ಬೈ ಎಲೆಕ್ಷನ್ನಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ರಾ Zameer ?

ರಾಜ್ಯ ರಾಜಕಾರಣದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿಕೊಂಡಿವೆ. ನಾಯಕತ್ವ ಬದಲಾವಣೆ ನಡೆದಿದ್ದು, ಇದೇ ಬುಧವಾರ ಡಿಕೆಶಿ ನೂತನ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಇತ್ತ ಮತ್ತೆ ಸಚಿವ ಸ್ಥಾನ ಸಿಗುತ್ತೆ ಅನ್ನೋ ವಿಶ್ವಾಸದಲ್ಲಿರೋ ಜಮೀರ್ಗೆ ಶಾಕ್ ಎದುರಾಗಿದೆ. ಹೌದು, ದಾವಣಗೆರೆ ಬೈ ಎಲೆಕ್ಷನ್ ವೇಳೆ ಜಮೀರ್ ಅಹಮದ್ ಅವರು ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆ ಎಂದು ಆರೋಪ ಮಾಡಲಾಗಿದ್ದು, ಜಮೀರ್ ಅಹಮದ್ ಅವರದ್ದು ಎನ್ನಲಾದ ಆಡಿಯೋ ವೈರಲ್ ಆಗಿದೆ.
ಬೈ ಎಲೆಕ್ಷನ್ನಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ರಾ Zameer ?
ದಾವಣಗೆರೆ ಬೈ ಎಲೆಕ್ಷನ್ನಲ್ಲಿ ಮುಸ್ಲಿಂ ಸಮುದಾಯದ ಅಭ್ಯರ್ಥಿಗೆ ಟಿಕೆಟ್ ನೀಡಬೇಕೆಂದು Zameer ಪಟ್ಟು ಹಿಡಿದಿದ್ರು. ಆದ್ರೆ ಶಾಮನೂರು ಶಿವಶಂಕರಪ್ಪ ಅವರ ಮೊಮ್ಮಗ ಸಮರ್ಥ್ಗೆ ಕಾಂಗ್ರೆಸ್ ಟಿಕೆಟ್ ನೀಡಿತ್ತು. ಇದ್ರಿಂದ ತೀವ್ರ ಅಸಮಾಧಾನ ಗೊಂಡಿದ್ದ ಜಮೀರ್ ದಾವಣಗೆರೆ ಉಪ ಚುನಾವಣೆ ವೇಳೆ ಚುನಾವಣಾ ಪ್ರಚಾರದಿಂದ ಅಂತರ ಕಾಯ್ದುಕೊಂಡಿದ್ದರು.

ಹೈಕಮಾಂಡ್ ಸೂಚನೆ ಬೆನ್ನಲ್ಲೇ ಜಮೀರ್ ಮಲ್ಲಿಕಾರ್ಜುನ್ ಮನೆಗೆ ಜಮೀರ್ ಭೇಟಿ ನೀಡಿದ್ರು. ಆದ್ರೆ ಚುನಾವಣಾ ಪ್ರಚಾರ ಮಾಡದೇ ತೆರಳಿದ್ರು. ಇದ್ರ ನಡುವೆ ಕಾಂಗ್ರೆಸ್ ನಲ್ಲಿರುವ ಮುಸ್ಲಿಂ ನಾಯಕರ ಮಧ್ಯೆಯೇ ಭಿನ್ನಾಭಿಪ್ರಾಯ ಸ್ಫೋಟಗೊಂಡಿದ್ದು, ಸಲೀಂ ಅಹ್ಮದ್ ಮತ್ತು ರಿಜ್ವಾನ್ ಅರ್ಷದ್ ಸುದ್ದಿಗೋಷ್ಠಿ ನಡೆಸಿ ಜಮೀರ್ ಎಸ್ ಡಿಪಿಐ ಪರವಾಗಿ ಸಹಕಾರ ಮಾಡಲಾಗಿದೆ ಎಂಬ ಆರೋಪ ಮಾಡಿದ್ರು. ಈ ಎಲ್ಲಾ ಬೆಳವಣಿಗೆಗಳ ನಡುವೆ ಸಿದ್ದ ಅವರ ರಾಜಕೀಯ ಕಾರ್ಯದರ್ಶಿಯಾಗಿದ್ದ ನಸೀರ್ ಅಹ್ಮದ್ ಅವರನ್ನು ಪಕ್ಷದಿಂದ ವಜಾ ಮಾಡಲಾಗಿತ್ತು. ಅಲ್ದೇ ಅಬ್ದುಲ್ ಜಬ್ಬಾರ್ ವಿರುದ್ಧ ಕ್ರಮ ಕೈಗೊಳ್ಳಲಾಗಿತ್ತು.

ಆಡಿಯೋ ವೈರಲ್ ತೀವ್ರ ಸಂಚಲನ ಸೃಷ್ಟಿ
ಇದೀಗ ಡಿಕೆ ಜೊತೆ ಕೆಲ ಸಚಿವರು ಪ್ರಮಾಣ ವಚನ ಸ್ವೀರಿಸುತ್ತಿದ್ದ ಹೊತ್ತಲ್ಲೇ ಜಮೀರ್ ಅವರದ್ದು ಎನ್ನಲಾಗಿರುವ ಆಡಿಯೋ ವೈರಲ್ ಆಗುತ್ತಿದೆ. KMDC ನಿರ್ದೇಶಕ ಮಹಮ್ಮದ್ ಸಿರಾಜ್ ಜೊತೆ ಜಮೀರ್ ಮಾತನಾಡಿದ್ದಾರೆ ಎನ್ನಲಾದ ಆಡಿಯೋದಲ್ಲಿ ದಾವಣಗೆರೆ ಬೈ ಎಲೆಕ್ಷನ್ನಲ್ಲಿ ಕುಕ್ಕರ್ಗೆ ವೋಟ್ ಬೀಳಬೇಕು ಎಂದು ಅವರು ಮಾತನಾಡಿರುವುದು ಆಡಿಯೋ ವೈರಲ್ ಆಗಿದ್ದು, ತೀವ್ರ ಸಂಚಲನವನ್ನು ಸೃಷ್ಟಿ ಮಾಡ್ತಿದೆ.
ವೈರಲ್ ಆಗಿರೋದು AI ಆಡಿಯೋ
ಇನ್ನು ಆಡಿಯೋ ವೈರಲ್ಗೆ ಮಾಜಿ ಸಚಿವ ಸ್ಪಷ್ಟನೆ ಕೊಟ್ಟಿದ್ದು, ರಾಜ್ಯದ ಕೆಲವು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ನನ್ನ ಕುರಿತ ಆಡಿಯೋ ನಕಲಿ, AI ತಂತ್ರಜ್ಞಾನ ಬಳಸಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಅಲ್ದೇ ಇದೊಂದು ರಾಜಕೀಯ ಷಡ್ಯಂತ್ರ. ನಕಲಿ ಆಡಿಯೋ ಮಾಡಿ ವೈರಲ್ ಮಾಡಿರುವವರ ವಿರುದ್ಧ ಸೈಬರ್ ಠಾಣೆಗೆ ದೂರು ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.
ಇದನ್ನು ಓದಿ : ಸಚಿವ Zameer ಮನೆಯಲ್ಲಿ ಕೋಟ್ಯಾಂತರ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ!

ಜಮೀರ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರು
ಇನ್ನು ಜಮೀರ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಗೆ ಬೆಂಗಳೂರು ಪಶ್ಚಿಮ ಜಿಲ್ಲಾ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಕುಶಾಲ್ ಹರುವೇಗೌಡ ಅವರು ಪತ್ರದ ಮೂಲಕ ದೂರು ನೀಡಿದ್ದಾರೆ. ಅಲ್ದೇ ಜಮೀರ್ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡುವಂತೆ ಆಗ್ರಹಿಸಿದ್ರು.
ನೂತನ ಸಚಿವ ಸಂಪುಟ ರಚನೆ ಆಗುವ ಹೊತ್ತಲ್ಲೇ ಜಮೀರ್ ಅವರದ್ದು ಎನ್ನಲಾದ ಆಡಿಯೋ ವೈರಲ್ ಆಗಿದ್ದು, ಇದ್ರಿಂದ ಜಮೀರ್ಗೆ ಸಚಿವ ಸ್ಥಾನ ತಪ್ಪುತ್ತಾ ಅಥವಾ ಇಲ್ವಾ ಅನ್ನೋದನ್ನ ಕಾದುನೋಡಬೇಕಿದೆ.

ಇದನ್ನು ನೋಡಿ : ಡಿಕೆಶಿ CM ಆದ್ರೂ ರಾಜ್ಯ ಅಭಿವೃದ್ದಿಯಾಗಲ್ಲ ಕಾಂಗ್ರೆಸ್ ವಿರುದ್ಧ ವಿಜಯೇಂದ್ರ ವಾಗ್ದಾಳಿ




