Tumakuru News :ಕರ್ನಾಟಕ ಸಚಿವ ಸಂಪುಟ ಪುನಾರಚನೆ: ತುಮಕೂರು ನಾಯಕರಾದ ಗೌರಿಶಂಕರ್ ಮತ್ತು ಕಿರಣ್ ಕುಮಾರ್ಗೆ ಅವಕಾಶದ ನಿರೀಕ್ಷೆ

Tumakuru News :ಕರ್ನಾಟಕ ಸಚಿವ ಸಂಪುಟ ಪುನಾರಚನೆಗೆ ಸಿದ್ಧತೆ: ಹೊಸ ಮುಖಗಳಿಗೆ ಅವಕಾಶ, ಹಿರಿಯರಿಗೆ ಸಂಘಟನಾ ಜವಾಬ್ದಾರಿ
ಬಿಹಾರ ಚುನಾವಣೆಯ ಬಳಿಕ ಇದೀಗ ಕರ್ನಾಟಕದಲ್ಲಿ ಸಚಿವ ಸಂಪುಟ ಪುನಾರಚನೆಗೆ ಸಕಲ ಸಿದ್ಧತೆ ನಡೆದಿದೆ.
ಮೂಲಗಳ ಪ್ರಕಾರ, ಸುಮಾರು 12 ರಿಂದ 15 ಹಿರಿಯ ಸಚಿವರನ್ನು ಪಕ್ಷದ ಸಂಘಟನೆಗೆ ನಿಯೋಜಿಸಿ, ಹೊಸ ಮುಖಗಳಿಗೆ ಸಚಿವ ಸ್ಥಾನ ನೀಡುವ ಯೋಚನೆ ಕಾಂಗ್ರೆಸ್ ಹೈಕಮಾಂಡ್ನಲ್ಲಿ ನಡೆಯುತ್ತಿದೆ.
ಸ್ಥಳೀಯ ಚುನಾವಣೆಗಳು ಮತ್ತು ಕಾಂಗ್ರೆಸ್ನ ಹೊಸ ಲೆಕ್ಕಾಚಾರ
ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು, ಹಿರಿಯ ಸಚಿವರನ್ನು ಪಕ್ಷದ ಕೆಲಸಕ್ಕೆ ನಿಯೋಜಿಸುವ ಚಿಂತನೆ ನಡೆದಿದೆ. ಅರ್ಹತೆ ಮತ್ತು ಅನುಭವವಿದ್ದರೂ ಸಚಿವ ಸ್ಥಾನ ಸಿಗದೆ ಕಾಯುತ್ತಿರುವ ಶಾಸಕರಿಗೆ ಹಾಗೂ ಜೆಡಿಎಸ್ ,ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿರುವ ಘಟಾನು ಘಟಿ ನಾಯಕರುಗಳಿಗೆ ಅವಕಾಶ ಕಲ್ಪಿಸಲು ಮುಖ್ಯಮಂತ್ರಿಗಳ ಕಚೇರಿಯಲ್ಲಿ ಲೆಕ್ಕಾಚಾರ ನಡೆಯುತ್ತಿದೆ. ಸುಮಾರು 30 ತಿಂಗಳ ಅಧಿಕಾರಾವಧಿ ಮುಗಿಯುವ ನವೆಂಬರ್ ತಿಂಗಳಲ್ಲೇ ಈ ‘ಸಂಪುಟ ಸರ್ಜರಿ’ ನಡೆಯುವ ಸಾಧ್ಯತೆ ಇದೆ
ನವೆಂಬರ್ನಲ್ಲಿ ‘ಸಂಪುಟ ಸರ್ಜರಿ’ ಸಾಧ್ಯತೆ
ಈ ಸಂಧರ್ಭದಲ್ಲಿ ತುಮಕೂರು ಜಿಲ್ಲೆಯಲ್ಲಿ ಪ್ರಭಾವ ಬೀರಿರುವ ತುಮಕೂರು ಗ್ರಾಮಾಂತರ ಮಾಜಿ ಶಾಸಕ ಒಕ್ಕಲಿಗ ನಾಯಕ ಡಿ.ಸಿ ಗೌರಿಶಂಕರ್ ಜೆಡಿಎಸ್ –ಬಿಜೆಪಿ ಮೈತ್ರಿ ಸಿದ್ದಾಂತಕ್ಕೆ ಜೆಡಿಎಸ್ ಪಕ್ಷವನ್ನೇ ತೊರೆದು ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿದ್ದರು ಸೇರ್ಪಡೆಯಾದ ಬಳಿಕ ತುಮಕೂರು ಗ್ರಾಮಾಂತರದಲ್ಲಿ ನೆಲಕಚ್ಚಿದ್ದ ಕಾಂಗ್ರೆಸ್ ಪಕ್ಷವನ್ನ ಸಂಘಟನೆ ಮಾಡುವಲ್ಲಿ ಯಶಸ್ವಿಯಾಗಿರುವುದು ಲೋಕಸಭಾ ಚುನಾವಣೆಯಲ್ಲಿ ಬಟ ಬಯಲಾಗಿದೆ
ಗೌರಿಶಂಕರ್ ಕಾಂಗ್ರೆಸ್ ಸೇರ್ಪಡೆಯಾದ ಬಳಿಕ ಇದುವರೆಗೂ ಕಾಂಗ್ರೆಸ್ ನಲ್ಲಿ ಯಾವುದೇ ಉನ್ನತ ಸ್ಥಾನ ಸಿಕ್ಕಿಲ್ಲ, ಲೋಕಸಭಾ ಚುನಾವಣೆಯಲ್ಲಿ ತುಮಕೂರು ಗ್ರಾಮಾಂತರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಗೆ 70 ಸಾವಿರಕ್ಕೂ ಹೆಚ್ಚು ಮತಗಳು ಬಿದ್ದಿದ್ದು, ಮುಂದಿನ ಸ್ಥಳೀಯ ಸಂಸ್ಥೆಗಳ ಚುನಾವಣೆ ದೃಷ್ಟಿಯಲ್ಲಿ ಕಾಂಗ್ರೆಸ್ ಪಕ್ಷ ಗೌರಿಶಂಕರ್ ಗೆ ನಿಗಮ ಮಂಡಳಿ ಸ್ಥಾನವೂ ಎಂಎಲ್ ಸಿ ಸ್ಥಾನವೋ ಕೊಡದಿದ್ದರೆ ಕಾರ್ಯಕರ್ತರಿಗೆ ಅಭಿಮಾನಿಗಳಿಗೆ ನಿರುತ್ಸಾಹಕ್ಕೆ ಕಾರಣವಾಗಲಿದೆ.

ಬಿಜೆಪಿಯಿಂದ ಕಾಂಗ್ರೆಸ್ಗೆ, ಹುದ್ದೆಯ ನಿರೀಕ್ಷೆ ಮುಂದುವರಿಕೆ-ಕೆ.ಎಸ್ ಕಿರಣ್ ಕುಮಾರ್
ಇನ್ನೂ ಚಿಕ್ಕನಾಯಕನಹಳ್ಳಿ ಕ್ಷೇತ್ರದ ಬಿಜೆಪಿ ಕಟ್ಟಾಳು ಎಂದೇ ಕರೆಸಿಕೊಳ್ಳುತ್ತಿದ್ದ ಮಾಜಿ ಶಾಸಕ ಕೆ.ಎಸ್ ಕಿರಣ್ ಕುಮಾರ್ ಬಿಜೆಪಿಯಿಂದ ಎರಡನೇ ಬಾರಿ ಟಿಕೇಟ್ ವಂಚಿತರಾಗಿ ಕಾಂಗ್ರೆಸ್ ಸೇರ್ಪಡೆಯಾಗಬೇಕಾದ ಅನಿವಾರ್ಯತೆ ಸೃಷ್ಟಿಯಾಯಿತು,ಕಾಂಗ್ರೆಸ್ ಸೇರ್ಪಡೆ ನಂತರ 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಕಿರಣ್ ಕುಮಾರ್ ಗೆ ಟಿಕೇಟ್ ಕೂಡ ನೀಡಿದ್ದು 55 ಸಾವಿರಕ್ಕೂ ಹೆಚ್ಚು ಮತ ಪಡೆದು ಪರಾಭವ ಆಗಿದ್ರೂ ಕೂಡ ಪಕ್ಷ ಸಂಘಟನೆಯಲ್ಲಿ ಆಕ್ಟೀವ್ ಆಗಿದ್ದಾರೆ
ಈ ಹಿಂದೆ ಬಿಜೆಪಿಯಲ್ಲಿ ಜೈವಿಕ ಇಂಧನ ಮಂಡಳಿ ಅಧ್ಯಕ್ಷರಾಗಿದ್ದ ಕಿರಣ್ ಕುಮಾರ್ ಈಗ ಕಾಂಗ್ರೆಸ್ ನಲ್ಲಿ ಯಾವುದೇ ಅಧಿಕಾರ ಇಲ್ಲದೇ ಕಾರ್ಯಕರ್ತರ ಕೆಲಸ ಕಾರ್ಯಗಳಿಗೆ ಪರದಾಡುವಂತಹ ಸ್ಥಿತಿ ಎದುರಾಗಿದೆ
ಈಗಾಗಲೇ ಗೌರಿಶಂಕರ್ ,ಕೆ.ಎಸ್ ಕಿರಣ್ ಕುಮಾರ್ ಡಿಸಿಎಂ ಡಿಕೆಶಿ ಭೇಟಿ ಮಾಡಿದ್ದು ತಮಗೂ ಪಕ್ಷದಿಂದ ಉನ್ನತ ಉದ್ದೇ ಕೊಟ್ಟು ಪಕ್ಷ ಸಂಘಟನೆಗೆ ಅನುವು ಮಾಡಿಕೊಡಲು ಬೇಡಿಕೆಯಿಟಿದ್ದಾರೆ ಇದಕ್ಕೆ ಸಕರಾತ್ಮಕವಾಗಿ ಸ್ಪಂದಿಸಿರುವ ಡಿಕೆ ಶಿವಕುಮಾರ್ ನವೆಂಬರ್ ಬಳಿಕ ಗುಡ್ ನ್ಯೂಸ್ ಕೊಡುವುದಾಗಿ ಭರವಸೆ ನೀಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ





ಡಿ ಕೆ ಶಿವಕುಮಾರ್ ನೇತೃತ್ವ ಅಲ್ಲ ಸಮ್ಮುಖ ಅಂತಾಗಬೇಕು…