ಶಿರಾ : ಶುದ್ದ ಕುಡಿಯುವ ನೀರಿನ ಘಟಕಕ್ಕೆ ಗ್ರಾಮಸ್ಥರ ಮನವಿ

ಕೆಟ್ಟು ನಿಂತ ಶುದ್ದ ಕುಡಿಯುವ ನೀರಿನ ಘಟಕ
ಕೆಟ್ಟು ನಿಂತ ಶುದ್ದ ಕುಡಿಯುವ ನೀರಿನ ಘಟಕ
ತುಮಕೂರು

ಶಿರಾ:

ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ‌ ಆಂಧ್ರಪ್ರದೇಶದ ಗಡಿಭಾಗದ ಹೊನ್ನಗೊಂಡನಹಳ್ಳಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಶುದ್ದ ನೀರಿನ ಘಟಕವಿದ್ದರೂ ಜನರಿಗೆ ಗುಟುಕು ನೀರಿಲ್ಲ ಸಿಗ್ತಿಲ್ಲ, ಜನಗಳಿಗೆ ನೀರಿಗಾಗಿ ಹೊಡೆದಾಟ, ಬಡಿದಾಟ ತಪ್ಪಿದ್ದಲ್ಲ. ಇದು ಗ್ರಾಮದ ಸಮಸ್ಯೆ. ಸಂಬಂಧ ಪಟ್ಟ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ತಾತ್ಸಾರದಿಂದ ಶುದ್ದ ಕುಡಿಯುವ ನೀರಿನ ಘಟಕವೊಂದು ಕಳೆದ ಸುಮಾರು ಒಂದುವರೆ ವರ್ಷಗಳ ಹಿಂದಿನಿಂದಲೂ ನಿರ್ವಹಣೆಯಿಲ್ಲದೆ ವಾಟರ್ ಫಿಲ್ಟರ್‍ನ ಮೋಟಾರ್ ಕೆಟ್ಟು ನಿಂತು ಜನರ ಉಪಯೋಗಕ್ಕಿಲ್ಲವಾಗಿದೆ.

ಇಲ್ಲಿನ ಜನರು ಗ್ರಾಮದಲ್ಲಿ ಶುದ್ದ ಕುಡಿಯುವ ನೀರಿನ ಘಟಕವಿದ್ದರೂ ಎರಡು ದಿನಕ್ಕೊಮ್ಮೆ  ಸುಮಾರು ಎರಡು ಮೂರು ಕಿ.ಮೀ ದೂರದ ಊರುಗಳಿಂದ ನೀರು ತರುವ ಸಂದರ್ಭ ಬಂದೋದಗಿದೆ. ಈ ಘಟಕವೂ ಉತ್ತಮವಾಗಿ ನಡೆಯುತ್ತಿತ್ತು. ಆದರೆ ಇದನ್ನು ನೋಡಿಕೊಳ್ಳುವವರ ತಾತ್ಸಾರದಿಂದ ಕಾರ್ಯನಿರ್ವಹಣೆ ಸ್ಥಗಿತಗೊಂಡಿದೆ. ಅಂದಿನಿಂದ ಇಂದಿನವರೆಗೆ ಗ್ರಾಮದ ಜನತೆ ನೀರಿಗಾಗಿ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.

ನೂರಾರು ಕುಟುಂಬಗಳು ಶುದ್ದ ಕುಡಿಯುವ ನೀರಿಗೆ ಇದೊಂದೇ ಘಟಕವನ್ನು ನೆಚ್ಚಿಕೊಂಡಿವೆ. ಉದ್ದದ ಸರತಿ ಸಾಲಿನಲ್ಲಿ ಗಂಟೆಗಟ್ಟಲೇ ನಿಂತು ಶುದ್ದ ನೀರು ತರುವ ಅನಿವಾರ್ಯತೆ ಜನರದ್ದು. ಆದರೆ ಈ ಘಟಕದಲ್ಲಿ ನೀರು ದೊರೆಯದೇ ಪಕ್ಕದ ಗ್ರಾಮಕ್ಕೆ ತೆರಳಿ ನೀರನ್ನು ತಂದು ಕುಡಿಯುತ್ತಿದ್ದೇವೆ ಎನ್ನುತ್ತಾರೆ ಊರಿನ ಗ್ರಾಮಸ್ಥರು.

ಗ್ರಾಮಕ್ಕೆ ನೀರು ಪೂರೈಕೆಗೆ ಗ್ರಾಮ ಪಂಚಾಯತ್ ವತಿಯಿಂದ ನೀರು ಸರಬರಾಜು ಮಾಡಲಾಗುತ್ತದೆ. ನೀರು ಶುದ್ದೀಕರಣಗೊಳಿಸುವ ಫಿಲ್ಟರ್ ಯಂತ್ರ ಆಗಾಗ ಬ್ಲಾಕ್ ಆಗಿ ನಿರ್ವಹಣೆಗೆ ಬರುತ್ತಿತ್ತು. ಈ ಹಿನ್ನೆಲೆಯಲ್ಲಿ ಘಟಕ ಬಂದ್ ಆಗಿದೆ ಎಂದು ಹೇಳಲಾಗುತ್ತಿದೆ. ಫಿಲ್ಟರ್ ಯಂತ್ರ ಕೆಟ್ಟು ವರ್ಷಗಳೇ ಕಳೆದರು  ಗ್ರಾ.ಪಂ ಅಧಿಕಾರಿಗಳು ಮತ್ತು ಹಾಲು ಉತ್ಪಾದಕ ಸಂಘ ಇತ್ತ ಕಡೆ ಗಮನ ಹರಿಸಿಲ್ಲ. ಈ ಘಟಕವನ್ನು ಸರಿ ಮಾಡಿಸದೇ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ನಮ್ಮ ಗ್ರಾಮದಲ್ಲಿ ಶುದ್ದ ಕುಡಿಯುವ ನೀರಿನ ಘಟಕವಿದ್ದರೂ ಟ್ಯಾಂಕರ್ ನೀರು ಕುಡಿಯುತ್ತಿದ್ದೇವೆ. ಉಳ್ಳವರು ಗಾಡಿಗಳಲ್ಲಿ ಪಕ್ಕದ ಊರಿನಿಂದ ತರುತ್ತಾರೆ. ಮಹಿಳೆಯರು ಎಲ್ಲಿ ಹೋಗಬೇಕು ಎಂದು ಗ್ರಾಮಸ್ಥರು ಫಿಲ್ಟರ್‌ ಅನ್ನು ಸರಿಪಡಿಸಿ ಶುದ್ದ ನೀರನ್ನು ಕುಡಿಯುವ ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ.

ತಾಲ್ಲೂಕು ಆಡಳಿತ ಸಾರ್ವಜನಿಕರ ಆರೋಗ್ಯದ ಬಗ್ಗೆ ನಿಗಾ ವಹಿಸಿದ್ದು ಇಂತಾ ಟ್ಯಾಂಕರ್ ನೀರನ್ನು ಕುಡಿದು ಆರೋಗ್ಯದಲ್ಲಿ ಏರು ಪೇರಾಗುವ ಮುನ್ನ ಸಂಬಂಧಪಟ್ಟವರು ಶೀಘ್ರವೇ ಈ ಘಟಕ ಮರು ಚಾಲನೆಗೆ ಕ್ರಮ ಕೈಗೊಳ್ಳುತ್ತಾ ಎಂದು ಕಾದು ನೋಡಬೇಕಿದೆ. ಒಟ್ಟಾರೆ ಗ್ರಾ.ಪಂ ಮತ್ತು ಹಾಲು ಉತ್ಪಾದಕ ಸಂಘದ ನಡುವೆ ಶುದ್ದ ಕುಡಿಯುವ ನೀರಿನ ಘಟಕವೊಂದು ತುಕ್ಕು ಹಿಡಿಯುತ್ತಿದ್ದರು ಮತ ಪಡೆದ ಜನ ಪ್ರತಿನಿಧಿಗಳು ಮಾತ್ರ ಐದು ವರ್ಷದ ಅಧಿಕಾರ ನಮ್ಮದೆ ಚುನಾವಣೆ ಹತ್ತಿರ ಬಂದಾಗ ನೋಡುವ ಎಂಬ ಮನೋಭಾವದಲ್ಲಿ ತೇಲುತ್ತಿರೋದು ವಿಪರ್ಯಾಸ.

 

Author:

...
Editor

ManyaSoft Admin

Ads in Post
share
No Reviews