Bengaluru : ವಾಣಿಜ್ಯ ಸಿಲಿಂಡರ್ ದರ ಏರಿಕೆ ಬೆನ್ನಲ್ಲೆ, ಊಟ-ತಿಂಡಿಯ ದರ ದುಪ್ಪಟ್ಟು – ಗ್ರಾಹಕರು ಕಂಗಾಲು!

Bengaluru : ಮಧ್ಯಪ್ರಾಚ್ಯ ಯುದ್ಧದ ಭೀತಿ ಹಾಗೂ ಜಾಗತಿಕ ತೈಲ ಮಾರುಕಟ್ಟೆಯಲ್ಲಿನ ಏರಿಳಿತದಿಂದಾಗಿ ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ ದರ ದಿಢೀರ್ ಏರಿಕೆಯಾಗಿದ್ದು, ಇದರ ನೇರ ಪರಿಣಾಮ ಹೋಟೆಲ್ ಊಟ-ಉಪಹಾರದ ದರಗಳ ಮೇಲೆ ಬೀರಿದೆ. ಇನ್ನು ಈಗಾಗಲೇ ಕೆಲ ಹೋಟೆಗಳಲದಲಿ ದರ ಏರಿಕೆ ಜಾರಿಗೆ ಬಂದಿದೆ.

ಸಿಲಿಂಡರ್ ದರ ಎಷ್ಟಿದೆ?
ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 993 ರೂ. ಏರಿಕೆಯಾಗಿದ್ದು, 19 ಕೆಜಿ ತೂಕದ ಸಿಲಿಂಡರ್ ದರ ಈಗ 3,154 ರೂ. ತಲುಪಿದೆ. ಇದ್ರಿಂದಾಗಿ ಹೋಟೆಲ್ ಮಾಲೀಕರು ಸಂಕಷ್ಟಕ್ಕೀಡಾಗಿದ್ದಾರೆ.
READ THIS : ಬಾಗಲಕೋಟೆಯಲ್ಲಿ ಉಮೇಶ್ ಮೇಟಿಗೆ ಭರ್ಜರಿ ಗೆಲುವು!

ಹೋಟೆಲ್ ಊಟ-ತಿಂಡಿ ತಿನ್ನೋರಿಗೆ ಶಾಕ್!
ಅನಿಲ ದರ ಏರಿಕೆಯಿಂದ ಹೋಟೆಲ್ ಮೆನು ಸಂಪೂರ್ಣವಾಗಿ ದುಬಾರಿಯಾಗಿದೆ. ಇಡ್ಲಿ, ವಡಾ, ಉಪ್ಪಿಟ್ಟು, ಪುಲಾವ್ ಹಾಗೂ ದೋಸೆಗಳ ಬೆಲೆ 5 ರಿಂದ 10 ರೂಪಾಯಿಗಳ ವರೆಗೆ ಏರಿಕೆಯಾಗಿದೆ. ಟೀ ಮತ್ತು ಕಾಫಿಯ ಬೆಲೆಯೂ 2ರಿಂದ 5 ರೂಪಾಯಿಗಳವರೆಗೆ ಹೆಚ್ಚಳವಾಗಿದೆ.

Bengaluru – ಗ್ರಾಹಕರಲ್ಲಿ ಆತಂಕ ಮತ್ತು ಅಸಮಾಧಾನ
ದಿನನಿತ್ಯ ಹೋಟೆಲ್ ಆಹಾರವನ್ನೇ ಅವಲಂಬಿಸಿರುವ ಬ್ಯಾಚುಲರ್ಗಳು ಹಾಗೂ ಮಧ್ಯಮ ವರ್ಗದ ಕುಟುಂಬಗಳು ಈ ಬೆಲೆ ಏರಿಕೆಯಿಂದ ಕಂಗಾಲಾಗಿವೆ. “ಈಗಾಗಲೇ ಮನೆ ಬಾಡಿಗೆ, ಪ್ರಯಾಣ ವೆಚ್ಚ ಹೆಚ್ಚಾಗಿದೆ. ಈಗ ಹೋಟೆಲ್ ಊಟವೂ ದುಬಾರಿಯಾದರೆ ಬದುಕುವುದು ಹೇಗೆ?” ಎಂದು ಗ್ರಾಹಕರು ಪ್ರಶ್ನಿಸುತ್ತಿದ್ದಾರೆ. ಒಟ್ಟಿನಲ್ಲಿ ಯುದ್ಧದ ಎಫೆಕ್ಟ್ ಈಗ ಬೆಂಗಳೂರಿಗರ ತಟ್ಟೆಯ ಮೇಲೆ ಪ್ರಭಾವ ಬೀರಿದೆ.

MUST WATCH : ತಮಿಳುನಾಡಿನಲ್ಲಿ ದಳಪತಿ ವಿಜಯ ಯಾತ್ರೆ – ಮೊದಲ ಚುನಾವಣೆಯಲ್ಲಿ TVK ಕಮಾಲ್..!




