ರಿಂಗ್ ಹಿಡಿಯುವ ಸ್ಪರ್ಧೆಯಲ್ಲಿ ಮೇಲುಗೈ ಸಾಧಿಸುವ ಅಶ್ವಿನಿ-ರಘು ಜೋಡಿ ಚಾಣಾಕ್ಷತನದ ನಿರ್ಧಾರ ಕೈಗೊಳ್ಳುತ್ತದೆ. ಟಾಸ್ಕ್ಗಳಲ್ಲಿ ಟಫ್ ಆಗಿದ್ದ ಸೂರಜ್-ರಾಷಿಕಾ ಜೋಡಿಯನ್ನೇ ನಾಮಿನೇಟ್ ಮಾಡಿ ಉಳಿದ ಟಾಸ್ಕ್ಗಳನ್ನು ಆಡದಂತೆ ನೋಡಿಕೊಳ್ತಾರೆ.
ಕೊನೆಯ ಹಂತದಲ್ಲಿ ಯಾರು ಮೇಲುಗೈ..?
ಕೊನೆಯ ಎರಡು ಟಾಸ್ಕ್ಗಳಲ್ಲಿ ಅಭಿ–ಚೈತ್ರಾ ಜೋಡಿ ಉತ್ತಮ ಪ್ರದರ್ಶನ ನೀಡಿ ಫೈನಲ್ಗೆ ಅರ್ಹತೆ ಪಡೆದುಕೊಂಡರು. ಜೋಡಿಯ ಮೂಲ ಸದಸ್ಯೆಯಾಗಿದ್ದ ಸ್ಪಂದನಾ ಟಾಸ್ಕ್ಗಳಲ್ಲಿ ಆಡದಿದ್ದರೂ, ಕ್ಯಾಪ್ಟನ್ ಆಗ್ತಾರೆ.
ಇದನ್ನು ನೋಡಿ : ONLINE MARRIAGE | ಮದುಮಕ್ಕಳಿಲ್ಲದೇ ನಡೆಯಿತು ಮದುವೆ ಅರತಕ್ಷತೆ – ಆನ್ಲೈನ್ನಲ್ಲೇ ನಡೆದ ರಿಸೆಪ್ಷನ್




