
Women’s Cricket World Cup 2025 : ಬಹುನಿರೀಕ್ಷಿತ 13ನೇ ಆವೃತ್ತಿಯ ಐಸಿಸಿ ಮಹಿಳಾ ಏಕದಿನ ಕ್ರಿಕೆಟ್ ವಿಶ್ವಕಪ್ 2025 ಇಂದು ಗುಹಾವಟಿಯಲ್ಲಿ ಭರ್ಜರಿ ಉದ್ಘಾಟನೆಯೊಂದಿಗೆ ಆರಂಭಗೊಳ್ಳಲಿದೆ. ಭಾರತ ಮತ್ತು ಶ್ರೀಲಂಕಾ ತಂಡಗಳು ಆರಂಭಿಕ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿದ್ದು, ಮಹಿಳಾ ಕ್ರಿಕೆಟ್ನಲ್ಲಿ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದೆ.
ಈ ಟೂರ್ನಿಗೆ ಭಾರತ ಮತ್ತು ಶ್ರೀಲಂಕಾ ದೇಶಗಳು ಅತಿಥ್ಯ ವಹಿಸುತ್ತಿದ್ದು, ಪಂದ್ಯಗಳೆಲ್ಲವೂ ಉತ್ಸಾಹ ಭರಿತವಾಗಿರುವ ನಿರೀಕ್ಷೆಯಿದೆ. ಗೂಗಲ್ ಕೂಡ ಇಂದು ವಿಶೇಷ ಡೂಡಲ್ (Google Doodle) ಬಿಡುಗಡೆ ಮಾಡಿ ವಿಶ್ವಕಪ್ ಉದ್ಘಾಟನಾ ಪಂದ್ಯಕ್ಕೆ ಗೌರವ ಸಲ್ಲಿಸಿದೆ. ಈ ಮೂಲಕ ಗೂಗಲ್ ಮಹಿಳಾ ಕ್ರಿಕೆಟ್ಗೆ ಜಾಗತಿಕ ಪ್ರಾಮುಖ್ಯತೆ ನೀಡಿದಂತಾಗಿದೆ.
ಭಾರತ ತಂಡವನ್ನು ಹರ್ಮನ್ ಪ್ರೀತ್ ಕೌರ್ ಮುನ್ನಡೆಸಲಿದ್ದು, ಶ್ರೀಲಂಕಾ ಪರದಿಂದ ಚಾಮರಿ ಅಟ್ಟಪಟ್ಟು ನಾಯಕತ್ವ ವಹಿಸಿಕೊಂಡಿದ್ದಾರೆ. ಗುಹಾವಟಿಯ ಬಾರ್ಸಾಪಾರಾ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ 50 ಓವರ್ಗಳ ಪಂದ್ಯದಲ್ಲಿ ಅಭಿಮಾನಿಗಳು ಉತ್ಸಾಹದಿಂದ ಭಾಗವಹಿಸಿದ್ದಾರೆ.
ಬಹುನಿರೀಕ್ಷಿತ ಐಸಿಸಿ 13 ನೇ ಆವೃತ್ತಿಯ ಮಹಿಳಾ ಏಕದಿನ ವಿಶ್ವಕಪ್ ನ ಮೊದಲ ಪಂದ್ಯವೂ ಗುವಾಹಟಿ ಯಲ್ಲಿ ನಡೆಯಲಿದ್ದು, ಅತಿಥೇಯ ಭಾರತವನ್ನು ಶ್ರೀಲಂಕಾವೂ ಎದುರಿಸಲಿದೆ. ಭಾರತ ತಂಡದ ನಾಯಕ ತ್ವವನ್ನು ಹರ್ಮನ್ ಪ್ರೀತ್ ವಹಿಸಲಿದ್ದು, ಚಾಮರಿ ಅಟ್ಟ ಪಟ್ಟು ಶ್ರೀಲಂಕಾ ತಂಡವನ್ನು ಮುನ್ನೆಡೆಸ ಲಿದ್ದಾರೆ. ಒಟ್ಟು 50 ಓವರ್ನ ಈ ಪಂದ್ಯದಲ್ಲಿ ಭಾರತ ಹಾಗೂ ಶ್ರೀಲಂಕಾದಾದಂತ್ಯ ಒಟ್ಟು 31 ಪಂದ್ಯಗಳು ನಡೆಯಲಿದೆ. ಎಂಟು ಅಗ್ರ ತಂಡಗಳು ಪ್ರತಿಷ್ಠಿತ ಟ್ರೋಫಿಗಾಗಿ ಸ್ಪರ್ಧಿಸುತ್ತಿವೆ.




