CRICKET: RCB ಕ್ಯಾಪ್ಟನ್‌ ರಜತ್‌ ಪಟಿದಾರ್‌ ಅಣ್ಣವ್ರನ್ನ ನೆನಪಿಸಿಕೊಂಡಿದ್ಯಾಕೆ?

 

ಇಂದಿನಿಂದ ಐಪಿಎಲ್‌ ಹಬ್ಬ ಆರಂಭವಾಗುತ್ತಿದ್ದು, ಕೊಲ್ಕತ್ತಾದಲ್ಲಿ ಆರ್‌ಸಿಬಿ ಮತ್ತು ಕೊಲ್ಕತ್ತಾ ತಂಡಗಳ ನಡುವೆ ಪಂದ್ಯ ನಡೆಯಲಿದೆ. ಪಂದ್ಯಕ್ಕೂ ಮುನ್ನ ಆರ್‌ಸಿಬಿಯ ತಂಡದ ನೂತನ ನಾಯಕ ರಜತ್‌ ಪಾಟಿದಾರ್‌ ಅವರು ಎರಡು ಕೈ ಜೋಡಿಸಿ ನಟ ರಾಜ್‌ಕುಮಾರ್‌ ಅವರ ಖ್ಯಾತ ಡೈಲಾಂಗ್‌ ಅಭಿಮಾನಿಗಳೇ ನಮ್ಮ ದೇವರು ಎಂಬ ಡೈಲಾಗನ್ನು ಹೊಡೆದು ಅಭಿಮಾನಿಗಳಿಗೆ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.

ಕನ್ನಡದಲ್ಲಿ ಅಭಿಮಾನಿಗಳೇ ನಮ್ಮ ದೇವ್ರು ಎಂದು ರಜತ್ ಪಾಟಿದಾರ್ ಹೊಡೆದ ಡೈಲಾಗ್​ ಕೇಳಿ ಆರ್​ಸಿಬಿ ಅಭಿಮಾನಿಗಳು ಫುಲ್​ ಖುಷ್ ಆಗಿದ್ದಾರೆ. ಇದೇ ವಿಡಿಯೋ ನೋಡಿದ ಅಭಿಮಾನಿಗಳು, ಅಭಿಮಾನಿಗಳಿಗೆ ನಮ್ಮನೇ ದೇವ್ರು, RCBನೇ ನಮ್ ಎದೆ ಉಸಿರು, ಕನ್ನಡ ಮಾತಾಡಿ ಮನಸ್ಸು ಗೆದ್ದು ಬಿಟ್ಟೆ, ಈ ಸಲ cup ನಮ್ದೇ, ನಮ್ಮ ನಾಯಕ ನಮ್ಮ ಹೆಮ್ಮೆ ಎಂದು ಕಾಮೆಂಟ್ಸ್​ ಹಾಕುತ್ತಿದ್ದಾರೆ.

 

Author:

share
No Reviews