
ತುಮಕೂರು ಮಹಾನಗರ ಪಾಲಿಕೆ ಆವರಣದಲ್ಲಿ ಮಹಾನಗರ ಪಾಲಿಕೆ ವತಿಯಿಂದ ಪೌರ ಕಾರ್ಮಿಕರ ದಿನಾಚರಣೆಯನ್ನು ಆಚರಿಸಲಾಯ್ತು. ಶಾಸಕ ಜ್ಯೋತಿ ಗಣೇಶ್ ಹಾಗೂ ಕಮಿಷನರ್ ಸೇರಿ ಅಧಿಕಾರಿಗಳು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದ್ರು. ಇನ್ನು ಕಾರ್ಯಕ್ರಮದಲ್ಲಿ ನಗರದ ಎಲ್ಲಾ ವಾರ್ಡ್ ನಲ್ಲಿ ಪ್ರತಿನಿತ್ಯ ಸ್ವಚ್ಛತಾ ಕೆಲಸ ಮಾಡುವ ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು.

ಇನ್ನು ಕಾರ್ಯಕ್ರಮದಲ್ಲಿ ಪೌರ ಕಾರ್ಮಿಕರ ದಿನಾಚರಣೆಯ ಪ್ರಯುಕ್ತ ಮಹಾನಗರ ಪಾಲಿಕೆಯ ವತಿಯಿಂದ ಕ್ರೀಡಾ ಸ್ಪರ್ಧೆಯನ್ನು ಆಯೋಜನೆ ಮಾಡಲಾಗಿದ್ದು, ಸ್ಪರ್ಧೆಯಲ್ಲಿ ವಿಜೇತರಾದ ಕ್ರೀಡಾಪಟುಗಳಿಗೆ ಹಾಗೂ ಎಸ್ಎಸ್ಲ್ಸಿ ಹಾಗೂ ಪಿಯುಸಿ ಯಲ್ಲಿ ಅತಿ ಹೆಚ್ಚು ಅಂಕ ಪಡೆದ ಪೌರ ಕಾರ್ಮಿಕರ ಮಕ್ಕಳಿಗೆ ಸನ್ಮಾನ ಮಾಡಲಾಯ್ತು. ಈ ವೇಳೆ ಮಾತನಾಡಿದ ಶಾಸಕ ಜ್ಯೋತಿ ಗಣೇಶ್, ಪೌರ ಕಾರ್ಮಿಕರು ಎಂದರೆ ಕೀಳಾಗಿ ನೋಡುವುದಲ್ಲ. ಎಲ್ಲರಿಗೂ ಸ್ವಾಭಿಮಾನ ಇರುತ್ತೇ, ಎಲ್ಲರೂ ಕೂಡ ಮನುಷ್ಯರೇ .ಪೌರ ಕಾರ್ಮಿಕರನ್ನು ನಮ್ಮಲ್ಲಿ ಒಬ್ಬರಂತೆ ನೋಡಬೇಕು. ಪೌರ ಕಾರ್ಮಿಕರು ಕೆಲಸ ಮಾಡುವಾಗ ಸರಿಯಾಗಿ ಸೂಕ್ತ ಸೇಫ್ಟಿ ಕ್ರಮಗಳನ್ನು ಅನುಸರಿಸಬೇಕು , ಪೌರ ಕಾರ್ಮಿಕರ ಜೊತೆ ಸದಾ ಕಾಲ ಎಲ್ಲಾ ವರ್ಗದ ಅಧಿಕಾರಿಗಳು ಇರುತ್ತಾರೆ ಯಾವ ಪೌರ ಕಾರ್ಮಿಕರು ಎಂತಹ ಸಮಯದಲ್ಲೂ ಎದರುವ ಅವಶ್ಯಕತೆ ಇಲ್ಲ ಎಂದು ಪೌರ ಕಾರ್ಮಿಕರಿಗೆ ಧೈರ್ಯ ತುಂಬಿದರು.
ಪಾಲಿಕೆ ಆಯುಕ್ತರಾದ ಅಶ್ವಿಜಾ ಅವರು ಮಾತನಾಡಿ, ತುಮಕೂರಿನಲ್ಲಿ ಪೌರ ಕಾರ್ಮಿಕರಿಲ್ಲದೆ ನಾವು ಯಾರು ಅಲ್ಲ, ನಮ್ಮ ಪಾಲಿಕೆಗೆ ನಮ್ಮ ತುಮಕೂರಿಗೆ ನಮ್ಮ ಪೌರ ಕಾರ್ಮಿಕರೇ ಹೆಮ್ಮೆ. ಅದರಲ್ಲೂ ನಮ್ಮ ತುಮಕೂರು ಗಿನ್ನಿಸ್ ದಾಖಲೆಗೆ ತುಂಬಾ ಸಹಕಾರ ಕೊಟ್ಟಿದ್ದೀರಾ. ತುಮಕೂರು ಸ್ವಚ್ಛ ವಾಗಿರುವುದಕ್ಕೆ ಪೌರ ಕಾರ್ಮಿಕರೇ ಕಾರಣ ಎಂದು ಪೌರ ಕಾರ್ಮಿಕರನ್ನು ಅಭಿನಂದಿಸಿದ್ರು. ಅಲ್ದೇ ಹೆಬ್ಬಾಕ ಬಳಿ ಇರುವ ಜಾಗವನ್ನು ಪೌರ ಕಾರ್ಮಿಕರಿಗೆ ಅದಷ್ಟು ಬೇಗ ಹಸ್ತಾಂತರ ಮಾಡಲಾಗುವುದು ಎಂದು ತಿಳಿಸಿದ್ರು.
ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆಯ ಆಯುಕ್ತರು, ತುಮಕೂರು ನಗರ ಶಾಸಕ ಜ್ಯೋತಿ ಗಣೇಶ್, ಪಾಲಿಕೆಯ ಅಧಿಕಾರಿಗಳು ಹಾಗೂ ಎಲ್ಲಾ ಸಿಬ್ಬಂದಿಗಳು ಮತ್ತು ಪೌರ ಕಾರ್ಮಿಕರು ಉಪಸ್ತಿತರಿದ್ದರು.




