ಡೆಲ್ಲಿ ವಿರುದ್ಧದ ಸೇಡಿನ ಸಮರವನ್ನು ಗೆದ್ದು ಬೀಗಿದ RCB

IPL 2026ರ 39ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಭರ್ಜರಿ ಪ್ರದರ್ಶನ ನೀಡಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 9 ವಿಕೆಟ್ಗಳ ಅಂತರದಿಂದ ಜಯ ಸಾಧಿಸಿದೆ. ಈ ಪಂದ್ಯದಲ್ಲಿ RCB ಬೌಲರ್ಗಳ ದಾಳಿ ಎದುರಿಸಲು ಡೆಲ್ಲಿ ಬ್ಯಾಟ್ಸ್ಮನ್ಗಳು ಸಂಪೂರ್ಣವಾಗಿ ವಿಫಲರಾದರು.
ಕೇವಲ 75 ರನ್ಗಳಿಗೆ ಆಲೌಟ್
ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ತಂಡ ಕೇವಲ 75 ರನ್ಗಳಿಗೆ ಆಲೌಟ್ ಆಯಿತು. ಆರಂಭದಲ್ಲೇ ಆರ್ಸಿಬಿ ಬೌಲರ್ಗಳು ಮಾರಕ ದಾಳಿ ನಡೆಸಿದ್ದು, ಭುವನೇಶ್ವರ್ ಕುಮಾರ್ ಹಾಗೂ ಜೋಶ್ ಹೇಜಲ್ವುಡ್ ಮೊದಲ ನಾಲ್ಕು ಓವರ್ಗಳಲ್ಲಿ ಕೇವಲ 8 ರನ್ ನೀಡಿ 6 ವಿಕೆಟ್ಗಳನ್ನು ಕಬಳಿಸಿದರು. ಈ ದಾಳಿಯಿಂದ ಡೆಲ್ಲಿ ತಂಡ ಸಂಪೂರ್ಣ ಕುಸಿದಿತು.
READ THIS : ಬೆತ್ತಲೆ, ಕೊಳೆತ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆ!

ಐಪಿಎಲ್ ಇತಿಹಾಸದಲ್ಲೇ ಎರಡನೇ ಅತಿದೊಡ್ಡ ಗೆಲುವು
ಇನ್ನು ಈ ಸುಲಭ ಗುರಿಯನ್ನು ಬೆನ್ನಟ್ಟಿದ ಆರ್ಸಿಬಿ ತಂಡ ಕೇವಲ 6.3 ಓವರ್ಗಳಲ್ಲಿ ಒಂದೇ ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಈ ಮೂಲಕ 81 ಎಸೆತಗಳು ಬಾಕಿ ಇರುವಾಗಲೇ ಗೆಲುವು ದಾಖಲಿಸಿ ಐಪಿಎಲ್ ಇತಿಹಾಸದಲ್ಲೇ ಎರಡನೇ ಅತಿದೊಡ್ಡ ಗೆಲುವು ಸಾಧಿಸಿತು.
RCB – ಪ್ಲೇಆಫ್ ತಲುಪಲು ಕೇವಲ ಎರಡು ಗೆಲುವು
ಈ ಜಯದೊಂದಿಗೆ ಆರ್ಸಿಬಿ ಪಾಯಿಂಟ್ಸ್ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದ್ದು, 8 ಪಂದ್ಯಗಳಲ್ಲಿ 12 ಅಂಕಗಳನ್ನು ಪಡೆದಿದೆ. ಪ್ಲೇಆಫ್ ತಲುಪಲು ಇನ್ನೂ ಕೇವಲ ಎರಡು ಗೆಲುವುಗಳು ಸಾಕಾಗಿವೆ. ಉಳಿದ ಆರು ಪಂದ್ಯಗಳಲ್ಲಿ ಎರಡು ಗೆಲುವು ಸಾಧಿಸಿದರೆ ಆರ್ಸಿಬಿ ಪ್ಲೇಆಫ್ ಸ್ಥಾನವನ್ನು ಖಚಿತಪಡಿಸಿಕೊಳ್ಳಬಹುದು.

MUST WATCH : ಬೆತ್ತಲೆ ಸ್ಥಿತಿಯಲ್ಲಿ ಯುವತಿ ಶ* ಪತ್ತೆ – ಹರಿದ ಚೀಟಿಗಳಲ್ಲಿದೆಯಾ ಸಾ*ನ ಸಿಕ್ರೇಟ್.?




