Health Tips :
ಖರ್ಜೂರ ಬಾದಾಮಿಯನ್ನು ನಿತ್ಯವೂ ಸೇವನೆ ಮಾಡಿದರೆ ದೇಹಕ್ಕೆ ಹೆಚ್ಚಿನ ಲಾಭವು ಸಿಗುವುದು. ಹೀಗಾಗಿ ದೈನಂದಿನ ಆಹಾರ ಪದ್ಧತಿಯಲ್ಲಿ ದಿನನಿತ್ಯವೂ ಮೂರು ಖರ್ಜೂರ ಮತ್ತು ಐದು ಬಾದಾಮಿ ಬೀಜಗಳನ್ನು ಸೇವನೆ ಮಾಡಿದರೆ ಬಹಳ ಒಳ್ಳೆಯದು. ಪ್ರಮುಖವಾಗಿ ಇಂತಹ ಒಣಬೀಜಗಳಲ್ಲಿ ಹಲವಾರು ಬಗೆಯ ವಿಟಮಿನ್ಸ್ , ಖನಿಜಾಂಶ ಮತ್ತು ಆ್ಯಂಟಿಆಕ್ಸಿಡೆಂಟ್ ಸಮೃದ್ಧವಾಗಿದೆ. ಇಡೀ ರಾತ್ರಿ ನೆನೆಹಾಕಿದ ಡ್ರೈ ಫ್ರೂಟ್ಸ್ ಗಳನ್ನು ಬೆಳಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಿದರೆ, ಸಾಕಷ್ಟು ಕಾಯಿಲೆಗಳನ್ನು ನೀವು ದೂರ ಇರಿಸಬಹುದು.
ಬಾದಾಮಿ ಮೆದುಳಿನ ಶಕ್ತಿ ವೃದ್ಧಿಸುತ್ತದೆ : ದಿನವಿಡಿ ಬುದ್ಧಿಯ ಆಲಸ್ಯವನ್ನು ಎದುರಿಸುತ್ತಿರುವವರು, ನೆನೆಸಿಟ್ಟ ಬಾದಾಮಿಯನ್ನು ಬೆಳಗ್ಗೆ ಸೇವಿಸಬೇಕು. ಇದರಲ್ಲಿ ಇರುವ ವಿಟಮಿನ್ ಇ ಮತ್ತು ಒಮೆಗಾ-೩ ಕೊಬ್ಬಿನಾಮ್ಲವು ಮೆದುಳಿನ ಅಂಗಾಂಶಗಳನ್ನು ರಕ್ಷಣೆ ಮಾಡಿ, ನೆನಪಿನ ಶಕ್ತಿ ವೃದ್ಧಿಸುವುದು. ಖರ್ಜೂರದಲ್ಲಿ ಫ್ಲಾವನಾಯ್ಡ್ ಎನ್ನುವ ಉರಿಯೂತ ಶಮನಕಾರಿ ಗುಣವಿದ್ದು, ಇದು ಮೆದುಳಿನ ಉರಿಯೂತ ಕಡಿಮೆ ಮಾಡಿ, ನೆನಪಿನ ಶಕ್ತಿ ವೃದ್ಧಿಸುತ್ತದೆ.
ಆರೋಗ್ಯಕಾರಿ ತೂಕ ಕಾಪಾಡಲು : ನಾರಿನಾಂಶವನ್ನು ಹೊಂದಿರುವ ಖರ್ಜೂರವು ದೀರ್ಘಕಾಲ ಹೊಟ್ಟೆ ತುಂಬಿದಂತೆ ಮಾಡಿ, ಪದೇ ಪದೇ ಹಸಿವಾಗುವುದನ್ನು ತಪ್ಪಿಸುವುದು. ಅದೇ ಬಾದಾಮಿಯಲ್ಲಿನ ಆರೋಗ್ಯಕಾರಿ ಕೊಬ್ಬು ಮತ್ತು ಪ್ರೋಟೀನ್ ಬಯಕೆ ಕಡಿಮೆ ಮಾಡುವುದು. ಈ ಎರಡು ಅತಿಯಾಗಿ ತಿನ್ನುವುದನ್ನು ತಡೆದು, ತೂಕ ಇಳಿಸಲು ಸಹಕಾರಿಯಾಗಿದೆ.
ಕಾಂತಿಯುತ ಚರ್ಮಕ್ಕಾಗಿ : ಕಾಂತಿಯುತ ಚರ್ಮ ಮತ್ತು ಬಲಿಷ್ಠ ಕೂದಲು ಬೇಕಿದ್ದರೆ ಖರ್ಜೂರ ಮತ್ತು ಬಾದಾಮಿ ಸೇವನೆ ಮಾಡಬೇಕು. ಇದರಲ್ಲಿನ ವಿಟಮಿನ್ ಇ, ಬಯೋಟಿನ್ ಮತ್ತು ಆ್ಯಂಟಿಆಕ್ಸಿಡೆಂಟ್ ಅಂಶವು ಫ್ರೀ ರ್ಯಾಡಿಕಲ್ ವಿರುದ್ಧ, ವಯಸ್ಸಾಗುವುದನ್ನು ನಿಧಾನಗೊಳಿಸಲು ಮತ್ತು ಚರ್ಮದ ಸ್ಥಿತಿಸ್ಥಾಪಕತ್ವ ಸುಧಾರಣೆ ಮಾಡಲು ಸಹಕಾರಿಯಾಗಿದೆ.