ಬೇಸಿಗೆಯಲ್ಲಿ ನಮಗೆ ಗೊತ್ತಿಲ್ಲದೆ ನಮ್ಮ ದೇಹದಿಂದ ಬೆವರು ಹೆಚ್ಚು ಹರಿದು ಹೋಗುತ್ತದೆ.ಹಾಗಾಗಿ ನಮ್ಮ ದೇಹ ನಿರ್ಜಲೀಕರಣಕ್ಕೆ ಗುರಿಯಾಗುತ್ತದೆ.ಎಷ್ಟು ಪ್ರಮಾಣದಲ್ಲಿ ನೀರು ಕುಡಿದರೂ ಸಾಕಾಗುವುದಿಲ್ಲ. ಬೆವರಿನಲ್ಲಿ ಸಾಕಷ್ಟು ಬಗೆಯ ಪೌಷ್ಟಿಕ ಸತ್ವಗಳು ಸಹ ನಮ್ಮ ದೇಹದಿಂದ ಹೊರಗೆ ಹೋಗುತ್ತವೆ.ಇಂತಹ ಸಂದರ್ಭದಲ್ಲಿ ನಾವು ಆದಷ್ಟು ಆರೋಗ್ಯ ಕರವಾದ ಹಾಗೂ ನೈಸರ್ಗಿಕ ರೂಪದ ಪಾನೀಯಗಳನ್ನು ಸೇವಿಸಲುಮುಂದಾಗಬೇಕು. ಇದರಿಂದ ಬೇರೆ ಸಮಯದಂತೆ ಬೇಸಿಗೆ ಕಾಲದಲ್ಲೂ ಸಹ ನಮ್ಮ ಆರೋಗ್ಯವನ್ನು ಉತ್ತಮವಾಗಿ ನಿರ್ವಹಿಸಿಕೊಳ್ಳಲು ಸಾಧ್ಯವಾಗುತ್ತದೆ.
*ದಾಳಿಂಬೆ ಹಣ್ಣಿನ ಜ್ಯೂಸ್
ದಾಳಿಂಬೆ ಹಣ್ಣು ಒಂದು ಆರೋಗ್ಯಕರವಾದ ಹಣ್ಣಾಗಿದೆ.ಇದು ವಿಟಮಿನ್ ಸಿ ಪ್ರಮಾಣವನ್ನು ಹೆಚ್ಚಾಗಿ ಒಳಗೊಂ ಡಿದ್ದು, ಬೇಸಿಗೆಯಲ್ಲಿ ಆರೋಗ್ಯಕ್ಕೆ ಉತ್ತಮ ಲಾಭಗ ಳನ್ನು ಕೊಡುತ್ತದೆ. ದಾಳಿಂಬೆ ಹಣ್ಣಿನ ಬೀಜಗಳು ರಸಭರಿತವಾಗಿರು ವುದ ರಿಂದ ದೇಹಕ್ಕೆ ಅದರಿಂದ ಹೆಚ್ಚು ನೀರಿನ ಅಂಶ ಸಿಗುತ್ತದೆ ಜೊತೆಗೆ ಪೌಷ್ಟಿಕ ಸತ್ವಗಳು ಸಹ ಲಭ್ಯವಾಗುತ್ತವೆ.ಹೃದಯದ ಆರೋಗ್ಯಕ್ಕೆ ದಾಳಿಂಬೆ ಹಣ್ಣು ತುಂಬಾ ಒಳ್ಳೆಯದು. ಬೇಸಿಗೆಯಲ್ಲಿ ಎಲ್ಲರೂ ದಾಳಿಂಬೆ ಜ್ಯೂಸ್ ಸೇವಿಸಬಹುದು.
*ಸೌತೆಕಾಯಿ ಜ್ಯೂಸ್
ದೇಹದ ತಾಪಮಾನವನ್ನು ತಂಪುಗೊಳಿಸುವ ಮತ್ತು ಹೆಚ್ಚು ಬಿಸಿಲಿನಿಂದ ಪಾರು ಮಾಡುವ ಇನ್ನೊಂದು ಅದ್ಭುತ ನೈಸರ್ಗಿಕ ಪಾನೀಯ ಎಂದರೆ ಅದು ಸೌತೆಕಾಯಿ ಜ್ಯೂಸ್.ಸೌತೆಕಾಯಿ ಜ್ಯೂಸ್ ಮಾಡುವ ಸಂದರ್ಭದಲ್ಲಿ ಸ್ವಲ್ಪ ಪುದಿನ ಹಾಕಿ ಸೇವಿಸುವುದರಿಂದ ಮತ್ತಷ್ಟು ಔಷಧೀಯ ಲಕ್ಷಣಗಳು ಸಿಗುತ್ತವೆ.
*ಕಲ್ಲಂಗಡಿ ಹಣ್ಣಿನ ಜ್ಯೂಸ್
ಕಲ್ಲಂಗಡಿ ಹಣ್ಣಿನಲ್ಲಿ ಆರೋಗ್ಯಕ್ಕೆ ಅಗತ್ಯವಾಗಿ ಬೇಕಾದ ಪೌಷ್ಟಿಕ ಸತ್ವಗಳು ಸಾಕಷ್ಟಿದ್ದು ಮುಖ್ಯವಾಗಿ ನಮ್ಮ ಲಿವರ್ ಆರೋಗ್ಯವನ್ನು ಉತ್ತಮಪಡಿಸುವ ಅಮೈನೋ ಆಮ್ಲ ಇದರಲ್ಲಿ ಹೇರಳವಾಗಿದೆ.ನಮ್ಮ ಜೀರ್ಣ ಶಕ್ತಿಯನ್ನು ಅಭಿವೃದ್ಧಿಪಡಿಸಿ ಹೊಟ್ಟೆಯ ಸೆಳೆತವನ್ನು ದೂರ ಮಾಡುತ್ತದೆ.
*ಮಜ್ಜಿಗೆ
ಊಟದ ನಂತರ ಮಜ್ಜಿಗೆ ಕುಡಿಯುವ ಸಂಪ್ರದಾಯವಿದೆ.ಆಯುರ್ವೇದದಲ್ಲಿಯೂ ಕೂಡ ಮಜ್ಜಿಗೆಗೆ ಸಾಕಷ್ಟು ಪ್ರಾಮುಖ್ಯತೆಯನ್ನು ನೀಡಲಾಗಿದೆ.ಈ ಪಾನೀಯವನ್ನು ಹಲವಾರು ರೋಗಗಳ ವಿರುದ್ಧ ಹೋರಾಡಲು ಔಷಧಿಯಾಗಿ ಬಳಸಲಾಗುತ್ತದೆ. ಬೇಸಿಗೆಯ ಸಮಯದಲ್ಲಿ ಮಜ್ಜಿಗೆ ಕುಡಿಯುವುದರಿಂದ, ಸಾಕಷ್ಟು ಆರೋಗ್ಯ ಲಾಭವನ್ನು ಪಡೆದುಕೊಳ್ಳಬಹುದು