R.Ashok : ವಿಧಾನಸಭೆಯ ವಿಪಕ್ಷ ನಾಯಕ ಆರ್. ಅಶೋಕ ಅವರ ಪೊಲೀಸ್ ಬೆಂಗಾವಲು ವಾಹನದ ಚಾಲಕ ಶರಣಪ್ಪ (33) ಅವರು ಬುಧವಾರ (ನೆನ್ನ) ರಾತ್ರಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಬಾಪೂಜಿ ನಗರದಲ್ಲಿ ಘಟನೆ
ಬೆಂಗಳೂರಿನ ಬಾಪೂಜಿ ನಗರದಲ್ಲಿರುವ ಬಾಡಿಗೆ ಮನೆಯಲ್ಲಿ ಶರಣಪ್ಪ ಅವರು ಈ ಕೃತ್ಯ ಕೈಗೊಂಡಿದ್ದು, ಮನೆಯಲ್ಲಿ ಯಾರು ಇಲ್ಲದ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಪತ್ನಿ ಪೊಲೀಸ್ ಕಾನ್ಸ್ಟೆಬಲ್
ಶರಣಪ್ಪ ಅವರು ಮಾಗಡಿ ರಸ್ತೆ ಸಂಚಾರ ಪೊಲೀಸ್ ಠಾಣೆಯಲ್ಲಿ ಕಾನ್ಸ್ಟೆಬಲ್ ಆಗಿರುವ ಪತ್ನಿ ಶೈಲಶ್ರೀ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಆತ್ಮಹತ್ಯೆಯ ಬಳಿಕ ಕುಟುಂಬದಲ್ಲಿ ಆಘಾತದ ಪರಿಸ್ಥಿತಿ ಉಂಟಾಗಿದೆ.
ಇದನ್ನು ನೋಡಿ : TUMAKURU AMANIKERE | ಅಮಾನಿಕೆರೆಯಲ್ಲಿ ಸೇಫ್ಟಿನೇ ಇಲ್ಲ ಯಾರ್ ಬೇಕಾದ್ರು ಒಳಗೆ ಹೋಗಬಹುದು | TUMAKUR NEWS

ಕಲಬುರಗಿ ಮೂಲದ ಶರಣಪ್ಪ
ಮೂಲತಃ ಕಲಬುರಗಿ ಜಿಲ್ಲೆಗೆ ಸೇರಿದ ಶರಣಪ್ಪ ಅವರು ಕಳೆದ ಎರಡೂವರೆ ವರ್ಷಗಳಿಂದ ಆರ್. ಅಶೋಕ (R. Ashok) ಅವರ ಬೆಂಗಾವಲು ವಾಹನದ ಚಾಲಕರಾಗಿ (Car Driver) ಕಾರ್ಯ ನಿರ್ವಹಿಸುತ್ತಿದ್ದರು.
ಕೌಟುಂಬಿಕ ಕಲಹವೇ ಕಾರಣ?
ಇನ್ನು ಶರಣ್ಣಪ್ಪ ಅವರ ಆತ್ಮಹತ್ಯೆಗೆ ಗಂಭೀರ ಕಾರಣಗಳ ಕುರಿತು ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಕುಟುಂಬದಲ್ಲಿ ನಡೆದಿದ್ದ ಕೆಲ ಕಲಹಗಳೇ ಶರಣಪ್ಪನ ಈ ನಿರ್ಧಾರಕ್ಕೆ ಕಾರಣವಾಗಿರಬಹುದು ಎಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಈ ಘಟನೆ ಸಂಬಂಧ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.

ಇದನ್ನು ಓದಿ : Udupi Bus And Bike Accident : Private Bus Bike ಗೆ ಡಿಕ್ಕಿ- ಬೈಕ್ ಸವಾರ ಸಾವು




