ಸಿದ್ದರಾಮಯ್ಯ ಮನೆಗೆ ದಿಢೀರ್ ಭೇಟಿ ನೀಡಿ Zameer ಮಾತುಕತೆ

ಮಾಜಿ ಸಚಿವ ಜಮೀರ್ ಅಹಮದ್ ಖಾನ್ ದಿಢೀರ್ ಸಿದ್ದರಾಮಯ್ಯ ಮನೆಗೆ ಭೇಟಿ ನೀಡಿ ಕೆಲ ಕಾಲ ಮಾತುಕತೆ ನಡೆಸಿದ್ದು, ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಲಹ ಮೂಡಿಸಿದೆ. ಎರಡು ದಿನದ ಹಿಂದೆ Zameer ಬೆಂಬಲಿಗರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದು, ಈ ವೇಳೆ ತಮ್ಮ ವಿರುದ್ಧವೇ ಜಮೀರ್ ಕೆಲಸ ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಬೆಂಬಲಿಗರ ಮುಂದೆ ಅಸಮಾಧಾನ ಹೊರಹಾಕಿದ್ರು. ಸಿದ್ದರಾಮಯ್ಯ ಮುನಿಸು ಸ್ಫೋಟಗೊಂಡ ವಿಚಾರ ಯಾವಾಗ ಜಮೀರ್ ಕಿವಿಗೆ ಬಿದ್ದಿತ್ತೋ, ಸಿದ್ದರಾಮಯ್ಯ ಅವರನ್ನು ಮನವೊಲಿಸುವ ಕೆಲಸವನ್ನು ಮಾಡಲು ಜಮೀರ್ ಮುಂದಾಗಿದ್ದಾರೆ.

ಸಿದ್ದು ಮುನಿಸನ್ನು ತಣ್ಣಗಾಗಿಸಲು ಜಮೀರ್ ಕಸರತ್ತು
ಬೆಂಗಳೂರಿನ ಕಾವೇರಿ ನಿವಾಸದಲ್ಲಿರುವ ಸಿದ್ದರಾಮಯ್ಯ ಅವರನ್ನು ಮಾಜಿ ಸಚಿವ ಜಮೀರ್ ಅಹಮದ್ ಭೇಟಿ ಮಾಡಿ, ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದ್ರು.
ಈ ವೇಳೆ ತಮ್ಮ ಬಗ್ಗೆ ಇರುವ ಅಸಮಾಧಾನ, ಅದಕ್ಕೆ ಕಾರಣ ಹಾಗೂ ಅಸಮಾಧಾನವನ್ನು ಶಮನಗೊಳಿಸುವ ಕೆಲಸವನ್ನು ಜಮೀರ್ ಮಾಡಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಇತ್ತ ಸಚಿವ ಸ್ಥಾನಕ್ಕೆ ಲಾಬಿ ನಡೆಸುತ್ತಿರುವ ಜಮೀರ್
ಡಿಕೆ ಮೊದಲ ಸಂಪುಟದಲ್ಲಿ ಜಮೀರ್ ಅಹಮದ್ಗೆ ಸಚಿವ ಸ್ಥಾನ ಕೈತಪ್ಪಿದ್ದು, ಇದೀಗ ತೆರೆಮರೆಯಲ್ಲಿ ಸಚಿವ ಸ್ಥಾನಕ್ಕಾಗಿ ತೀವ್ರ ಕಸರತ್ತು ನಡೆಸುತ್ತಿದ್ದಾರೆ. ಬೆಂಗಳೂರಿನ ಸದಾಶಿವನಗರದಲ್ಲಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಜಮೀರ್ ಅಹಮದ್ ಭೇಟಿ ಮಾಡಿ, ರಾಜ್ಯಸಭೆಗೆ ಪುನರ್ ಆಯ್ಕೆಗೆ ಖರ್ಗೆಗೆ ಅಭಿನಂದನೆ ಸಲ್ಲಿಸಿದ್ರು. ಅಭಿನಂದನೆ ಬಳಿಕ ಮಲ್ಲಿಕಾರ್ಜುನ್ ಬಳಿ ಜಮೀರ್ ಮಾತುಕತೆ ನಡೆಸಿದ್ರು. ಈ ವೇಳೆ ಸಚಿವ ಸ್ಥಾನಕ್ಕಾಗಿ ಮಲ್ಲಿಕಾರ್ಜುನ್ ಬಳಿ ಜಮೀದ್ ಅಹ್ಮದ್ ಮನವಿ ಮಾಡಿಕೊಂಡಿದ್ದಲ್ದೇ, ವೈರಲ್ ಆದ ಆಡಿಯೋ ಬಗ್ಗೆಯೂ ಜಮೀರ್ ಸ್ಪಷ್ಟನೆ ಕೊಟ್ಟಿದ್ದು, ಷಡ್ಯಂತ್ರ ಆಗಿದೆ ಎಂದು ಜಮೀರ್ ಒತ್ತಿ ಒತ್ತಿ ಹೇಳಿದ್ರು.
ಇದನ್ನು ಓದಿ : ಕಾಂಗ್ರೆಸ್ ಪಾಳಯದಲ್ಲಿ ಸಂಚಲನ ಸೃಷ್ಟಿಸಿದೆ ಜಮೀರ್ ಆಡಿಯೋ..!

CM ಬಳಿಯೂ ಸಚಿವ ಸ್ಥಾನಕ್ಕಾಗಿ ಮತ್ತೆ ಮನವಿ – Zameer
ಸಿದ್ದರಾಮಯ್ಯ, ಮಲ್ಲಿಕಾರ್ಜುನ್ ಭೇಟಿ ಬಳಿಕ ಜಮೀರ್ ಅಹಮದ್ ಸಿಎಂ ಡಿ.ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ರು. ಡಿಕೆ ಬಳಿಯೂ ಸಚಿವ ಸ್ಥಾನಕ್ಕಾಗಿ ಮತ್ತೆ ಮನವಿ ಮಾಡಿಕೊಂಡಿದ್ದಾರೆ ಎಂದು ಹೇಳಲಾಗ್ತಿದೆ. ಒಟ್ನಲ್ಲಿ ಸಚಿವ ಸ್ಥಾನ ಕೈತಪ್ಪಿರೋ ಬೆನ್ನಲ್ಲೇ ಜಮೀರ್ ಸಚಿವ ಸ್ಥಾನಕ್ಕಾಗಿ ತೀವ್ರ ಕಸರತ್ತು ನಡೆಸಿತ್ತಿದ್ದು, ಇತ್ತ ಜಮೀರ್ ಬೆಂಬಲಿಗರು ಹಾಗೂ ಮುಸ್ಲಿಂ ಸಮುದಾಯದ ಮುಖಂಡ ಪ್ರತಿಭಟನೆ ಮೂಲಕ ಒತ್ತಾಯಿಸುತ್ತಿದ್ದಾರೆ. ಜೂನ್ 20ಕ್ಕೆ ಎರಡನೇ ಹಂತದ ಸಂಪುಟ ವಿಸ್ತರಣೆ ನಡೆಯಲಿದ್ದು, ಜಮೀರ್ಗೆ ಸಚಿವ ಸ್ಥಾನ ಸಿಗುತ್ತಾ..? ಇಲ್ವಾ..? ಅನ್ನೋದನ್ನ ಕಾದುನೋಡಬೇಕಿದೆ.
ನ್ಯೂಸ್ ಡೆಸ್ಕ್ ಪ್ರಜಾಶಕ್ತಿ ಟಿವಿ ತುಮಕೂರು

ಇದನ್ನು ನೋಡಿ : ವಾಹನ ಸವಾರರಿಗೆ ಕೇಂದ್ರ ಬಿಗ್ ಶಾಕ್ – BJP ವಿರುದ್ಧ ಕಿಡಿಕಾರಿದ SURJEWALA

![60g4cogpmdn2aq2dyathindra-siddaramaiah[1]](https://prajashakthitv.com/wp-content/uploads/2026/06/60g4cogpmdn2aq2dyathindra-siddaramaiah1.avif)


