ಸಿನಿಮಾ:
ರಾಕಿಂಗ್ ಸ್ಟಾರ್ ಯಶ್ ಈಗ ಪ್ಯಾನ್ ಇಂಡಿಯಾ ಸ್ಟಾರ್ ಪಟ್ಟಕ್ಕೇರಿದ್ದಾರೆ. KGF ರಾಕಿಭಾಯ್ ಆಗಿ ಬಹಳ ಎತ್ತರಕ್ಕೆ ಬೆಳೆದಿದ್ದಾರೆ. ಸದ್ಯ ಟಾಕ್ಸಿಕ್ ಚಿತ್ರದ ಮೂಲಕ ಮತ್ತೊಂದು ದಾಖಲೆಗೆ ಸಜ್ಜಾಗುತ್ತಿದ್ದಾರೆ. ಈ ನಡುವೆ ಕೆಲ ಅಭಿಮಾನಿಗಳು ಹಳೇ ಯಶ್‌ನ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಕಿರಾತಕ, ಗೂಗ್ಲಿ ರೀತಿಯ ಸಣ್ಣ ಸಿನಿಮಾಗಳಲ್ಲಿ ನಮ್ಮನೆ ಹುಡುಗನಂತೆ ಇದ್ದ ಯಶ್ ಅವರನ್ನು ಈಗ ನೋಡೋಕೆ ಸಾಧ್ಯವಿಲ್ಲ. ಈಗ ಏನಿದ್ದರೂ ಖಡಕ್ ರಾಕಿಭಾಯ್ ಮಾತ್ರ ಕಾಣುತ್ತಾರೆ.
ನಟಿ ಶ್ರೀನಿಧಿ ಶೆಟ್ಟಿ ಕೂಡ ತಮಿಳು ಸಂದರ್ಶನವೊಂದರಲ್ಲಿ ಮಾತನಾಡುತ್ತಾ ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ನಾನಿ ಜೊತೆ ಶ್ರೀನಿಧಿ ಶೆಟ್ಟಿ ನಟನೆಯ ಹಿಟ್-3 ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ನಟಿ ಶ್ರೀನಿಧಿ ಕೂಡ ಸಂದರ್ಶನ ವೊಂದರಲ್ಲಿ ಯಶ್ ಬಗ್ಗೆ ಮಾತನಾಡಿದ್ದು, ನಾನು ಯಶ್ ಜೊತೆ ನಟಿಸುವ ಅವಕಾಶ ಪಡೆದಾಗ ಅವರು ಗಡ್ಡ ಬೆಳೆಸಿ ಖಡಕ್ ಆಗಿ ಕಾಣಲು ಆರಂಭಿಸಿದ್ದರು. ಅವರೊಟ್ಟಿಗೆ ನಟಿಸಿದ್ದು ನಿಜಕ್ಕೂ ಅದ್ಭುತ ಅನುಭವ ಎಂದು ತಿಳಿಸಿದರು.