‘ಅಮೃತವರ್ಷಿಣಿ’ Rajini ವಿರುದ್ಧ ಗಂಭೀರ ಆರೋಪ – ನಿರ್ದೇಶಕರಿಂದ ಫಿಲಂ ಚೇಂಬರ್ಗೆ ದೂರು

‘ಅಮೃತವರ್ಷಿಣಿ’ ಧಾರಾವಾಹಿ ಖ್ಯಾತಿಯ ರಜಿನಿ ಅಭಿನಯದ ‘ಅಸುರನ ಕೈಯಲ್ಲಿ ಪಾರಿಜಾತ’ ಸಿನಿಮಾ ಬಿಡುಗಡೆಗೆ ಸಜ್ಜಾಗಿರುವ ಬೆನ್ನಲ್ಲೇ ವಿವಾದಕ್ಕೀಡಾಗಿದೆ. ಈ ಚಿತ್ರವನ್ನು ವಿಘ್ನೇಶ್ ನಿರ್ದೇಶಿಸಿದ್ದು, ಕಾರ್ತಿಕ್ ಮೀಕ್ಷಾ ಬ್ಯಾನರ್ ಅಡಿಯಲ್ಲಿ ನಿರ್ಮಿಸಿದ್ದಾರೆ. ಇದೇ ಮೇ 22ರಂದು ಚಿತ್ರ ತೆರೆಕಾಣಲಿದ್ದು, ಪ್ರಚಾರ ಹಂತದಲ್ಲಿ ಗೊಂದಲ ಉಂಟಾಗಿದೆ.
ಫಿಲ್ಮ್ ಚೇಂಬರ್ಗೆ ದೂರು
ಚಿತ್ರದ ಪ್ರಚಾರಕ್ಕೆ ಸಹಕರಿಸುತ್ತಿಲ್ಲ ಎಂಬ ಗಂಭೀರ ಆರೋಪವನ್ನು ನಿರ್ಮಾಪಕರು ಮತ್ತು ನಿರ್ದೇಶಕರು ರಜಿನಿ ವಿರುದ್ಧ ಮಾಡಿದ್ದಾರೆ. ಈ ಸಂಬಂಧ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (ಫಿಲ್ಮ್ ಚೇಂಬರ್)ಗೆ ಅಧಿಕೃತ ದೂರು ನೀಡಲಾಗಿದೆ.
READ THIS : ಹೋಟೆಲ್ ಊಟ-ತಿಂಡಿ ತಿನ್ನೋರಿಗೆ ದರ ಏರಿಕೆಯ ಶಾಕ್!

ನಂಬರ್ ಅನ್ನ ಬ್ಲಾಕ್ ಮಾಡಿದ್ದಾರೆ ಎಂದು ಆಕ್ರೋಶ
ಚಿತ್ರತಂಡದ ಫೋನ್ ಕರೆಗಳನ್ನು ರಜಿನಿ ಸ್ವೀಕರಿಸುತ್ತಿಲ್ಲ ಮತ್ತು ನಿರ್ದೇಶಕರ ನಂಬರ್ ಅನ್ನ ಬ್ಲಾಕ್ ಮಾಡಿದ್ದಾರೆ ಎಂದು ವಿಘ್ನೇಶ್ ಆಕ್ರೋಶ ಹೊರಹಾಕಿದ್ದಾರೆ. ಸಿನಿಮಾದ ಪ್ರಚಾರಕ್ಕೆ ಬರುವಂತೆ ನಟಿಯನ್ನು ಕರೆದರೆ ಹೆಚ್ಚುವರಿ ಹಣ ಕೇಳುತ್ತಿದ್ದಾರೆ ಎಂದು ನಿರ್ದೇಶಕ ವಿಘ್ನೇಶ್ ಹೇಳಿದ್ದಾರೆ.

ಅಷ್ಟಕ್ಕೂಆಗಿದ್ದೇನು?
Rajini ಅವರು ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡ ಸಂಭಾವನೆಯನ್ನ ಪಡೆದಿದ್ದಾರೆ. ಸಿನಿಮಾದದ ಪ್ರಚಾರಕ್ಕಾಗಿ ಬರಲು ನಟಿ ರಜಿನಿ ಅವರು ಹೆಚ್ಚುವರಿ ಹಣದ ಬೇಡಿಕೆ ಇಟ್ಟಿದ್ದಾರೆ. ಸಿನಿಮಾ ರೀಲ್ಸ್ಗಳನ್ನ ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳಲು ಕೇಳಿದಾಗಲೂ, ಅದಕ್ಕೆ ಪ್ರತ್ಯೇಕ ಹಣ ನೀಡುವಂತೆ ಕೇಳುತ್ತಿದ್ದಾರೆ ಎನ್ನಲಾಗಿದೆ.

MUST WATCH : KORATAGERE DEVELOPMENTಆಗಿದ್ಯಾ..? PARAM ಕೆಲಸದ ಬಗ್ಗೆ ಜನ ಏನಂದ್ರು?




