Udupi Bus And Bike Accident : ಉಡುಪಿ ಸಮೀಪದ ಅಂಬಾಗಿಲು ಜಂಕ್ಷನ್ ಬಳಿ (Near Ambagilu Junction) ನೆನ್ನೆ ರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರರು ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ.

ಉಡುಪಿ ಅಂಬಾಗಿಲು ಜಂಕ್ಷನ್ ಬಳಿ ಭೀಕರ ಅಪಘಾತ
ಉಡುಪಿ ಸಮೀಪದ ಅಂಬಾಗಿಲು ಜಂಕ್ಷನ್ ಬಳಿ (Near Ambagilu Junction) ನೆನ್ನೆ ರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ (Udupi Accident) ಬೈಕ್ ಸವಾರರು ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ. ಮೃತರನ್ನು ಪುತ್ತೂರು, ಸುಬ್ರಮಣ್ಯ ನಗರ ನಿವಾಸಿ ರವಿ ಪೂಜಾರಿ (44) ಎಂದು ಗುರುತಿಸಲಾಗಿದೆ.

ಖಾಸಗಿ ಬಸ್ ಬೈಕ್ಗೆ ಡಿಕ್ಕಿ : ಬೈಕ್ ಸವಾರ ಮೃತ್ಯು
ಖಾಸಗಿ ಬಸ್ವೊಂದು ಕುಂದಾಪುರದಿಂದ ಉಡುಪಿಯತ್ತ ಬರುತ್ತಿದ್ದ ವೇಳೆ, ಅಂಬಾಗಿಲು ಜಂಕ್ಷನ್ ಬಳಿ ಬೈಕ್ಗೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮವಾಗಿ ಬೈಕ್ ಸವಾರರು ಬಸ್ನಡಿ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದರು. ಇನ್ನು ಅಪಘಾತದ ನಂತರ ಗಾಯಾಳುವನ್ನು ತಕ್ಷಣವೇ ಉಡುಪಿ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತಾದರೂ, ಮಾರ್ಗಮಧ್ಯೆಯೇ ಅವರು ಮೃತಪಟ್ಟಿದ್ದಾರೆ.
ಇದನ್ನು ನೋಡಿ : ಅರ್ಥಪೂರ್ಣ VALMIKI JAYANTI ಆಚರಣೆ ಪುಷ್ಪ ನಮನ ಸಲ್ಲಿಸಿದ ಶಾಸಕ ಸುರೇಶ್ ಬಾಬು

ಉಡುಪಿ ಸಂಚಾರ ಪೊಲೀಸರಿಂದ ಪ್ರಕರಣ ದಾಖಲು
ಇನ್ನು ಈ ಘಟನೆಯ ಸಂಬಂಧವಾಗಿ ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.




