ಖಾಸಗಿ ಹೋಟೆಲ್ನಲ್ಲಿ ಭಾರೀ Fire Incident – ಓರ್ವ ಸಾವು, ನಾಲ್ವರಿಗೆ ಗಂಭೀರ ಗಾಯ.!

ಬೆಂಗಳೂರಿನ ನಾಗರಬಾವಿಯ ರಿಂಗ್ ರೋಡ್ ಬಳಿಯ ಸರ್ವೀಸ್ ರಸ್ತೆಯಲ್ಲಿರುವ, ಖಾಸಗಿ ಹೋಟೆಲ್ವೊಂದರಲ್ಲಿ ಭೀಕರ Fire Incident ಸಂಭವಿಸಿ ಓರ್ವ ಸಾವನ್ನಪ್ಪಿದ್ರೆ, ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ನಾಲ್ವರಿಗೆ ಗಂಭೀರ ಗಾಯ
ದುರ್ಗಾ ಗ್ರ್ಯಾಂಡ್ ಎಂಬ ಹೋಟೆಲ್ನಲ್ಲಿ ಈ ಅವಘಡ ಸಂಭವಿಸಿದ್ದು, ಹೋಟೆಲ್ನಲ್ಲಿ ಕಳೆದ 15 ದಿನಗಳ ಹಿಂದಷ್ಟೇ ಕೆಲಸಕ್ಕೆ ಸೇರಿದ್ದ ಮಧ್ಯಪ್ರದೇಶ ಮೂಲದ ರಾಜ್ ಕುಮಾರ್ ಎಂಬಾತ ಸಾವನ್ನಪ್ಪಿದ್ರೆ, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಹೋಟೆಲ್ನಲ್ಲಿ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಾರ್ಧದಲ್ಲೇ ಬೆಂಕಿ ವ್ಯಾಪಕವಾಗಿ ಹರಡಿ ಮೊದಲನೆ ಮಹಡಿಯಲ್ಲಿ ಮಲಗಿದ್ದ ಹೋಟೆಲ್ ಸಿಬ್ಬಂದಿ ಕೊಠಡಿಗೆ ಬೆಂಕಿ ತಗುಲಿದೆ.

READ THIS : ಪರಪ್ಪನ ಅಗ್ರಹಾರ ಜೈಲಿನ ಕೈದಿಗಳಿಗೂ ಬಂತು ಬಯೋಮೆಟ್ರಿಕ್
ಉಸಿರುಗಟ್ಟಿ ಓರ್ವ ಸಾವು
ಇನ್ನು ವಿಷಯ ತಿಳಿಯುತ್ತಿದ್ದಂತೆಯೇ ಅಗ್ನಿಶಾಮಕದಳ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ, ಹರಸಾಹಸಪಟ್ಟು ಐವರನ್ನ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ರು. ಆದ್ರೆ ದಟ್ಟ ಹೊಗೆಯಿಂದ ಉಸಿರುಗಟ್ಟಿ ರಾಜ್ ಕುಮಾರ್ ಎಂಬಾತ ಪ್ರಜ್ಞೆ ತಪ್ಪಿ ಬಿದ್ದಿದ್ದು, ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ. ಸದ್ಯ ವಿಷಯ ತಿಳಿದು ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

20 ಹೊಸ ಬೈಕ್ಗಳು ಸುಟು ಭಸ್ಮ
ಇತ್ತ ನಗರದ ಕೆ.ಆರ್.ಪುರಂ, ಟಿನ್ ಫ್ಯಾಕ್ಟರಿ ಸಮೀಪದಲ್ಲಿರುವ ಹೋಂಡಾ ಬೈಕ್ ಶೋ ರೂಮ್ನಲ್ಲೂ ಮತ್ತೊಂದು ಬೆಂಕಿ ಅವಘಡ ಸಂಭವಿಸಿದ್ದು, ಶೋ ರೂಮ್ನಲ್ಲಿದ್ದ ಸುಮಾರು 20 ಹೊಸ ಬೈಕ್ಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿವೆ.

ಬೆಂಕಿಯ ಕೆನ್ನಾಲಗೆಗೆ ಲಕ್ಷಾಂತರ ರೂಪಾಯಿ ನಷ್ಟ
ಇನ್ನು ಬೆಂಕಿ ಕಾಣಿಸಿಕೊಂಡ ತಕ್ಷಣ ಮಹಾದೇವಪುರ ಅಗ್ನಿಶಾಮಕ ದಳ ಸಿಬ್ಬಂದಿ, ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಿದ್ದಾರೆ.
ಇನ್ನು ಬೆಂಕಿಯ ಕೆನ್ನಾಲಗೆಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದ್ದು, ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಅಗ್ನಿ ಅವಘಡ ಸಂಭವಿಸಿರಬಹುದೆಂದು ಶಂಕಿಸಲಾಗಿದೆ.

MUST WATCH : ಆಸ್ಪತ್ರೆಯಲ್ಲೇ ರೋಗಿಯ ಚಿನ್ನಾಭರಣ ಕಳ್ಳತನ – ನೆಲ ಒರೆಸುವ ನೆಪದಲ್ಲಿ ಒಡವೆ ಕದ್ದು ಎಸ್ಕೇಪ್..!




