ತುಮಕೂರು : ತುಮಕೂರನ್ನು ನಾವು ಸ್ಮಾಟಿ ಸಿಟಿ, ಬೆಳೆಯುತ್ತಿರುವ ನಗರ, ಸ್ವಚ್ಛ ನಗರ ಅಂತ ಕರೆತಾ ಇದ್ವಿ ಆದ್ರೆ. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಇಡೀ ನಗರವೇ ಇಂದು ಗಬ್ಬೆದ್ದು ನಾರುತ್ತಿದೆ. ತುಮಕೂರಿನ ನಜರಾಬಾದ್ ಮುಖ್ಯರಸ್ತೆಯಲ್ಲಿಯೇ ಕಸದ ರಾಶಿ ರಾಶಿ ಬಿದ್ದಿದ್ದು, ಇಲ್ಲಿ ಓಡಾಡುವ ಜನರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ರೆ ಪಾಲಿಕೆಯ ಅಧಿಕಾರಿಗಳು ಮಾತ್ರ ಜಾಣ ಕುರುಡುತನವನ್ನು ತೋರಿಸ್ತಿದ್ದಾರೆ.
ನಗರದಲ್ಲಿ ಪ್ರತಿನಿತ್ಯ ಕಸ ಬೀಳೋದು ಸಹಜ. ಇಂತಹ ಕಸವನ್ನು ಕ್ಲೀನ್ ಮಾಡಿ, ನಗರವನ್ನು ಸ್ವಚ್ಛವಾಗಿ ಹಿಡುವುದು ಮಹಾನಗರ ಪಾಲಿಕೆಯವರ ಕೆಲಸ. ಆದ್ರೆ ಪಾಲಿಕೆಯ ಅಧಿಕಾರಿಗಳು ಅದ್ಯಾಕೆ ಅಷ್ಟೋಂದು ನಿರ್ಲಕ್ಷ್ಯ ತೋರುತ್ತಿದ್ದಾರೋ ಗೊತ್ತಿಲ್ಲ. ಕಸದ ಸಮಸ್ಯೆ ಯಾಕೋ ಬಗೆಹರಿಯುತ್ತಾನೆ ಇಲ್ಲ. ನಜರಾಬಾದ್ನ ಮುಖ್ಯ ರಸ್ತೆಯ ಪಕ್ಕದಲ್ಲಿ ಎಲ್ಲೆಂದರಲ್ಲಿ ಕಸ ಬಿದ್ದಿದ್ದರೂ ಕೂಡ ಸ್ವಚ್ಛತಾ ಸಿಬ್ಬಂದಿಗಳು ಸರಿಯಾದ ರೀತಿಯಲ್ಲಿ ಸ್ವಚ್ಛ ಮಾಡುತ್ತಿಲ್ಲ. ಕಸ ಬಿದ್ದಿರುವುದನ್ನು ನೋಡಿದರೂ ಸಹ ನೋಡದವರ ಹಾಗೆ ಓಡಾಡ್ತಿದ್ದಾರೆ. ಎಲ್ಲೆಂದರಲ್ಲಿ ಕಸ ಬಿದ್ದು ದುರ್ನಾತ ಬೀರುತ್ತಿರುವುದರಿಂದ ಸಾರ್ವಜನಿಕರು ಗಬ್ಬಿನ ವಾಸನೆಯನ್ನೆ ಕುಡಿದುಕೊಂಡು ಬದುಕುವ ದುಸ್ಥಿತಿ ಎದುರಾಗಿದೆ. ಇಂತಹ ಅಸ್ವಚ್ಚತೆಯಿಂದಾಗಿ ಹಲವು ಮಾರಕ ರೋಗಗಳಿಗೆ ಜನರು ತುತ್ತಾಗುತ್ತಿದ್ದಾರೆ.
ಇನ್ನು ಇಲ್ಲಿನ ಸ್ಥಳೀಯರೇ ಈ ಜಾಗಕ್ಕೆ ಕಸವನ್ನ ತಂದು ಸುರಿಯುತ್ತಿರುವುದು ರಾಶಿ ರಾಶಿ ಕಸದ ಸಮಸ್ಯೆಗೆ ಮತ್ತೊಂದು ಕಾರಣವಾಗಿದೆ. ಈ ಮುಖ್ಯ ರಸ್ತೆಯ ಅಕ್ಕಪಕ್ಕದಲ್ಲಿ ವಾಸಿಸುವ ಜನರು ಮಾತ್ರ ನರಕಯಾತನೆ ಅನುಭವಿಸುವಂತಾಗಿದೆ. ನಾವು ಬೆಳಗ್ಗೆ ಮತ್ತು ಸಂಜೆ ಈ ಗಬ್ಬನ್ನೆ ಕುಡಿದುಕೊಂಡೆ ಬದುಕುತ್ತಿದ್ದೇವೆ. ನಾವು ಇಂತಹ ವಾಸನೆಯಲ್ಲಿ ಊಟ ಮಾಡೋದು ಹೇಗೆ. ವಾರದಲ್ಲಿ ಒಂದು ದಿನ ಬಂದು ಈ ಕಸವನ್ನು ತೆಗೆದುಕೊಂಡು ಹೋಗ್ತಾರೆ. ಮತ್ತೆ ಇತ್ತ ತಿರುಗಿಯು ನೋಡ್ತಿಲ್ಲ ಅಂತ ಪಾಲಿಕೆಯ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಅದೇನೇ ಇರಲಿ ಇಷ್ಟೆಲ್ಲ ರಾಶಿ ರಾಶಿ ಕಸ ಬಿದ್ದು , ಆ ಕಸದಿಂದ ಇಷ್ಟೆಲ್ಲ ತೊಂದ್ರೆ ಆಗ್ತಾ ಇದ್ರು ಕೂಡ. ಪಾಲಿಕೆ ಅಧಿಕಾರಿಗಳು ಈ ಜಾಗವನ್ನು ಸ್ವಚ್ಛತೆ ಮಾಡದಿರೋದು ಬೇಸರದ ಸಂಗತಿ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಅಸ್ವಚ್ಚತೆಯಿಂದ ಕೂಡಿರುವ ನಜರಾಬಾದ್ ಮುಖ್ಯರಸ್ತೆಯನ್ನ ಸ್ವಚ್ಛಗೊಳಿಸ್ತಾರಾ ಎಂದು ಕಾದು ನೋಡಬೇಕಿದೆ.