ತಮಿಳುನಾಡು CM ವಿಜಯ್ ಇಂದು ಕೊಲ್ಲೂರು ಭೇಟಿ, ದೇವಾಲಯ ಸುತ್ತಮುತ್ತ ಬಿಗಿ ಭದ್ರತೆ: ಭಕ್ತರ ದರ್ಶನ ಸಮಯದಲ್ಲಿ ಬದಲಾವಣೆ.

ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಇಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯಕ್ಕೆ ಭೇಟಿ ನೀಡಲಿದ್ದು, ಅವರ ಭೇಟಿ ಹಿನ್ನೆಲೆಯಲ್ಲಿ ದೇವಾಲಯದಲ್ಲಿ ಬಿಗಿ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಕಾರಣದಿಂದಾಗಿ ಕೆಲವು ಗಂಟೆಗಳ ಕಾಲ ಸಾರ್ವಜನಿಕರ ದರ್ಶನಕ್ಕೆ ನಿರ್ಬಂಧ ಹೇರಲಾಗಿದೆ.
ದೇವಾಲಯ ಸುತ್ತಮುತ್ತ ಬಿಗಿ ಭದ್ರತೆ
ತಮಿಳುನಾಡು ಮುಖ ಜೋಸೆಫ್ ವಿಜಯ್ ಅವರು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿಯ ದರ್ಶನ ಪಡೆಯಲು ಹಾಗೂ ವಿಶೇಷ ಪೂಜೆ ಸಲ್ಲಿಸಲು ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ದೇವಾಲಯದ ಸುತ್ತಮುತ್ತ ಮತ್ತು ಅವರು ಸಂಚರಿಸಲಿರುವ ಮಾರ್ಗಗಳಲ್ಲಿ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಬಂದೋಬಸ್ತ್ ವ್ಯವಸ್ಥೆ ಮಾಡಿದೆ.

ಭಕ್ತರ ದರ್ಶನ ಸಮಯದಲ್ಲಿ ಬದಲಾವಣೆ
VVIP ಭೇಟಿ ಹಿನ್ನೆಲೆಯಲ್ಲಿ ಮಧ್ಯಾಹ್ನ 12 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಸಾಮಾನ್ಯ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಇರುವುದಿಲ್ಲ. ಭದ್ರತಾ ತಪಾಸಣೆ ಮತ್ತು ವ್ಯವಸ್ಥಾಪನಾ ಕಾರಣಗಳಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೂಜೆ ಮುಗಿದ ಬಳಿಕ CM ತಮಿಳುನಾಡಿಗೆ
ಮುಖ್ಯಮಂತ್ರಿ ವಿಜಯ್ ಅವರು ದೇವಿಯ ದರ್ಶನ ಹಾಗೂ ವಿಶೇಷ ಪೂಜೆ ಮುಗಿಸಿದ ಬಳಿಕ ನೇರವಾಗಿ ತಮಿಳುನಾಡಿಗೆ ಹಿಂದಿರುಗಲಿದ್ದಾರೆ. ಅವರ ಭೇಟಿಯ ಸಂದರ್ಭದಲ್ಲಿ ಯಾವುದೇ ಸಾರ್ವಜನಿಕ ಸಭೆ, ರಾಜಕೀಯ ಕಾರ್ಯಕ್ರಮ ಅಥವಾ ಜನಸಂಪರ್ಕ ಕಾರ್ಯಕ್ರಮಗಳು ಇರುವುದಿಲ್ಲ ಎಂದು ತಿಳಿಸಲಾಗಿದೆ.
ಇದನ್ನು ಓದಿ : ತಮಿಳುನಾಡು CM Vijay ಕೊಲ್ಲೂರು ಭೇಟಿ ಭಕ್ತರಿಗೆ ನಿರ್ಬಂಧ..!!

CM ಭೇಟಿ – ಅನಗತ್ಯವಾಗಿ ಗುಂಪು ಸೇರುವುದು ನಿಷೇಧ
ದೇವಾಲಯದ ಸುತ್ತಮುತ್ತ ಹಾಗೂ ಮುಖ್ಯಮಂತ್ರಿಗಳ ವಾಹನ ಸಾಗುವ ದಾರಿಯಲ್ಲಿ ಸಾರ್ವಜನಿಕರು ಅನಗತ್ಯವಾಗಿ ಗುಂಪು ಸೇರುವುದು ಅಥವಾ ಜನಸಂದಣಿ ಉಂಟು ಮಾಡುವುದನ್ನು ನಿಷೇಧಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಇದನ್ನು ನೋಡಿ : ಶಾಸಕ ಷಡಕ್ಷರಿ ಆರೋಗ್ಯದಲ್ಲಿ ಚೇತರಿಕೆ ಇಂದು ಅಥವಾ ನಾಳೆ ಡಿಸ್ಚಾರ್ಜ್ ಸಾಧ್ಯತೆ




