
CRICKET :ಕಳೆದ ಭಾನುವಾರ ಏಷ್ಯಾ ಕಪ್ ಸೂಪರ್ 4 ಹಂತದ ಭಾರತ-ಪಾಕಿಸ್ತಾನ ಪಂದ್ಯದಲ್ಲಿ ಉದ್ಧಟತನ ಮೆರೆದ ಪಾಕಿಸ್ತಾನ ಕ್ರಿಕೆಟಿಗರು ಸಾಹಿಬ್ಝಾದ ಫರ್ಹಾನ್ ಮತ್ತು ಹ್ಯಾರಿಸ್ ರೌಫ್ ವಿರುದ್ಧ ಭಾರತ ಕ್ರಿಕೆಟ್ ಮಂಡಳಿ (ಬಿಸಿಸಿಐ) ಐಸಿಸಿಗೆ ಅಧಿಕೃತ ದೂರು ನೀಡಿದೆ. ಪಂದ್ಯದ ವೇಳೆ ಅವರ ಪ್ರಚೋದನಕಾರಿ ವರ್ತನೆಯಿಂದಾಗಿ ಭಾರತೀಯ ಆಟಗಾರರು ಮತ್ತು ಅಭಿಮಾನಿಗಳಲ್ಲಿ ಆಕ್ರೋಶ ಮೂಡಿದ್ದು, ಈ ಕುರಿತು ಐಸಿಸಿಗೆ ಇ-ಮೇಲ್ ಮೂಲಕ ಮಾಹಿತಿ ನೀಡಲಾಗಿದೆ.
ಇನ್ನು ದೂರು ಪಡೆದ ಐಸಿಸಿ, ಇಬ್ಬರು ಕ್ರಿಕೆಟಿಗರಿಂದ ಲಿಖಿತ ಉತ್ತರ ಕೋರಲಿದ್ದು, Elite Panel ರೆಫರಿ ರಿಚಿ ರಿಚರ್ಡ್ಸನ್ ಅವರ ವಿಚಾರಣೆ ಸಾಧ್ಯತೆ ಇದೆ. ಇದೇ ವೇಳೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಕೂಡ ಭಾರತೀಯ ನಾಯಕ ಸೂರ್ಯಕುಮಾರ್ ಯಾದವ್ ವಿರುದ್ಧ ಐಸಿಸಿಗೆ ದೂರು ನೀಡಿದೆ.
ಪಹಲ್ಗಾಂ ಉಗ್ರ ದಾಳಿಗೆ ಪ್ರತಿಕ್ರಿಯೆಯಾಗಿ ಭಾರತೀಯ ಸೇನೆ ನಡೆಸಿದ ‘ಆಪರೇಷನ್ ಸಿಂದೂರ’ಕ್ಕೆ ಬೆಂಬಲ ವ್ಯಕ್ತಪಡಿಸಿದ್ದಕ್ಕಾಗಿ ಹಾಗೂ ಗೆಲುವನ್ನು ಸೇನೆಗೆ ಅರ್ಪಿಸಿದ್ದಕ್ಕಾಗಿ ಪಿಸಿಬಿ ಆಕ್ರೋಶ ವ್ಯಕ್ತಪಡಿಸಿದೆ. ಅಲ್ದೇ ಈ ದುರಂತವನ್ನು ಟೀಕಿಸುವ ಬದಲು, ಪಾಕಿಸ್ತಾನ ಕ್ರಿಕೆಟ್ ತಂಡದ ಕೆಲವರು ಪಾಕ್ ಸೇನೆಯ ಸುಳ್ಳು ಪ್ರಚಾರಗಳನ್ನು ಸಮರ್ಥಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ.





