Bengaluru : ಕಾರವಾರದ ಚೆಲುವೆಗೆ ಒಲಿಯಿತು ʼಮಿಸ್ ಇಂಡಿಯಾʼ ಕಿರೀಟ!

Bengaluru : ಒಡಿಶಾದ ಭುವನೇಶ್ವರ್ನಲ್ಲಿ ನಡೆದ 61ನೇ ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ವಿಜಯ ಸಾಧಿಸಿದ ಸಾಧ್ವಿ ಸೈಲ್ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿನಂದಿಸಿದರು. ಕಾರವಾರ ಶಾಸಕ ಸತೀಶ್ ಸೈಲ್ ಅವರ ಪುತ್ರಿಯಾಗಿರುವ ಸಾಧ್ವಿ ಸೈಲ್, ರಾಷ್ಟ್ರ ಮಟ್ಟದ ಸೌಂದರ್ಯ ಸ್ಪರ್ಧೆಯಲ್ಲಿ ಗೆಲುವು ಸಾಧಿಸಿ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.

ಸಾಧ್ವಿಯ ಸಾಧನೆಗೆ CMಮೆಚ್ಚುಗೆ
ಇನ್ನು ಬೆಂಗಳೂರಿನ ಸಿಎಂ ನಿವಾಸ ಕಾವೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನ ಭೇಟಿ ಮಾಡಿದ ಸಾಧ್ವಿ ಸೈಲ್, ಆಶೀರ್ವಾದ ಪಡೆದರು. ಈ ವೇಳೆ ಸಾಧ್ವಿಯ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ CM, ಭವಿಷ್ಯದಲ್ಲೂ ಇನ್ನಷ್ಟು ಯಶಸ್ಸು ಸಾಧಿಸಲಿ ಎಂದು ಶುಭ ಹಾರೈಸಿದ್ರು.
READ THIS : ‘ಅಮೃತವರ್ಷಿಣಿ’ ರಜಿನಿ ವಿರುದ್ಧ ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಚಿತ್ರತಂಡ!

ಕಾರವಾರದ ಚೆಲುವೆಗೆ ಒಲಿಯಿತು ʼಮಿಸ್ ಇಂಡಿಯಾʼ ಕಿರೀಟ! Bengaluru
ಏಪ್ರಿಲ್ 18 ರಂದು ಭುವನೇಶ್ವರದಲ್ಲಿ ನಡೆದ 61 ನೇ ಫೆಮಿನಾ ಮಿಸ್ ಇಂಡಿಯಾದ ಗ್ರ್ಯಾಂಡ್ ಫಿನಾಲೆಯಲ್ಲಿ ಸಾಧ್ವಿ ಸತೀಶ್ ಸೈಲ್ ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ 2026 ಕಿರೀಟವನ್ನು ಪಡೆದರು. ತನಗೆ ದೊರೆತ ಅಗಾಧ ಸ್ವಾಗತದ ಬಗ್ಗೆ ಮಾತನಾಡಿದ ಸೈಲ್, ನಾನು ಗೋವಾ ಜನರ ಶಕ್ತಿಯನ್ನು ನೋಡಿದ್ದೇನೆ. ಅದರೊಂದಿಗೆ, ನನ್ನ ಸ್ವಂತ ಜನರ ಪ್ರೀತಿಯನ್ನು ನಾನು ನೋಡಿದ್ದೇನೆ. ನನಗಾಗಿ ಇಲ್ಲಿ ಜನರು ಒಟ್ಟುಗೂಡಿದ್ದನ್ನು ನೋಡಿ ನನಗೆ ತುಂಬಾ ಸಂತೋಷವಾಗಿದೆ ಎಂದರು.

MUST WATCH : ರಾತ್ರೋ ರಾತ್ರಿ ಬಾಳೆಕಾಯಿ ಕಳ್ಳತನ – 200ಕ್ಕೂ ಹೆಚ್ಚು ಬಾಳೆಗೊನೆ ಕದ್ದು ಕಳ್ಳರು ಎಸ್ಕೇಪ್..!




