13 ಸಚಿವರೊಂದಿಗೆ ಪ್ರಮಾಣವಚನ ಸ್ವೀಕರಿಸಲಿರುವ DK Shivakumar.

ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿರುವ ಮಹತ್ವದ ಬೆಳವಣಿಗೆಯೊಂದರಲ್ಲಿ, ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಇಂದು ಪ್ರಮಾಣವಚನ ಸ್ವೀಕರಿಸುತ್ತಿದ್ದಾರೆ. ಇದರ ಬೆನ್ನಲ್ಲೇ ಅವರ ಸಚಿವ ಸಂಪುಟ ಸೇರಲಿರುವ ನೂತನ ಸಚಿವರ ಮೊದಲ ಅಧಿಕೃತ ಪಟ್ಟಿ ಪ್ರಕಟಗೊಂಡಿದೆ.
ಬಹುತೇಕ ಹಿರಿಯ ಸಚಿವರಿಗೆ DK ಮಂತ್ರಿ ಮಂಡಲದಲ್ಲಿಯೂ ಸ್ಥಾನ
ಕಾಂಗ್ರೆಸ್ ಹೈಕಮಾಂಡ್ ಸುದೀರ್ಘ ಸಮಾಲೋಚನೆಗಳ ಬಳಿಕ ಸಚಿವ ಸಂಪುಟದ ರೂಪುರೇಷೆಯನ್ನು ಅಂತಿಮಗೊಳಿಸಿದ್ದು, ಅನುಭವಿ ಹಾಗೂ ಹಿರಿಯ ನಾಯಕರಿಗೆ ಮೊದಲ ಹಂತದಲ್ಲೇ ಅವಕಾಶ ನೀಡಲಾಗಿದೆ ಎನ್ನಲಾಗಿದೆ. ಸಿದ್ದರಾಮಯ್ಯ ಸಂಪುಟದಲ್ಲಿದ್ದ ಬಹುತೇಕ ಹಿರಿಯ ಸಚಿವರಿಗೆ ಡಿ.ಕೆ.ಶಿವಕುಮಾರ್ ಮಂತ್ರಿ ಮಂಡಲದಲ್ಲಿಯೂ ಸ್ಥಾನ ನೀಡಲಾಗಿದೆ.

ಪ್ರಮಾಣವಚನ ಸ್ವೀಕರಿಸಲಿರುವ 13 ಸಚಿವರು
ಸಚಿವ ಸ್ಥಾನಕ್ಕೆ ಆಯ್ಕೆಯಾಗಿರುವ ನಾಯಕರಿಗೆ ಸ್ವತಃ DK Shivakumar ಕರೆ ಮಾಡಿ, ಇಂದು ಸಂಜೆ ನಡೆಯಲಿರುವ ಪ್ರಮಾಣವಚನ ಸಮಾರಂಭದಲ್ಲಿ ಭಾಗವಹಿಸುವಂತೆ ಆಹ್ವಾನ ನೀಡಿದ್ದಾರೆ. ಮೊದಲ ಹಂತದಲ್ಲಿ ಸುಮಾರು 13 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಇದನ್ನು ಓದಿ : ಸಾತನೂರಿನಿಂದ ವಿಧಾನಸಭೆವರೆಗೂ ಕನಕಪುರ ಬಂಡೆಯ ರೋಚಕ ಜರ್ನಿ!

ಸಚಿವ ಸ್ಥಾನಕ್ಕೆ ಆಯ್ಕೆಯಾಗಿರುವ ನಾಯಕರ ಪಟ್ಟಿ
- ಡಾ. ಜಿ. ಪರಮೇಶ್ವರ್
- ಕೆ.ಹೆಚ್. ಮುನಿಯಪ್ಪ
- ಕೆ.ಜೆ. ಜಾರ್ಜ್
- ಕೃಷ್ಣ ಬೈರೇಗೌಡ
- ಯತೀಂದ್ರ ಸಿದ್ದರಾಮಯ್ಯ
- ಎಂ.ಬಿ. ಪಾಟೀಲ್
- ಪ್ರಿಯಾಂಕ್ ಖರ್ಗೆ
- ರಾಮಲಿಂಗಾ ರೆಡ್ಡಿ
- ದಿನೇಶ್ ಗುಂಡೂರಾವ್
- ಭೈರತಿ ಸುರೇಶ್
- ಹೆಚ್.ಕೆ. ಪಾಟೀಲ್ ಅಥವಾ ಈಶ್ವರ್ ಖಂಡ್ರೆ
- ಶರಣಪ್ರಕಾಶ್ ಪಾಟೀಲ್
- ಸತೀಶ್ ಜಾರಕಿಹೊಳಿ
- ಯು.ಟಿ. ಖಾದರ್
ಇದನ್ನು ನೋಡಿ : DCM ಆಗಿ DR.G.PARAMESHWAR ಪ್ರಮಾಣ ವಚನ ಸ್ವೀಕಾರ




