Tirupati ಯಿಂದ ನೇರವಾಗಿ ಚೆನ್ನೈನ ವಿಜಯ್ ಮನೆಗೆ ನಟಿ ತ್ರಿಷಾ ಭೇಟಿ ನೀಡಿದ್ದಾರೆ. ಟಿವಿಕೆ ಮುನ್ನಡೆ ಹಿನ್ನೆಲೆ ವಿಜಯ್ ನಿವಾಸದಲ್ಲಿ ಸಂಭ್ರಮಾಚರಣೆ.

Tirupati : ಹುಟ್ಟುಹಬ್ಬದ ಹಿನ್ನೆಲೆ ತ್ರಿಷಾ ಕೃಷ್ಣನ್ ಅವರು ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು. ಅಲ್ಲಿಂದ ನೇರವಾಗಿ ಅವರು ಚೆನ್ನೈನಲ್ಲಿರುವ ವಿಜಯ್ ಅವರ ಮನೆಗೆ ತೆರಳಿದ್ದಾರೆ.
ತಮಿಳುನಾಡಿನಲ್ಲಿ ಟಿವಿಕೆ ಭರ್ಜರಿ ಮುನ್ನಡೆ ಸಾಧಿಸಿರುವ ಹಿನ್ನೆಲೆ ವಿಜಯ್ ಅವರ ಮನೆಯಲ್ಲಿ ಸಂಭ್ರಮಾಚರಣೆಗಳು ಆರಂಭವಾಗಿವೆ. ಇದೇ ಸಂದರ್ಭದಲ್ಲಿ ತ್ರಿಷಾ ಅವರ ಆಗಮನ ಹೆಚ್ಚು ಗಮನ ಸೆಳೆದಿದೆ.
MUST READ : Davanagere ದಕ್ಷಿಣದಲ್ಲಿ ಕಾಂಗ್ರೆಸ್ ಗೆಲುವು..!!

ತಿರುಪತಿ ಪ್ರಸಾದವನ್ನು ನೀಡಲು ಮತ್ತು ವಿಜಯ್ ಅವರಿಗೆ ಅಭಿನಂದನೆಗಳನ್ನು ತಿಳಿಸಲು ತ್ರಿಷಾ ವೈಯಕ್ತಿಕವಾಗಿ ಭೇಟಿ ಮಾಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಈ ಭೇಟಿಯಿಂದ ಸಿನಿ ವಲಯದಲ್ಲೂ ಚರ್ಚೆಗಳು ಜೋರಾಗಿವೆ.
ಇದೀಗ ವಿಜಯ್ ಮನೆ ಸುತ್ತಮುತ್ತ ಭಾರೀ ಭದ್ರತೆ ವ್ಯವಸ್ಥೆ ಮಾಡಲಾಗಿದೆ. ಅಭಿಮಾನಿಗಳ ಹೆಚ್ಚುತ್ತಿರುವ ಸಂಖ್ಯೆಯನ್ನು ನಿಯಂತ್ರಿಸಲು ಪೊಲೀಸರು ದೊಡ್ಡ ಪ್ರಮಾಣದಲ್ಲಿ ನಿಯೋಜಿಸಲಾಗಿದೆ.
MUST WATCH : KORATAGERE DEVELOPMENTಆಗಿದ್ಯಾ..? PARAM ಕೆಲಸದ ಬಗ್ಗೆ ಜನ ಏನಂದ್ರು?




