ದೊಡ್ಡಆಲಹಳ್ಳಿಯಿಂದ ಸಿಎಂ ಗದ್ದುಗೆಯವರೆಗೆ – D.k Shivakumar ರಾಜಕೀಯವಾಗಿ ಬೆಳೆದು ಬಂದಿದ್ದೇ ರೋಚಕ

ಕನಕಪುರ ಬಂಡೆ ಅಂದ್ರೆ ಥಟ್ ಅಂತಾ ನೆನಪಾಗೋದು ಕಾಂಗ್ರೆಸ್ನ ಕಟ್ಟಾಳು. ಪಕ್ಷಕ್ಕಾಗಿ ಹಗಲಿರುಳು ಎನ್ನದೇ, ಮಳೆ, ಗಾಳಿ ಲೆಕ್ಕಿಸದೇ ನಿಂತವರು. ವಿದ್ಯಾರ್ಥಿ ಜೀವನದಿಂದಲೇ ನಾಯಕತ್ವ ಗುಣವನ್ನು ಹೊಂದಿರುವ ಡಿಕೆಶಿ, ಪ್ರಶ್ನಿಸುವ ಧೈರ್ಯವನ್ನು ಹೊಂದಿದ್ದರ ಜೊತೆಗೆ ನೊಂದವರಿಗೆ ಮಿಡಿಯುವ ಮನಸ್ಸು ಡಿ.ಕೆ ಶಿವಕುಮಾರ್ ಅವರದ್ದು. ನಾಯಕತ್ವ ಗುಣದಿಂದಲೇ ಡಿ.ಕೆ ಶಿವಕುಮಾರ್ ರಾಜಕೀಯದಲ್ಲಿ ಹಂತ ಹಂತವಾಗಿ ಬೆಳೆದಿದ್ದು, ಇದೀಗ ಮುಖ್ಯಮಂತ್ರ ಸ್ಥಾನ ಅಲಂಕರಿಸಲಿದ್ದಾರೆ. ಹಾಗಾದ್ರೆ ಡಿ.ಕೆ ಶಿವಕುಮಾರ್ ಅವರು ರಾಜಕೀಯದಲ್ಲಿ ಹೇಗೆ ಸಕ್ರಿಯರಾಗಿದ್ರು, ಪಕ್ಷಕ್ಕಾಗಿ ಏನೆಲ್ಲಾ ತ್ಯಾಗ ಮಾಡಿದ್ರು ಅನ್ನೋದನ್ನ ಡೀಟೆಲ್ ಆಗಿ ಹೇಳ್ತೀವಿ ಈ ಸ್ಟೋರಿಯನ್ನ ಕಂಪ್ಲೀಟ್ ಆಗಿ ನೋಡಿ.

ದೊಡ್ಡಆಲಹಳ್ಳಿಯಿಂದ ಸಿಎಂ ಗದ್ದುಗೆಯವರೆಗೆ
D.K Shivakumar ಅವರು ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ದೊಡ್ಡ ಆಲದಹಳ್ಳಿ ಗ್ರಾಮದ ಕೆಂಪೇಗೌಡ ಹಾಗೂ ಗೌರಮ್ಮ ದಂಪತಿಯ ಪುತ್ರನಾಗಿ 1962, ಮೇ 15 ರಂದು ಜನಿಸಿದ್ರು. ಆರಂಭಿಕ ಶಿಕ್ಷವನ್ನು ಕನಕಪುರದಲ್ಲೇ ಮುಗಿಸಿದ ಡಿಕೆಶಿ, ಹೆಚ್ಚಿನ ವಿದ್ಯಾಬ್ಯಾಸಕ್ಕಾಗಿ ಬೆಂಗಳೂರಿಗೆ ಬಂದರು. ಡಿಕೆಶಿ ತಮ್ಮ 18ನೇ ವಯಸ್ಸು ಇರುವಾಗಲೇ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ವಿದ್ಯಾರ್ಥಿ ವಿಭಾಗವಾದ ನ್ಯಾಷನಲ್ ಸ್ಟೂಡೆಂಡ್ಸ್ ಯೂನಿಯನ್ ಆಫ್ ಇಂಡಿಯಾಗೆ ಸೇರ್ಪಡೆ ಆದ್ರು.

1981-83ರವರೆಗೆ ಅವರು NSUI ಬೆಂಗಳೂರು ಜಿಲ್ಲಾ ಘಟಕದ ಅಧ್ಯಕ್ಷರಾಗಿ ಡಿಕೆಶಿ ಕರ್ತವ್ಯ ನಿಭಾಯಿಸಿದ್ದರು. ಆರ್.ಸಿ. ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಯುವ ಕಾಂಗ್ರೆಸ್ಗೆ ಸೇರಿ ಅದರ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಡಿಕೆಶಿ ಆಯ್ಕೆಯಾದರು. ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಕನಕಪುರ ತಾಲ್ಲೂಕಿನ ಗ್ರಾಮೀಣ ಭಾಗಗಳಲ್ಲಿ, ಉಚಿತ ವೈದ್ಯಕೀಯ ಶಿಬಿರ, ರಕ್ತದಾನ ಶಿಬಿರಗಳನ್ನು ಏರ್ಪಡಿಸುವ ಮೂಲಕ ಜನಮನ ಗೆದ್ದರು. ರಾಜಕಾರಣದಲ್ಲಿ ಕಷ್ಟ- ಸುಖಗಳನ್ನು ಎದುರಿಸಿ ಡಿಕೆಶಿ ಮೆಟ್ಟಿನಿಂತರು.

ಹಾಗಾದ್ರೆ ಡಿ.ಕೆ ಶಿವಕುಮಾರ್ ಅವರು ರಾಜಕೀಯದಲ್ಲಿ ಬೆಳೆದು ಬಂದ ಹಾದಿಯನ್ನು ನೋಡುವುದಾದ್ರೆ,
ಡಿಕೆಶಿ ರಾಜಕೀಯ ಹಾದಿಯ ಹಿನ್ನೋಟ
- 1981 ರಲ್ಲಿ ಎನ್ಎಸ್ಯುಐ ಸೇರ್ಪಡೆ, ಬೆಂಗಳೂರು ಜಿಲ್ಲಾ ಘಟಕದ ಅದ್ಯಕ್ಷ
- 1985 ರಲ್ಲಿ ದೇವೇಗೌಡರ ವಿರುದ್ಧ ಸಾತನೂರು ಕ್ಷೇತ್ರದಲ್ಲಿ ಮೊದಲ ಸೋಲು
- 1987 ರಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯ್ತಿ ಸದಸ್ಯರಾಗಿ ಆಯ್ಕೆ
- 1989ರಲ್ಲಿ ಡಿಕೆಶಿ ತಮ್ಮ 27 ವಯಸ್ಸಿಗೆ ಕಾಂಗ್ರೆಸ್ ಟಿಕೆಟ್ ಘೋಷಣೆ
- 1989ರಲ್ಲಿ ವಿಧಾನಸಭೆಗೆ ಸಾತನೂರು ಕ್ಷೇತ್ರದಿಂದ ಸ್ಪರ್ಧಿಸಿ ಮೊದಲ ಬಾರಿ ಶಾಸಕರಾಗಿ ಆಯ್ಕೆ
- 1989 ರಿಂದ 2004ರವರೆಗೂ ಸಾತನೂರು ಕ್ಷೇತ್ರದಿಂದ 4 ಬಾರಿ ಶಾಸಕರಾಗಿ ಡಿಕೆಶಿ ಆಯ್ಕೆ
- ಬಂಗಾರಪ್ಪ ಸಂಪುಟದಲ್ಲಿ ಬಂಧಿಖಾನೆ ಖಾತೆ ನಿರ್ವಹಣೆ
- ಆದ್ರೆ 1994ರಲ್ಲಿ ಸಾತನೂರು ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಕೈ ತಪ್ಪಿತು
- 1994ರಲ್ಲಿ ಸಾತನೂರು ಕ್ಷೇತ್ರದಿಂದ ಪಕ್ಷೇತರರಾಗಿ ಸ್ಪರ್ಧಿಸಿ ಭರ್ಜರಿ ಗೆಲುವು
- 1999ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಾತನೂರು ಕ್ಷೇತ್ರದಿಂದ ಸ್ಪರ್ಧಿಸಿ ಜಯ
- 2008 ರಲ್ಲಿ ಸಾತನೂರು ಕ್ಷೇತ್ರ ಪುನರ್ ವಿಂಗಡನೆಯಾಗಿ ಕನಕಪುರ ಕ್ಷೇತ್ರವಾಯ್ತು
- 2008ರಿಂದ 2023ರವರೆಗೆ ಕನಕಪುರ ಕ್ಷೇತ್ರದಿಂದ ಸತತವಾಗಿ ಡಿಕೆಶಿ ಚುನಾಯಿತ
- 2010ರಲ್ಲಿ ಕೆಪಿಸಿಸಿ ಕಾರ್ಯಧ್ಯಕ್ಷರಾಗಿ ಆಯ್ಕೆ
- 2013ರಲ್ಲಿ ಸಿದ್ದರಾಮಯ್ಯ ಸಂಪುಟದಲ್ಲಿ ಇಂಧನ ಸಚಿವರಾಗಿ ಡಿಕೆಶಿ ಆಯ್ಕೆ
- 2018ರ ಸಮ್ಮಿಶ್ರ ಸರ್ಕಾರದಲ್ಲಿ ಜಲಸಂಪನ್ಮೂಲ ಸಚಿವರಾಗಿದ್ದ ಕನಕಪುರ ಬಂಡೆ
- 2020ರ ಮಾರ್ಚ್ನಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ
- 2023ರ ಕಾಂಗ್ರೆಸ್ ಸರ್ಕಾರದಲ್ಲಿ ಡಿಸಿಎಂ, ಬೆಂಗಳೂರು ನಗರಾಭಿವೃದ್ಧಿ ಖಾತೆ ನಿರ್ವಹಣೆ
- ಇದೀಗ 2026ರ ಮೇನಲ್ಲಿ ಮುಖ್ಯಮಂತ್ರಿ ಆಗುವ ಅವಕಾಶ ಸಿಕ್ಕಿದೆ. ಈ ಮೂಲಕ ಬಹು ವರ್ಷಗಳ ಡಿಕೆಶಿ ಕನಸು ನನಸಗುವ ಕಾಲ ಸನಿಹಕ್ಕೆ ಬಂದಿದೆ.
ಇದನ್ನು ಓದಿ : ಪ್ರಮಾಣವಚನ ಕಾರ್ಯಕ್ರಮಕ್ಕೆ ಗಣ್ಯರನ್ನು ಆಹ್ವಾನಿಸಿದ ಡಿಕೆ ಶಿವಕುಮಾರ್

ಇನ್ನು 40 ವರ್ಷಗಳ ರಾಜಕೀಯ ಜೀವನದಲ್ಲಿ ಸಾಕಷ್ಟು ಹೋರಾಟಗಳನ್ನು ಮಾಡಿಕೊಂಡಿದ್ದು, ಜೈಲಿಗೂ ಕೂಡ ಹೋಗಿ ಬಂದಿದ್ದಾರೆ. ಹಾಗಾದ್ರೆ ಯಾವ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲುಪಾಲಾಗಿದ್ರು ಅಂತಾ ನೋಡೊದಾದ್ರೆ,
ಜೈಲುವಾಸ ಅನುಭವಿಸಿದ್ದ ಕನಕಪುರ ಬಂಡೆ
- 2019ರ ಸೆಫ್ಟೆಂಬರ್ 3ರಂದು ಅಕ್ರಮ ಹಣ ವರ್ಗಾವಣೆ ಕೇಸ್ನಲ್ಲಿ ಡಿಕೆಶಿ ಇ.ಡಿ ಬಂಧನ
- ತಿಹಾರ್ ಜೈಲಿನಲ್ಲಿ ಬರೋಬ್ಬರಿ 48 ದಿನಗಳ ಕಾಲ ಡಿಕೆಶಿ ಜೈಲುವಾಸ
- 2019ರ ಅಕ್ಟೋಬರ್ 23ರಂದು ದೆಹಲಿ ಕೋರ್ಟ್ ಡಿಕೆಶಿಗೆ ಷರತ್ತು ಬದ್ಧ ಜಮೀನು

ಕನಕಪುರದ ಬಂಡೆ, ಟ್ರಬಲ್ ಶೂಟರ್ ಎಂದು ಖ್ಯಾತಿ
ಇನ್ನು ಒಮ್ಮೆ ಕಾಂಗ್ರೆಸ್ ಶಾಸಕರು ಬಿಜೆಪಿ ಜೊತೆ ಕೈ ಜೋಡಿಸಲು ಮುಂದಾಗಿದ್ದು, ಮುಂಬೈನ ಹೋಟೆಲ್ನಲ್ಲಿ ತಂಗಿದ್ದ ವೇಳೆ ಕೈ ಶಾಸಕರನ್ನು ವಾಪಸ್ ಕರೆತರುವ ನಿಟ್ಟಿನಲ್ಲಿ ಮಳೆಯನ್ನು ಲೆಕ್ಕಿಸದೇ ಬೀದಿಯಲ್ಲಿ ಡಿಕೆಶಿ ನಿಂತಿದ್ರು. ಅಲ್ದೇ ರಾಜ್ಯ ಮಾತ್ರವಲ್ಲದೇ ಬೇರೆ ರಾಜ್ಯದಲ್ಲೂ ಪಕ್ಷವನ್ನು ಉಳಿಸುವ ಹಾಗೂ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಡಿಕೆಶಿ ಅವರ ಪಾತ್ರ ಅಪಾರವಾದದ್ದು. ಹೀಗಾಗಿಯೇ ಡಿಕೆಶಿಯನ್ನು ಕನಕಪುರದ ಬಂಡೆ, ಟ್ರಬಲ್ ಶೂಟರ್ ಅಂತಾ ಖ್ಯಾತಿ ಪಡೆದಿದ್ದವರಾಗಿದ್ದಾರೆ.

ಇದನ್ನು ನೋಡಿ : ನಮ್ಮಪ್ಪ ಎರಡು ಹುದ್ದೆ ಡಿಮ್ಯಾಂಡ್ ಮಾಡ್ತಿದ್ದಾರೆ – ಸಿಕ್ಕರೆ ಒಳ್ಳೆಯದೇ ಎಂದ PRIYANKA JARKIHOLI




