ಉತ್ತರ ಕನ್ನಡ : ಭೀಕರ ಅಪಘಾತ ಒಂದೇ ಕುಟುಂಬದ ಮೂವರು ಸಾವು

ಕಾರು ಹಾಗೂ ಲಾರಿ ಮಧ್ಯೆ ಅಪಘಾತ ಸಂಭವಿಸಿರುವುದು.
ಕಾರು ಹಾಗೂ ಲಾರಿ ಮಧ್ಯೆ ಅಪಘಾತ ಸಂಭವಿಸಿರುವುದು.
ಉತ್ತರ ಕನ್ನಡ

ಉತ್ತರ ಕನ್ನಡ:

ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಅರಬೈಲ್‌ ಘಟ್ಟದಲ್ಲಿ ನಡೆದಿದೆ.

ಮೃತ ಕುಟುಂಬ ಕೊಪ್ಪಳದಿಂದ ಪ್ರವಾಸಕ್ಕೆಂದು ಅಂಕೋಲಾ ಕಡೆಗೆ ಹೊರಟಿತ್ತು. ಆದರೆ ದುರದೃಷ್ಟವಶಾತ್‌ ಅರಬೈಲ್‌ ಘಟ್ಟ ಬಳಿ ಲಾರಿಯೊಂದು ಓವರ್‌ ಟೇಕ್‌ ಮಾಡುವ ಭರದಲ್ಲಿ ಎದುರಿಗಿನ ಕಾರಿಗೆ ಗುದ್ದಿದೆ. ಲಾರಿ ಗುದ್ದಿದ ರಭಸಕ್ಕೆ ಕಾರು ನುಜ್ಜಗುಜ್ಜಾಗಿದೆ. ಘಟನೆಯಲ್ಲಿ ಪತಿ, ಪತ್ನಿ ಹಾಗೂ ಮಗು ಸಹ ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ಮೂವರ ಪೈಕಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಪತಿ ಆರ್‌ ವೆಂಕಟೇಶ್‌, ಪತ್ನಿ ಚೈತ್ರಾ ಹಾಗೂ 7 ತಿಂಗಳ ಚಿಕ್ಕ ಮಗು ಶ್ರೀಹಾನ್‌ ಮೃತ ಪಟ್ಟಿದ್ದಾರೆ.

ಕಾರಿನಲ್ಲಿದ್ದ ಮೃತ ವೆಂಕಟೇಶನ ಸಹೋದರ ಶ್ರೀಕಾಂತ ರೆಡ್ಡಿಗೂ ಸಹ ಎರಡು ಕಾಲುಗಳಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ವೇಗವಾಗಿ ಕಾರಿಗೆ ಗುದ್ದಿದ ಲಾರಿ ಚಾಲಕ ಪ್ರಶಾಂತ ಕುಂಬಾರ ವಿಜಯಪುರ ಮೂಲದವನಾಗಿದ್ದು, ಲಾರಿ ಚಾಲಕನ ವಿರುದ್ಧ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Author:

...
Editor

ManyaSoft Admin

Ads in Post
share
No Reviews