ಬಾಟಿಲ್, ಕ್ಯಾನ್ಗಳಲ್ಲಿ Petrol ಸಿಗಲ್ಲ! ಬಂಕ್ಗಳಿಗೆ ಹೊಸ ರೂಲ್ಸ್!

ಜಾಗತಿಕ ಮಾರುಕಟ್ಟೆಯಲ್ಲಿನ ಸನ್ನಿವೇಶ ಹಾಗೂ ರಾಜ್ಯದಲ್ಲಿ ಇಂಧನ ಕೊರತೆಯಾಗದಂತೆ ಮುನ್ನೆಚ್ಚರಿಕೆ ವಹಿಸಲು ನಾಗರಿಕ ಹಾಗೂ ಆಹಾರ ಸರಬರಾಜು ಇಲಾಖೆಯು ಪೆಟ್ರೋಲ್ ಮತ್ತು ಡೀಸೆಲ್ ವಿತರಣೆಗೆ ಸಂಬಂಧಿಸಿದಂತೆ ಹೊಸ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಹೊರಡಿಸಿದೆ.
ಕಠಿಣ ಕ್ರಮ ಕೈಗೊಳ್ಳುವಂತೆ ಎಚ್ಚರಿಕೆ
ಗ್ರಾಹಕರ ಸುರಕ್ಷತೆ ಹಾಗೂ ಇಂಧನ ಸರಬರಾಜಿನ ಸಮರ್ಪಕ ನಿರ್ವಹಣೆಯನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮ ಕೈಗೊಳ್ಳಲಾಗಿದೆ. ರಾಜ್ಯದ ಎಲ್ಲಾ ಇಂಧನ ವಿತರಣಾ ಕೇಂದ್ರಗಳು (ರಿಟೇಲ್ ಔಟ್ಲೆಟ್ಗಳು) ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಇಲಾಖೆ ಸೂಚಿಸಿದೆ. ನಿಯಮ ಉಲ್ಲಂಘಿಸುವ ಪೆಟ್ರೋಲ್ ಬಂಕ್ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಲಾಗಿದೆ.

ಮಾರ್ಗಸೂಚಿಯಲ್ಲೇನಿದೆ?
ಪೆಟ್ರೋಲಿಯಂ ನಿಯಮಗಳು–2002 ಅನ್ವಯ, Petrol ಮತ್ತು ಡೀಸೆಲ್ ಅನ್ನು ವಾಹನಗಳ ಟ್ಯಾಂಕ್ಗಳಿಗೆ ಅಥವಾ ಅಧಿಕೃತವಾಗಿ ಅನುಮೋದಿತ ಕಂಟೇನರ್ಗಳಿಗೆ ಮಾತ್ರ ಪೂರೈಸಬೇಕು. ಇಂಧನ ವಿತರಣೆಗೆ ಗರಿಷ್ಠ 200 ಲೀಟರ್ ಮಿತಿ ನಿಗದಿಪಡಿಸಲಾಗಿದೆ.
ಸುರಕ್ಷತೆಯ ದೃಷ್ಟಿಯಿಂದ ಬಾಟಲಿ, ಕ್ಯಾನ್ ಅಥವಾ ಇತರ ಅನಧಿಕೃತ ಪಾತ್ರೆಗಳಲ್ಲಿ ಇಂಧನ ತುಂಬುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ನಿಯಮ ಉಲ್ಲಂಘನೆ ಕಂಡುಬಂದಲ್ಲಿ ಸಂಬಂಧಿಸಿದ ಪೆಟ್ರೋಲ್ ಬಂಕ್ಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು.
READ THIS : ತೋಟದಲ್ಲಿ ದಲಿತ ಮಹಿಳೆಯ ಶವ ಪತ್ತೆ! ಕೊಲೆಯೋ..? ಸಹಜ ಸಾವೋ?

ಬಲ್ಕ್ ಮಾರಾಟಕ್ಕೆ ಕಟ್ಟುನಿಟ್ಟು
ರಿಟೇಲ್ ಔಟ್ಲೆಟ್ಗಳು ದೊಡ್ಡ ಪ್ರಮಾಣದ ಇಂಧನ ವಿತರಣೆ (ಬಲ್ಕ್ ಆಪರೇಷನ್) ನಡೆಸುವಂತಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ. ಇಂತಹ ವ್ಯವಹಾರಗಳನ್ನು ಕೇವಲ “ಡೈರೆಕ್ಟ್ ಸೇಲ್ಸ್ ಮೆಕಾನಿಸಂ” ಮೂಲಕವೇ ನಡೆಸಬೇಕು. ನಿಯಮ ಮೀರಿ ಬಲ್ಕ್ ಮಾರಾಟ ನಡೆಸಿದರೆ ಪರವಾನಗಿ ರದ್ದತಿ ಸೇರಿದಂತೆ ಗಂಭೀರ ಕ್ರಮ ಎದುರಿಸಬೇಕಾಗುತ್ತದೆ.
ರೈತರಿಗೆ ಡೀಸೆಲ್ ಪೂರೈಕೆಗೆ ಆದ್ಯತೆ
ಕೃಷಿ ಚಟುವಟಿಕೆಗಳಿಗೆ ಹಾಗೂ ಜಲಚರ ಸಾಕಣೆಗೆ ಅಗತ್ಯವಿರುವ ಡೀಸೆಲ್ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗದಂತೆ ಅಧಿಕಾರಿಗಳು ಗಮನಹರಿಸಬೇಕು. ರೈತರ ಬೇಡಿಕೆಯನ್ನು ಪರಿಶೀಲಿಸಿ ಸೂಕ್ತವಾಗಿ ಇಂಧನ ವಿತರಿಸುವುದನ್ನು ಖಚಿತಪಡಿಸಿಕೊಳ್ಳಲು ಸೂಚಿಸಲಾಗಿದೆ.
ಇನ್ನು ಇಂಧನ ವಿತರಣೆಯಲ್ಲಿ ಅವ್ಯವಹಾರ ಅಥವಾ ಸುರಕ್ಷತಾ ನಿಯಮ ಉಲ್ಲಂಘನೆ ಕಂಡುಬಂದರೆ ಅದನ್ನು ಗಂಭೀರ ಲೈಸೆನ್ಸಿಂಗ್ ಉಲ್ಲಂಘನೆ ಎಂದು ಪರಿಗಣಿಸಲಾಗುವುದು.

MUST WATCH : ವೈದ್ಯರ ನಿರ್ಲಕ್ಷ್ಯಕ್ಕೆ ಬಾಣಂತಿ ಸಾ*..? – ಆಸ್ಪತ್ರೆ ಮುಂದೆ ಶವ ಇಟ್ಟು ಪ್ರತಿಭಟನೆ




