ಚಿಕ್ಕನಾಯಕನಹಳ್ಳಿ:
ವರ್ಷಕೊಮ್ಮೆ ಮಾತ್ರವೇ ಭಕ್ತರಿಗೆ ದರ್ಶನ ನೀಡುವ ಇತಿಹಾಸ ಪ್ರಸಿದ್ದ ದೊಡ್ಡಯೆಣ್ಣೆಗೆರೆ ಶ್ರೀ ಚೌರಿಗೆ ಲಕ್ಕಮ್ಮ ದೇವಿ ದೇವಸ್ಥಾನದ ಬಾಗಿಲು ತೆರೆದಿದ್ದು, ಮಳಲಿ ಒಂದೊತ್ತಿನ ಕ್ವಾರಿಗಾ ಭಕ್ತರಿಂದ ಮೂರು ದಿನಗಳ ಕಾಲ ವಿಶೇಷ ಪೂಜೆ ನಡೆಯಲಿವೆ.
ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ದೊಡ್ಡಯೆಣ್ಣೆಗೆರೆಯಲ್ಲಿ ನೆಲೆಸಿರುವ ಶ್ರೀ ಚೌರಿಗೆ ಲಕ್ಕಮ್ಮ ದೇವಿ ದೇವಸ್ಥಾನದಲ್ಲಿ ಮೂರು ದಿನಗಳ ಕಾಲ ದೇವಸ್ಥಾನ ಭಾಗಿಲು ತೆರೆದಿದ್ದು, ಭಕ್ತರಿಗೆ ದರ್ಶನದ ಭಾಗ್ಯ ಸಿಗಲಿದೆ. ಹೊಸದುರ್ಗ ತಾಲ್ಲೂಕಿನ ಮಳಲಿಯ ಒಂದೊತ್ತಿನ ಕ್ವಾರಿಗಾ ಭಕ್ತರಿಂದ ತಾಯಿಗೆ ಹೊಳೆ ಪೂಜೆ ನೆರವೇರಿತು. ಪೂಜೆ ವೇಳೆ ಮಳಲಿ ಭಕ್ತರು ಕ್ವಾರಿಗಾ ಎಂದು ದೇವಿಯ ಕೂಗುವುದು ವಿಶೇಷವಾಗಿತ್ತು. ಹೊಳೆ ಪೂಜೆ ಮಾಡಿ ಮೆರವಣಿಗೆ ಮೂಲಕ ದೇವಿಯನ್ನು ದೇವಸ್ಥಾನಕ್ಕೆ ಕರೆತರಲಾಯಿತು. ಈ ವೇಳೆ ದೇವರಿಗೆ ಇಷ್ಟವಾದ ತೆಂಗಿನ ಕಾಯಿಯನ್ನು ರಸ್ತೆಯುದ್ದಕ್ಕೂ ಹೊಡೆಯುವ ಮೂಲಕ ಮೂಲಕ ಭಕ್ತರು ದೇವಿಗೆ ಅರ್ಪಿಸಿದರು. ಈ ವೇಳೆ ದೇವಿಯ ದೇವಸ್ಥಾನಕ್ಕೆ ಭಕ್ತರೇ ಹಣ ಹೊಂದಿಸಿ ದೊಡ್ಡಯೆಣ್ಣೆಗೆರೆ ಸರ್ಕಲ್ ನಲ್ಲಿ ಮಹದ್ವಾರವನ್ನು ನಿರ್ಮಿಸಿದ್ದು, ಗ್ರಾಮ ಪಂಚಾಯ್ತಿ ಸದಸ್ಯ ಪ್ರಶಾಂತ್ ನೇತೃತ್ವದಲ್ಲಿ ಪೂಜೆ ಸಲ್ಲಿಸಿ ಉದ್ಘಾಟನೆ ನೆರವೇರಿಸಿದರು.