RBI ನಲ್ಲಿ ಯುವ ವೃತ್ತಿಪರರ ನೇಮಕಾತಿ – ಮಾಸಿಕ 1.5 ಲಕ್ಷ ರೂ. ಸ್ಟೈಫಂಡ್!

ಭಾರತೀಯ ರಿಸರ್ವ್ ಬ್ಯಾಂಕ್ನಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಲು ಬಯಸುವ ಪ್ರತಿಭಾವಂತ ಯುವಕರಿಗೆ ಸುವರ್ಣಾವಕಾಶ ದೊರೆತಿದೆ. RBI ವಿವಿಧ ಪ್ರಮುಖ ಪರಿಣತಿ ಕ್ಷೇತ್ರಗಳಲ್ಲಿ ಯುವ ವೃತ್ತಿಪರರ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ.
ಆಯ್ಕೆಯಾಗುವ ಅಭ್ಯರ್ಥಿಗಳನ್ನು ಮುಂಬೈನಲ್ಲಿರುವ ಆರ್ಬಿಐ ಕೇಂದ್ರ ಕಚೇರಿಯಲ್ಲಿ ನಿಯೋಜಿಸಲಾಗುತ್ತದೆ. ಹಣಕಾಸು, ತಂತ್ರಜ್ಞಾನ ಮತ್ತು ನೀತಿ ಸಂಶೋಧನಾ ಕ್ಷೇತ್ರಗಳಲ್ಲಿ ಆಸಕ್ತಿ ಹೊಂದಿರುವ ಅಭ್ಯರ್ಥಿಗಳಿಗೆ ಇದು ಅಪರೂಪದ ಅವಕಾಶವಾಗಿದೆ.
ಪ್ರಮುಖ ಕ್ಷೇತ್ರಗಳು
- ಕೃತಕ ಬುದ್ಧಿಮತ್ತೆ (AI)
- ಕ್ವಾಂಟಮ್ ತಂತ್ರಜ್ಞಾನ
- ಡೇಟಾ ಅನಾಲಿಟಿಕ್ಸ್
- ಹವಾಮಾನ ಅಪಾಯ ಮತ್ತು ಸುಸ್ಥಿರ ಹಣಕಾಸು
- ಹಣಕಾಸು ಮಾರುಕಟ್ಟೆಗಳು
- ಪಾವತಿ ವ್ಯವಸ್ಥೆಗಳು
- ಕ್ರೆಡಿಟ್ ಅಪಾಯ ವಿಶ್ಲೇಷಣೆ
- ನೀತಿ ಸಂಶೋಧನೆ
ಈ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ₹1.5 ಲಕ್ಷ ನಿಗದಿತ ಸ್ಟೈಫಂಡ್ ನೀಡಲಾಗುತ್ತದೆ.

ವೇತನ ಮತ್ತು ಒಪ್ಪಂದ
- ಮಾಸಿಕ ಸ್ಟೈಫಂಡ್ : ₹1.5 ಲಕ್ಷ
- ಆರಂಭಿಕ ಒಪ್ಪಂದ : 3 ವರ್ಷ
- ಗರಿಷ್ಠ ಅವಧಿ : 5 ವರ್ಷ
ಇದನ್ನು ಓದಿ : ಇಸ್ರೋದಲ್ಲಿ ರಿಸರ್ಚ್ ಫೆಲೋ ಹುದ್ದೆಗಳಿಗೆ ಅರ್ಜಿ ಆಹ್ವಾನ
ನೇಮಕಾತಿ ಪೂರ್ಣಾವಧಿಯ ಒಪ್ಪಂದದ ಆಧಾರದ ಮೇಲೆ ನಡೆಯಲಿದ್ದು, ಕಾರ್ಯಕ್ಷಮತೆಯ ಆಧಾರದಲ್ಲಿ ಅವಧಿಯನ್ನು ವಿಸ್ತರಿಸುವ ಅವಕಾಶವೂ ಇದೆ.
ಅಗತ್ಯ ದಾಖಲೆಗಳು
- ಸಿವಿ (CV)
- ಶೈಕ್ಷಣಿಕ ಪ್ರಮಾಣಪತ್ರಗಳು
- Statement of Interest
- ಬರವಣಿಗೆ ಮಾದರಿ
- ರೆಫರೆನ್ಸ್ ಅಥವಾ ಶಿಫಾರಸು ಪತ್ರ
ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯೊಂದಿಗೆ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಇಮೇಲ್ ಮೂಲಕ ಅರ್ಜಿ ಸಲ್ಲಿಸಬೇಕು. ಒಂದಕ್ಕಿಂತ ಹೆಚ್ಚು ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಪ್ರತಿ ಹುದ್ದೆಗೆ ಪ್ರತ್ಯೇಕ ಅರ್ಜಿ ಕಳುಹಿಸುವುದು ಕಡ್ಡಾಯವಾಗಿದೆ.
ಆಯ್ಕೆ ಪ್ರಕ್ರಿಯೆ
- ಪ್ರಾಥಮಿಕ ಪರಿಶೀಲನೆ
- ದಾಖಲೆಗಳ ಪರಿಶೀಲನೆ
- ವೈಯಕ್ತಿಕ ಸಂದರ್ಶನ

ಶಾರ್ಟ್ಲಿಸ್ಟ್ ಆಗುವ ಅಭ್ಯರ್ಥಿಗಳಿಗೆ ಸಂದರ್ಶನದ ದಿನಾಂಕ ಮತ್ತು ಸಮಯವನ್ನು ಇಮೇಲ್ ಮೂಲಕ ತಿಳಿಸಲಾಗುತ್ತದೆ. ಅಪೂರ್ಣ ಅರ್ಜಿಗಳು ಹಾಗೂ ಜುಲೈ 6ರ ನಂತರ ಸಲ್ಲಿಕೆಯಾಗುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಆರ್ಬಿಐ ಸ್ಪಷ್ಟಪಡಿಸಿದೆ.
ಇದನ್ನು ನೋಡಿ : ಸರ್ಕಾರಿ ಶಾಲೆಗೆ DC ದಿಢೀರ್ VISIT -ಮಕ್ಕಳಿಗೆ ಪೌಷ್ಠಿಕ ಆಹಾರ ನೀಡದ್ದಕ್ಕೆ ಗರಂ.!




