Chitradurga Crime News : ಹೆತ್ತ ತಂದೆಯೇ ಮದ್ಯದ ಅಮಲಿನಲ್ಲಿ ತನ್ನ ಇಬ್ಬರು ಅಪ್ರಾಪ್ತ ಪುತ್ರಿಯರ ಮೇಲೆ ಅತ್ಯಾಚಾರ ಮಾಡಿರುವ ಅಮಾನವೀಯ ಮತ್ತು ಆಘಾತಕಾರಿ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ

Chitradurga Crime News : ಚಿತ್ರದುರ್ಗದಲ್ಲಿ ಪಾಪಿ ತಂದೆಯ ಅಮಾನವೀಯ ಕೃತ್ಯ: ಇಬ್ಬರು ಅಪ್ರಾಪ್ತ ಪುತ್ರಿಯರ ಮೇಲಿನ ಅತ್ಯಾಚಾರ! ಚಿತ್ರದುರ್ಗದಲ್ಲಿ ಮಾನವೀಯತೆಯ ಮಿತಿಯನ್ನು ದಾಟಿದ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. ಮದ್ಯದ ಅಮಲಿನಲ್ಲಿ 13 ಮತ್ತು 10 ವರ್ಷದ ತನ್ನ ಹೆಣ್ಣುಮಕ್ಕಳ ಮೇಲೆಯೇ ಅತ್ಯಾಚಾರ ನಡೆಸಿದ ತಂದೆ ಮಂಜುನಾಥ್ ಅನ್ನು ಪೊಲೀಸ್ ಇಲಾಖೆ ಬಂಧಿಸಿದೆ. ಈ ಘಟನೆ ಬೆಳಕಿಗೆ ಬರುತ್ತಲೇ ಗ್ರಾಮಸ್ಥರು ಆಘಾತಗೊಂಡಿದ್ದು, ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಘಟನೆ ವಿವರ
ಗಣಿ ಕೆಲಸ ಮಾಡಿಕೊಂಡಿದ್ದ ವ್ಯಕ್ತಿ ಮಂಜುನಾಥ್ ತನ್ನ 13 ಮತ್ತು 10 ವರ್ಷದ ಅಪ್ರಾಪ್ತ ಪುತ್ರಿಯರ ಮೇಲೆ ಅತ್ಯಾಚಾರ ನಡೆಸಿದ್ದಾನೆ. ಜಮೀನಿಗೆ ಕರೆದೊಯ್ದು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಈತನ ನಡೆಗೆ ಗ್ರಾಮಸ್ಥರು ಬೆಚ್ಚಿಬಿದ್ದಿದ್ದು, ಕಾನೂನು ಕ್ರಮಕ್ಕೆ ಆಗ್ರಹಿಸಿ ಗ್ರಾಮಸ್ಥರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಮನವಿ ಕೂಡ ಸಲ್ಲಿಕೆ ಮಾಡಿದ್ದಾರೆ.
ತಾಯಿಯ ಆಘಾತಕಾರಿ ಹೇಳಿಕೆ
ಆರೋಪಿಯ ತಾಯಿಯೇ ಕೂಡ ಮಂಜುನಾಥ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.ಮದ್ಯದ ಅಮಲಿನಲ್ಲಿ ನನ್ನ ಮೇಲೂ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದ.ಅವನಿಂದ ಮಕ್ಕಳಿಗೂ ಅಪಾಯ ಇರಬಹುದು ಎಂದು ನಾನು ಭಯಪಡುತ್ತಿದ್ದೆ.ಈತನಿಗೆ ಕಠಿಣ ಶಿಕ್ಷೆ ಆಗಲೇಬೇಕು ಬೇರೆಯವರ ಮಕ್ಕಳಿಗೂ ಅಪಾಯ.
ಇದನ್ನು ಓದಿ : ಮಹಿಳೆಯನ್ನು ಕಚ್ಚಿ ಕೊಂದ ರಾಟ್ ವೀಲರ್ ನಾಯಿ
ಗ್ರಾಮಸ್ಥರ ಪ್ರತಿಕ್ರಿಯೆ
ಗ್ರಾಮಸ್ಥರ ಆಕ್ರೋಶ ಹೆಚ್ಚಿದ್ದು, ತಂದೆಯೇ ಮಕ್ಕಳ ಮೇಲೆಯೇ ಹೀಗೆ ವರ್ತಿಸಿದ್ದಾನೆ… ಇದು ಊರಿಗೇ ಕೆಟ್ಟ ಹೆಸರು.”ಇಂತಹ ಘಟನೆ ಊರಿನಲ್ಲಿ ಎಂದೂ ನಡೆದಿರಲಿಲ್ಲ.ತನ್ನ ಮಕ್ಕಳನ್ನೇ ಬಿಟ್ಟಿಲ್ಲದವನು ಹೊರಗೆ ಯಾರನ್ನಾದರೂ ಕಾಡಬಹುದು.
ಪೊಲೀಸರ ಕ್ರಮ
ಪೊಲೀಸರು ಆರೋಪಿಯನ್ನು ತಕ್ಷಣ ಬಂಧಿಸಿದ್ದು, ವಿಚಾರಣೆ ಮುಂದುವರಿಸಿದೆ. ಮಕ್ಕಳ ಸುರಕ್ಷತೆ, ವೈದ್ಯಕೀಯ ಪರೀಕ್ಷೆ ಸೇರಿದಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ.
ಇದನ್ನು ನೋಡಿ : BRUTAL MUR*ER | ಅತ್ತೆ ಮಗಳನ್ನೇ ಕೊಲೆಗೈದ ಮಾವ – ಹಂತಕನ ಬಂಧಿಸಿದ್ದೇ ರಣರೋಚಕ




