ಮೇ 10ರಂದು ಬೆಂಗಳೂರಿಗೆ ಪ್ರಧಾನಿ Modi ಭೇಟಿ: ಸಂಚಾರ ಮಾರ್ಗಗಳಲ್ಲಿ ಕೆಲ ಬದಲಾವಣೆ.

ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಬೆಂಗಳೂರಿಗೆ ಆಗಮಿಸಲಿದ್ದು, ಕನಕಪುರ ರಸ್ತೆಯಲ್ಲಿರುವ ಆರ್ಟ್ ಆಫ್ ಲಿವಿಂಗ್ ಅಂತಾರಾಷ್ಟ್ರೀಯ ಕೇಂದ್ರಕ್ಕೆ ಭೇಟಿ ನೀಡಲಿದ್ದಾರೆ. ಈ ಹಿನ್ನೆಲೆ ನಗರದಲ್ಲಿ ಭದ್ರತೆ ಬಿಗಿಗೊಳಿಸಲಾಗಿದ್ದು, ಹಲವು ಪ್ರಮುಖ ರಸ್ತೆಗಳಲ್ಲಿ ಸಂಚಾರ ಮಾರ್ಪಾಡು ಮಾಡಲಾಗಿದೆ.
ಪ್ರಧಾನಿ ಮೋದಿ ಬೆಂಗಳೂರಿಗೆ
ಈ ವರ್ಷ ಆರ್ಟ್ ಆಫ್ ಲಿವಿಂಗ್ ಸಂಸ್ಥೆ ತನ್ನ 45ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ. ಇದೇ ವೇಳೆ ಸಂಸ್ಥೆಯ ಸ್ಥಾಪಕ ಶ್ರೀ ಶ್ರೀ ರವಿಶಂಕರ್ ಅವರು ತಮ್ಮ 70ನೇ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ Modi ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಎಲ್ಲೆಲ್ಲಿ ಪಾರ್ಕಿಂಗ್ ನಿಷೇಧ?
- ಹೆಚ್ಎಎಲ್ ಗೇಟ್ ನಂ.30 ಮುಂಭಾಗದಲ್ಲಿ ಬೆಳಗ್ಗೆ 5ರಿಂದ ಮಧ್ಯಾಹ್ನ 3 ಗಂಟೆಯವರೆಗೆ ವಾಹನ ನಿಲುಗಡೆ ಸಂಪೂರ್ಣ ನಿಷೇಧ.
- ಹೆಚ್ಎಎಲ್ ವಿಮಾನ ನಿಲ್ದಾಣ ಎಕ್ಸಿಟ್ ರಸ್ತೆ ಹಾಗೂ ಹಳೆ ವಿಮಾನ ನಿಲ್ದಾಣ ರಸ್ತೆಯಿಂದ ಡಿಜಿಸಿಎ ಕಚೇರಿವರೆಗೆ ಎರಡೂ ಬದಿಗಳಲ್ಲಿ ಪಾರ್ಕಿಂಗ್ಗೆ ಅವಕಾಶ ಇಲ್ಲ.
- ಅಂಬ್ರೆಲಾ ಜಂಕ್ಷನ್ನಿಂದ ಹೆಚ್ಎಎಲ್ ಗೇಟ್ ನಂ.30ರವರೆಗೆ ವಾಹನ ನಿಲುಗಡೆ ನಿರ್ಬಂಧ.
- ಎಸ್.ಡಿ ರಸ್ತೆ ಜಂಕ್ಷನ್ನಿಂದ ಟ್ರಿನಿಟಿ ಜಂಕ್ಷನ್ವರೆಗೆ ಪಾರ್ಕಿಂಗ್ ನಿಷೇಧಿಸಲಾಗಿದೆ.

READ THIS : ಅವಳಿ ಅಗ್ನಿ ಅವಘಡ.! ಹೊತ್ತಿ ಉರಿದ ಹೋಟೆಲ್, ಬೈಕ್ ಶೋ ರೋಂ
ಅಧಿಕಾರಿಗಳ ವಾಹನ ನಿಲುಗಡೆ ವ್ಯವಸ್ಥೆ
ಗಣ್ಯರು ಹಾಗೂ ಹಿರಿಯ ಅಧಿಕಾರಿಗಳ ವಾಹನಗಳಿಗೆ ಎಸ್.ಡಿ ರಸ್ತೆ ಜಂಕ್ಷನ್ನಲ್ಲಿರುವ ಹೆಚ್ಎಎಲ್ ಡಿಪಾರ್ಟ್ಮೆಂಟ್ ಪಾರ್ಕಿಂಗ್ ಮತ್ತು ಸುರಂಜನ್ ದಾಸ್ ರಸ್ತೆಯ ಹೆಚ್ಎಎಲ್ ಬಸ್ ಯಾರ್ಡ್ನಲ್ಲಿ ವ್ಯವಸ್ಥೆ ಮಾಡಲಾಗಿದೆ.
ಪ್ರಮುಖ ಮಾರ್ಗಗಳಲ್ಲಿ ಸಂಚಾರ ಬದಲಾವಣೆ
- ತುಮಕೂರು ರಸ್ತೆಯಿಂದ ಕನಕಪುರ ರಸ್ತೆ ಕಡೆಗೆ ಹೋಗುವವರು ಸಿಎಂಟಿಐ ಜಂಕ್ಷನ್ ಮೂಲಕ ರಾಜ್ ಕುಮಾರ್ ಪುಣ್ಯಭೂಮಿ ರಸ್ತೆ ಬಳಸಬಹುದು.
- ಮಾಗಡಿ ರಸ್ತೆಯಿಂದ ತೆರಳುವವರು ಸುಮ್ಮನಹಳ್ಳಿ ಜಂಕ್ಷನ್ ಬಳಿ ಪರ್ಯಾಯ ಮಾರ್ಗ ಬಳಸುವಂತೆ ಸೂಚನೆ.
- ಮೈಸೂರು ರಸ್ತೆಯಿಂದ ಕನಕಪುರ ರಸ್ತೆ ಕಡೆಗೆ ತೆರಳುವವರು ನಾಯಂಡಹಳ್ಳಿ ಜಂಕ್ಷನ್ ಮೂಲಕ ಔಟರ್ ರಿಂಗ್ ರಸ್ತೆ ಸಂಪರ್ಕಿಸಬಹುದು.

ಬೆಂಗಳೂರು–ಕನಕಪುರ ಪರ್ಯಾಯ ಮಾರ್ಗಗಳು
ಮೊದಲ ಮಾರ್ಗ:
ಕೋಣನಕುಂಟೆ ಕ್ರಾಸ್ – ವಸಂತಪುರ – ಕೆಂಗೇರಿ – ಮೈಸೂರು ರಸ್ತೆ – ಅಗರ – ಬಂಜಾರಪಾಳ್ಯ – ಕಗ್ಗಲಿಪುರ
ಎರಡನೇ ಮಾರ್ಗ:
ಎ2ಬಿ ಜಂಕ್ಷನ್ – ನಾರಾಯಣನಗರ ಜೋಡಿ ರಸ್ತೆ – ಅಂಜನಾಪುರ 80 ಅಡಿ ರಸ್ತೆ – ಬನ್ನೇರುಘಟ್ಟ ಮುಖ್ಯರಸ್ತೆ – ಕಗ್ಗಲಿಪುರ
ಸಂಚಾರ ದಟ್ಟಣೆ ತಪ್ಪಿಸಲು ವಾಹನ ಸವಾರರು ಮುಂಚಿತವಾಗಿ ಪ್ರಯಾಣ ಯೋಜನೆ ರೂಪಿಸಿಕೊಳ್ಳುವಂತೆ ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ.
MUST WATCH : ಸರ್ಕಾರಿ ವೈದ್ಯರ ವಿರುದ್ಧ ಅಪಪ್ರಚಾರ – ಗ್ರಾಮಸ್ಥರಿಂದ ವೈದ್ಯರ ಪರ ಪ್ರತಿಭಟನೆ




