ಭಾರತದಲ್ಲಿ ಮೊಬೈಲ್ ನಂಬರ್ ಮೊದಲು 91 ಎಂದು ಇರುವುದು ಏಕೆ ??

ನಾವು ಯಾರಿಗಾದರೂ ಕರೆ ಮಾಡಿದಾಗ ಮೊಬೈಲ್ ಸಂಖ್ಯೆಯು +91 ಕೋಡ್‌ನೊಂದಿಗೆ ಪ್ರಾರಂಭವಾಗುವುದು ನೀವು ನೋಡಿರಬಹುದು. ಆದರೆ ಈ ಕೋಡ್‌ನೊಂದಿಗೆ ಕರೆಗಳು ಏಕೆ ಬರುತ್ತವೆ ಎಂದು ನಿಮಗೆ ತಿಳಿದಿದೆಯೇ?. 91 ಕೋಡ್ ಏಕೆ ಇದೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಆ ಕೋಡ್ ಅರ್ಥವೇನು? ಇದನ್ನು ಯಾಕಾಗಿ ಶುರುಮಾಡಲಾಯಿತು?. +91 ನಿಂದ ಕರೆ ಬರುತ್ತದೆ ಎಂದರೆ ಅದು ಭಾರತದಿಂದ ಬರುತ್ತಿದೆ ಎಂದು ಹೆಚ್ಚಿನ ಭಾರತೀಯರಿಗೆ ತಿಳಿದೇ ಇದೆ. ಆದರೆ ಫೋನ್ ಕರೆ +91 ನೊಂದಿಗೆ ಏಕೆ ಪ್ರಾರಂಭಿಸಲಾಯಿತು. ಈ ಕುರಿತ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ ಓದಿ.

ವಾಸ್ತವವಾಗಿ +91 ಭಾರತ ದೇಶದ ಕೋಡ್ ಆಗಿದೆ. ಭಾರತಕ್ಕೆ ಈ ಕೋಡ್ ಇರಲು ಕಾರಣವೂ ಇದೆ. ಅಂತರರಾಷ್ಟ್ರೀಯ ದೂರಸಂಪರ್ಕ ಒಕ್ಕೂಟ (ITU) ವಿಶ್ವಸಂಸ್ಥೆಯ ಒಂದು ಸಂಸ್ಥೆಯಾಗಿದೆ. ಅಲ್ಲಿಂದ ಜಗತ್ತಿನ ಎಲ್ಲ ದೇಶಗಳಿಗೂ ಈ ಕೋಡ್ ಸಿಕ್ಕಿದೆ. ಈ ಸಂಸ್ಥೆ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನಕ್ಕೆ ಸಂಬಂಧಿಸಿದ ಸಮಸ್ಯೆಗಳ ಮೇಲೆ ಕಾರ್ಯನಿರ್ವಹಿಸುತ್ತದೆ. ಇದನ್ನು 17 ಮೇ 1865 ರಂದು ಇಂಟರ್ನ್ಯಾಷನಲ್ ಟೆಲಿಗ್ರಾಫ್ ಯೂನಿಯನ್ ಎಂದು ಸ್ಥಾಪಿಸಲಾಯಿತು. ಇದರ ಪ್ರಧಾನ ಕಛೇರಿ ಜಿನೀವಾದಲ್ಲಿದೆ. ಒಟ್ಟು 193 ದೇಶಗಳು ಈ ಒಕ್ಕೂಟದ ಭಾಗವಾಗಿವೆ. ದೇಶದ ಕೋಡ್ ನೀಡುವುದು ಅದರ ಕೆಲಸದ ಒಂದು ಭಾಗವಾಗಿದೆ. ಅಂದರೆ ಈ ಏಜೆನ್ಸಿಯು ಭಾರತಕ್ಕೆ +91 ಕೋಡ್ ನೀಡಿದೆ.

ಅಂತರರಾಷ್ಟ್ರೀಯ ದೂರಸಂಪರ್ಕ ಒಕ್ಕೂಟವು ಜಗತ್ತನ್ನು 9 ವಲಯಗಳಾಗಿ ವಿಂಗಡಿಸಿದೆ. ಈ 9 ಪ್ರದೇಶಗಳು ದಕ್ಷಿಣ, ಮಧ್ಯ, ಪಶ್ಚಿಮ ಮತ್ತು ಮಧ್ಯಪ್ರಾಚ್ಯ ಏಷ್ಯಾವನ್ನು ಒಳಗೊಂಡಿವೆ. ಈ 9 ಪ್ರದೇಶಗಳಲ್ಲಿ ಬರುವ ಎಲ್ಲಾ ದೇಶಗಳ ಕರೆ ಕೋಡ್ +9 ನೊಂದಿಗೆ ಪ್ರಾರಂಭವಾಗುತ್ತದೆ. ಉದಾಹರಣೆಗೆ.. ಭಾರತ +91, ಪಾಕಿಸ್ತಾನ, +92, ಅಫ್ಘಾನಿಸ್ತಾನ +93 ಶ್ರೀಲಂಕಾ +94 ಆಗಿದೆ. ಅಂತರರಾಷ್ಟ್ರೀಯ ದೂರಸಂಪರ್ಕ ಒಕ್ಕೂಟವು ಒಂದು ದೇಶದ ಕೋಡ್ ಅನ್ನು ನಿಯೋಜಿಸುವ ಮೊದಲು ದೇಶದ ಜನಸಂಖ್ಯೆ, ಒಕ್ಕೂಟಗಳು ಮತ್ತು ಇತರ ಹಲವು ಅಂಶಗಳನ್ನು ಪರಿಗಣಿಸುತ್ತದೆ.

ದೇಶದ ಸಂಕೇತಗಳು ಅಂತರಾಷ್ಟ್ರೀಯ ದೂರವಾಣಿ ಸಂಖ್ಯೆಯ ಯೋಜನೆಯ ಭಾಗವಾಗಿದೆ. ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಕರೆ ಮಾಡುವಾಗ ಇವುಗಳನ್ನು ಬಳಸಲಾಗುತ್ತದೆ. ಈ ಕೋಡ್ ನಿಮ್ಮ ದೇಶದಲ್ಲಿ ಸ್ವಯಂಚಾಲಿತವಾಗಿ ಬರುತ್ತದೆ, ಆದರೆ ಅಂತರರಾಷ್ಟ್ರೀಯ ಸಂಖ್ಯೆಯನ್ನು ಡಯಲ್ ಮಾಡಲು ನೀವು ಈ ಕೋಡ್ ಅನ್ನು ಬಳಸಬೇಕಾಗುತ್ತದೆ. ಅಂದರೆ ನಿಮ್ಮ ಸ್ವಂತ ದೇಶದಲ್ಲಿರುವ ಇನ್ನೊಬ್ಬ ಸ್ಥಳೀಯ ಬಳಕೆದಾರರಿಗೆ ನೀವು ಕರೆ ಮಾಡಿದಾಗ, ಈ ಕೋಡ್ ಅಟೊಮೆಟಿಕ್ ಆಗಿ ತೆಗೆದುಕೊಳ್ಳುತ್ತದೆ. ಅದೇ ಅಂತರರಾಷ್ಟ್ರೀಯ ಕರೆಗಳಲ್ಲಿ ನೀವು ಈ ಕೋಡ್ ಅನ್ನು ಪ್ರತ್ಯೇಕವಾಗಿ ಬಳಸಬೇಕಾಗುತ್ತದೆ.

ಇನ್ನು ಅಪರಿಚಿತ ಕೋಡ್​ಗಳ ಸಂಖ್ಯೆಗಳಿಂದ ಫೋನ್ ಕರೆಗಳನ್ನು ಸ್ವೀಕರಿಸಬೇಡಿ ಎಂದು ಭಾರತ ಸರ್ಕಾರ ಕೆಲವೊಮ್ಮೆ ಜಾಹೀರಾತು ನೀಡುತ್ತದೆ. ಇದು ಹಗರಣ ಅಥವಾ ವಂಚನೆಯ ಕರೆ ಆಗಿರಬಹುದು. ಈ ಕೋಡ್ ಹೊರತುಪಡಿಸಿ ಬೇರೆ ಕೋಡ್‌ಗಳೊಂದಿಗೆ ನೀವು ಕರೆಗಳನ್ನು ಸ್ವೀಕರಿಸಿದರೆ ಜಾಗರೂಕರಾಗಿರಿ. ಅವು ಸೈಬರ್ ಅಪರಾಧಿಗಳ ಕರೆಗಳಾಗಿರಬಹುದು. ನಮ್ಮದಲ್ಲದೆ ಬೇರೆ ಕೋಡ್‌ನಿಂದ ಬರುವ ಕರೆಗಳ ಬಗ್ಗೆ ಎಚ್ಚರಿಕೆ ವಹಿಸುವುದು ಬಹಳ ಮುಖ್ಯ.

Author:

...
Editor

ManyaSoft Admin

Ads in Post
share
No Reviews