ಉಕ್ರೇನ್‌ ರಷ್ಯಾ ನಡುವಿನ ಯುದ್ದಕ್ಕೆ 3 ವರ್ಷ | ಡ್ರೋಣ್‌ ದಾಳಿ ಮಾಡಿದ ರಷ್ಯಾ

ರಷ್ಯಾ & ಉಕ್ರೇನ್ ನಡುವಿನ ಯುದ್ಧಕ್ಕೆ 3 ವರ್ಷ ತುಂಬಿದೆ. ಹಾಗೇ 4ನೇ ವರ್ಷಕ್ಕೆ ಎಂಟ್ರಿ ಕೊಟ್ಟಿರುವ ರಷ್ಯಾ & ಉಕ್ರೇನ್ ಯುದ್ಧ ಇನ್ನಷ್ಟು ಭಯ ಸೃಷ್ಟಿ ಮಾಡುತ್ತಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಾವು ಅಧಿಕಾರಕ್ಕೆ ಬಂದ 24 ಗಂಟೆಯ ಒಳಗೆ ಯುದ್ಧ ನಿಲ್ಲಿಸುವ ಚಾಲೆಂಜ್ ಮಾಡಿದ್ದರು.

ಡೊನಾಲ್ಡ್ ಟ್ರಂಪ್ ಅಮೆರಿಕದ ಅಧಿಕಾರ ವಹಿಸಿಕೊಂಡು 1 ತಿಂಗಳು ಕಳೆದರೂ ಯುದ್ಧಕ್ಕೆ ಬ್ರೇಕ್ ಬಿದ್ದಿಲ್ಲ. ಬದಲಾಗಿ ರಷ್ಯಾ ಇದೀಗ ಇನ್ನಷ್ಟು ಜೋರಾಗಿ ದಾಳಿ ಆರಂಭ ಮಾಡಿದೆ. ಉಕ್ರೇನ್ ವಿರುದ್ಧ ರಷ್ಯಾ ಸೇನೆ ಮತ್ತಷ್ಟು ಉಗ್ರವಾಗಿ ಡ್ರೋಣ್ ದಾಳಿ ಆರಂಭ ಮಾಡಿದೆ ಎಂದು ಉಕ್ರೇನ್ ಆರೋಪ ಮಾಡಿದೆ. ಉಕ್ರೇನ್ ರಾಜಧಾನಿ ಕೀವ್ ದಾಳಿಯಲ್ಲಿ ನಲುಗಿ ಹೋಗಿದ್ದು, ಕೀವ್ ಸಿಟಿಯ ಹಲವು ಪ್ರದೇಶಗಳು ರಷ್ಯಾ ಡ್ರೋನ್ ದಾಳಿಯಲ್ಲಿ ನಲುಗಿ ಹೋಗಿವೆ. ಯುರೋಪ್ ನೆಮ್ಮದಿಯನ್ನು ಕೆಡಿಸಿರುವ ರಷ್ಯಾ & ಉಕ್ರೇನ್ ಯುದ್ಧ ಇನ್ನಷ್ಟು ಹೆಚ್ಚಾಗುತ್ತಿದೆ.

ರಷ್ಯಾ ತನ್ನ ಬಳಿ ಇರುವ ಭಯಾನಕ ಅಸ್ತ್ರಗಳನ್ನು ಬಳಸಿ ದಾಳಿಯನ್ನು ನಡೆಸುತ್ತಿದ್ದು, ಪ್ರತಿಯೊಂದು ದಿನವೂ ಉಕ್ರೇನ್ ಜನರಿಗೆ ನರಕ ದರ್ಶನ ತೋರಿಸುತ್ತಿದೆ. ರಷ್ಯಾ ಸೇನೆಯು ಈಗಾಗಲೇ ಉಕ್ರೇನ್ ದೇಶದ ಪೂರ್ವ ಭಾಗದಲ್ಲಿ ಬಹುತೇಕ ಪ್ರದೇಶಗಳನ್ನು ವಶಕ್ಕೆ ಪಡೆದಿದ್ದು, ಉಕ್ರೇನ್ ಸೇನೆ ಇದೀಗ ತನ್ನ ರಾಜಧಾನಿ ಉಳಿಸಿಕೊಳ್ಳಲು ಹೋರಾಡುತ್ತಿದೆ. ಈ ಸಮಯದಲ್ಲೇ ರಷ್ಯಾ ಸೇನೆ ತನ್ನ ಬಳಿ ಇರುವ ಡ್ರೋನ್ ಬಳಸಿ ದಾಳಿ ಮಾಡುತ್ತಿದೆ.

 


 

Author:

...
Editor

ManyaSoft Admin

share
No Reviews