ರಾಮನಗರ ಕಾಂಗ್ರೆಸ್ ಶಾಸಕ Iqbal Hussain ಗೆ ಹೃದಯಾಘಾತ – ಓಪನ್ ಹಾರ್ಟ್ ಸರ್ಜರಿಗೆ ಸಿದ್ಧತೆ.

ರಾಮನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ ( Iqbal Hussain ) ಅವರಿಗೆ ಹೃದಯಾಘಾತವಾಗಿದ್ದು, ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಬೆಂಗಳೂರು ಆಸ್ಪತ್ರೆಗೆ ದಾಖಲು
ಸದ್ಯ ಬೆಂಗಳೂರಿನ ವೈದೇಹಿ ಆಸ್ಪತ್ರೆಯಲ್ಲಿ ಇಕ್ಬಾಲ್ ಹುಸೇನ್ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ ಎನ್ನಲಾಗ್ತಿದೆ. ಸಿಎಂ ಡಿಕೆಶಿವಕುಮಾರ್ ಆಪ್ತರಾಗಿದ್ದು, ಶಾಸಕರ ಆರೋಗ್ಯ ವಿಚಾರಿಸಲು ಸಿಎಂ ಡಿಕೆಶಿ ಆಸ್ಪತ್ರೆಗೆ ಭೇಟಿ ನೀಡಲಿದ್ದಾರೆ.

ಡಿಕೆ ಶಿವಕುಮಾರ್ ಸಿಎಂ ಆಗ್ಬೇಕು ಎನ್ನುತ್ತಿದ್ದ ಇಕ್ಬಾಲ್ ಹುಸೇನ್
ಇಕ್ಬಾಲ್ ಹುಸೇನ್ ಅವರು ಹಲವು ತಿಂಗಳುಗಳಿಂದ ಡಿ.ಕೆ. ಶಿವಕುಮಾರ್ ಅವರೇ ರಾಜ್ಯದ ಮುಖ್ಯಮಂತ್ರಿಯಾಗುತ್ತಾರೆ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ರು.ಕಡೆಗೂ ಸಿಎಂಸ ಸ್ಥಾಣಕ್ಕೇರಿದ್ದ ಡಿಕೆಶಿ, ಸ್ವಕ್ಷೇತ್ರ ಭೇಟಿ ಕೊಟ್ಟಾಗ ಆಪ್ತ ಶಾಸಕ ಇಕ್ಬಾಲ್ ಹುಸೇನ್ ಅವರ ಬಗ್ಗೆ ಮಾತಲ್ಲೇ ಕಾಲೆಳೆದಿದ್ದರು.
ಇದನ್ನು ಓದಿ : ಗೃಹಲಕ್ಷ್ಮಿ, ಗೃಹಜ್ಯೋತಿ ಸೇರಿದಂತೆ ಯಾವುದೇ ಗ್ಯಾರಂಟಿ ಯೋಜನೆ ನಿಲ್ಲಲ್ಲ- DK Shivakumar ಸ್ಪಷ್ಟನೆ..!!

ನಾನು ಜಾಸ್ತಿ ಮಾತಾಡಬೇಡಪ್ಪಾ ಅಂತಾ Iqbal Hussain ಗೆ ಹೇಳುತ್ತಿದ್ದೆ
“ಇಕ್ಬಾಲ್ ಹುಸೇನ್ ಜಾಸ್ತಿ ಮಾತನಾಡಬೇಡ ಎಂದು ಹೇಳಿದ್ದೆ, ನೋಟಿಸ್ ಕೂಡ ನೀಡಿದ್ದೆ. ಆದರೂ ಆತ ತನ್ನ ಅಭಿಪ್ರಾಯವನ್ನು ಬಿಟ್ಟಿರಲಿಲ್ಲ. ನಾನು ಸಿಎಂ ಆಗಬೇಕು ಎಂಬುದು ಅವನ ಆಸೆಯಾಗಿತ್ತು, ಈಗ ಅದು ನೆರವೇರಿದೆ” ಎಂದು ಭಾಷಣದಲ್ಲಿ ಹೇಳಿದ್ರು.

ಇದನ್ನು ನೋಡಿ : MAY 15ಕ್ಕೆ DKS CM ಆಗೋದು FIX – MINISTER IKBAL HUSSAIN ಸ್ಪೋಟಕ ಹೇಳಿಕೆ..!




