
ಒಂದ್ಕಡೆ ಅಭಿವೃದ್ಧಿ ಹೆಸರಲ್ಲಿ ಕೆಲಸ ಮಾಡ್ತಾರೆ..ಆದ್ರೆ ಅದನ್ನ ಅರ್ಧಕ್ಕೆ ಬಿಟ್ಟು ಹೋಗ್ತಾ ಇದ್ದು, ಇದ್ರಿಂದ ಜನರು ಪರದಾಡುವಂತಾಗಿದೆ. ತುಮಕೂರು ಜಿಲ್ಲೆ ಶಿರಾ ನಗರದಲ್ಲಿ ಜಲಜೀವನ್ ಮಿಷನ್ ಯೋಜನೆ ಅಡಿ ಮನೆ ಮನೆ ಗಂಗೆ ಮೂಲಕ ನೀರನ್ನು ಸರಬರಾಜು ಮಾಡಲು ಇಲಾಖೆ ಮುಂದಾಗಿದೆ. ಆದ್ರೆ ಮನೆ ಮನೆ ಗಂಗೆ ಯೋಜನೆಯಡಿ ರಸ್ತೆಗಳ ಮದ್ಯದಲ್ಲಿ ಗುಂಡಿಯನ್ನು ತೆಗೆಯಲಾಗಿದ್ದು, ಕಾಮಗಾರಿ ವಿಳಂಬವಾಗಿದ್ದರಿಂದ ರಸ್ತೆಯನ್ನು ಅರ್ಧಕ್ಕೆ ತೆಗೆದು ಮುಚ್ಚದೇ ಹೋಗಿರೋದು ವಾಹನ ಸವಾರರು ಹಾಗೂ ಸಾರ್ವಜನಿಕರು ಪರದಾಡುವಂತಾಗಿದೆ.
ಶಿರಾ ನಗರದ ಬಹುತೇಕ ಏರಿಯಾಗಳ ರಸ್ತೆಗಳನ್ನು ಜಲ ಜೀವನ್ ಮಿಷನ್ ಅಡಿಯಲ್ಲಿ ಮನೆ ಮನೆಗೆ ನೀರನ್ನು ಸರಬರಾಜು ಮಾಡುವ ನಿಟ್ಟಿನಲ್ಲಿ, ಕಾಮರಾರಿ ಆರಂಭ ಮಾಡಲಾಗಿತ್ತು. ಆದ್ರೆ ಕಾಮಗಾರಿಯನ್ನು ಪೂರ್ಣಗೊಳಿಸದೇ ವಿಳಂಬ ಮಾಡ್ತಾ ಇರೋದ್ರಿಂದ ಜನರಿಗೆ ತೊಂದ್ರೆ ಆಗ್ತಾ ಇದೆ. ಇನ್ನು ರಸ್ತೆ ಕಾಮಗಾರಿ ಆಗುತ್ತೆ ಎಂದು ಕನಿಷ್ಠ ಒಂದು ಸೂಚನಾ ಫಲಕವನ್ನು ಕೂಡ ಹಾಕದೇ ಕಾಮಗಾರಿ ಮಾಡುತ್ತಿರೋದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಇನ್ನು ಈಗ ಮಳೆ ಆಗ್ತಾ ಇದ್ದು, ರಸ್ತೆ ಕಾಮಗಾರಿ ಅರ್ಧಕ್ಕೆ ನಿಂತಿರೋದ್ರಿಂದ ರಸ್ತೆಗಳು ಕೆಸರು ಗದ್ದೆ ಆಗ್ತಾ ಇದ್ದು, ಶಾಲಾ ಮಕ್ಕಳು, ಜನರು ಕಾಲು ಜಾರಿ ಬಿದ್ದು ಕೈ ಕಾಲು ಮುರಿದು ಆಸ್ಪತ್ರೆ ಸೇರುತ್ತಿದ್ದಾರೆ, ವಾರ್ಡ್ ನಿವಾಸಿಗಳು ಗುತ್ತಿಗೆದಾರರಿಗೆ ತರಾಟೆಗೆ ತೆಗೆದುಕೊಂಡಿದ್ದರು ಕೂಡ ಗುತ್ತಿಗೆದಾರರು ಮಾತ್ರ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿ, ಅಗೆದ ರಸ್ತೆಯನ್ನು ಹಾಗೆಯೇ ಬಿಟ್ಟು ಹೋಗಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ರು




